ಚಾಮರಾಜನಗರ : ಲಾಕ್ಡೌನ್ ಮೊದಲ ದಿನವಾದ ನಿನ್ನೆ ಚಾಮರಾಜನಗರ ಜಿಲ್ಲಾದ್ಯಂತ ಅನಗತ್ಯವಾಗಿ ರಸ್ತೆಗಿಳಿದ ಒಟ್ಟು 201 ಬೈಕನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಚಾಮರಾಜನಗರದಲ್ಲಿ 201 ಬೈಕ್ ಜಪ್ತಿ ಜಪ್ತಿ ಮಾಡಿರುವ ಬೈಕ್ಗಳನ್ನು ಲಾಕ್ಡೌನ್ ಮುಗಿಯುವ ತನಕವೂ ಕೊಡಬೇಡಿ ಎಂದು ಸಚಿವ ಸುರೇಶ್ ಕುಮಾರ್ ತಾಕೀತು ಮಾಡಿದ್ದು, ಯಾವುದೇ ಮುಲಾಜಿಲ್ಲದೆ ಲಾಕ್ಡೌನ್ ಅನುಷ್ಠಾನಗೊಳಿಸಿ ಎಂದು ಎಸ್ಪಿಗೆ ಖಡಕ್ ಸೂಚನೆ ಕೊಟ್ಟಿದ್ದಾರೆ.
ಕೊಳ್ಳೇಗಾಲದಲ್ಲಿ ಲಾಕ್ಡೌನ್ ನಿಯಮ ಉಲಂಘಿಸಿದವರಿಗೆ ಲಾಠಿ ರುಚಿ
ಕೊರೊನಾ ಪ್ರಕರಣ ರಾಜ್ಯಾದ್ಯಂತ ಹೆಚ್ಚಾಗುತ್ತಿದ್ದು, ನಿಯಂತ್ರಣಕ್ಕಾಗಿ ಸರ್ಕಾರ ಕಟ್ಟುನಿಟ್ಟಿನ ಲಾಕ್ ಡೌನ್ ಜಾರಿಗೊಳಿಸಿದೆ. ಈ ಸಂಬಂಧ ಜಿಲ್ಲೆಯ ವರಿಷ್ಠಾಧಿಕಾರಿಗಳು ಅಗತ್ಯ ವಸ್ತುಗಳ ಖರೀದಿಗೆ ಕಾಲ್ನಡಿಗೆಯಲ್ಲಿಯೇ ಜನರು ಬರಬೇಕು. ಆರೋಗ್ಯ ತುರ್ತು ಪರಿಸ್ಥಿತಿ ಇದ್ದಾರೆ ವಾಹನ ಬಳಸಬೇಕು ಎಂದು ಸೂಚನೆ ನೀಡಿದ್ದಾರೆ.
ಚಾಮರಾಜನಗರದಲ್ಲಿ 201 ಬೈಕ್ ಜಪ್ತಿ ಕೊಳ್ಳೇಗಾಲ ನಗರದಲ್ಲಿ ಲಾಕ್ಡೌನ್ನ ಮೊದಲ ದಿನಕ್ಕೆ ಸಖತ್ ರೆಸ್ಪಾನ್ಸ್ ಸಿಕ್ಕಿದ್ದು, ಕೊರೊನ ಎರಡನೇ ಅಲೆಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಕಟ್ಟುನಿಟ್ಟಾಗಿ ಕಾರ್ಯನಿರ್ವಹಿಸದ ಪೊಲೀಸರು ಬೆಳ್ಳಂಬೆಳ್ಳಗೆ ರಸ್ತೆಗಿಳಿದು ದಂಡ ಹಾಗೂ ಲಾಟಿಯ ರುಚಿ ತೋರಿಸಿದ್ದಾರೆ.
ಕೊರೊನಾಕ್ಕೆ ಬಲಿಯಾದ ಗ್ರಾ.ಪಂ ಅಧ್ಯಕ್ಷನ ಮನೆಗೆ ಶಾಸಕ ಭೇಟಿ
ಕೊರೊನಾದಿಂದ ಸಾವನ್ನಪ್ಪಿದ್ದ ಇಲ್ಲಿನ ಕುಂತೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹದೇವ ಪ್ರಸಾದ್ ಮನೆಗೆ ಶಾಸಕ ಎನ್.ಮಹೇಶ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ್ದು ಕೈಲಾದ ಹಣ ಸಹಾಯ ಮಾಡಿದ್ದಾರೆ.
ಮೃತ ಗ್ರಾ.ಪಂ. ಅಧ್ಯಕ್ಷನ ಮನೆಗೆ ಭೇಟಿ ನೀಡಿದ ಸಚಿವ ತಾಲೂಕಿನ ಮಲ್ಲಹಳ್ಳಿ ಗ್ರಾಮದ ನಿವಾಸಿಯಾಗಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹದೇವ ಪ್ರಸಾದ್ ಮೇ.8 ರಂದು ಕೊರೊನಾ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು. ಈ ಹಿನ್ನಲೆ ಶಾಸಕ ಎನ್.ಮಹೇಶ್ ಮೃತರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.