ಚಾಮರಾಜನಗರ:ಅನಾರೋಗ್ಯದಿಂದ ಸಾಕಾನೆಯೊಂದು ಮೃತಪಟ್ಟಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ರಾಂಪುರ ಆನೆ ಶಿಬಿರದಲ್ಲಿ ನಡೆದಿದೆ. ಗಣೇಶ (20) ಎಂಬ ಗಂಡಾನೆ ಮೃತಪಟ್ಟಿದೆ.
ಒಂದು ವಾರದ ಹಿಂದೆ ಗಂಟಲಿನ ಅನ್ನನಾಳದ ತೊಂದರೆಯಿಂದ ಇದು ಬಳಲುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾಗಿದೆ. ಕಲ್ಕರೆ ವಲಯದ ರಾಂಪುರ ಆನೆ ಶಿಬಿರದಲ್ಲಿ ಆನೆಗೆ ಪ್ರಥಮ ಚಿಕಿತ್ಸೆ ನೀಡಲಾಗಿತ್ತು. ಬಳಿಕ ರಾಂಪುರ ಆನೆ ಶಿಬಿರದಿಂದ ಬಂಡೀಪುರ ಕ್ಯಾಂಪಸ್‍ಗೆ ಕರೆತರಲಾಗಿತ್ತು.