ಚಾಮರಾಜನಗರ: ಇಂದು ಹೊಸದಾಗಿ 20 ಕೋವಿಡ್ ಪಾಸಿಟಿವ್ ಪ್ರಕರಣ ಪತ್ತೆಯಾಗುವ ಮೂಲಕ ಜಿಲ್ಲೆಯ ಸೋಂಕಿತರ ಸಂಖ್ಯೆ 475ಕ್ಕೆ ಏರಿಕೆಯಾಗಿದೆ.
ಚಾಮರಾಜನಗರದಲ್ಲಿ 20 ಮಂದಿಗೆ ಸೋಂಕು ದೃಢ...19 ಮಂದಿ ಗುಣಮುಖ - Chamrajnagara corona news
ಜಿಲ್ಲೆಯಲ್ಲಿಂದು 20 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ ಮತ್ತು 19 ಜನರು ಸೋಂಕಿನಿಂದ ಗುಣಮುಖರಾಗಿ ಮನೆ ಸೇರಿದ್ದಾರೆ.
![ಚಾಮರಾಜನಗರದಲ್ಲಿ 20 ಮಂದಿಗೆ ಸೋಂಕು ದೃಢ...19 ಮಂದಿ ಗುಣಮುಖ Chamrajnagara corona case](https://etvbharatimages.akamaized.net/etvbharat/prod-images/768-512-07:48:13:1595686693-kn-cnr-03-covid-count-av-7202614-25072020194719-2507f-1595686639-628.jpg)
Chamrajnagara corona case
ಇಂದು ಪತ್ತೆಯಾದ 20 ಪ್ರಕರಣಗಳಲ್ಲಿ 10 ಕಂಟೈನ್ಮೆಂಟ್ ವಲಯದ್ದಾಗಿದ್ದು, ಐವರು ಮೈಸೂರಿನ ಸಂಪರ್ಕ ಹೊಂದಿದ್ದಾರೆ. ಉಳಿದ ಐವರ ಸಂಪರ್ಕ ಪತ್ತೆಹಚ್ಚಬೇಕಿದೆ. ಸೋಂಕಿತರಲ್ಲಿ 14 ವರ್ಷದ ಇಬ್ಬರು ಮಕ್ಕಳು ಸೇರಿದ್ದಾರೆ.
19 ಮಂದಿ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿ, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್ ಪರೀಕ್ಷೆಗಳ ಸಂಖ್ಯೆ 19 ಸಾವಿರ ದಾಟಿದ್ದು, ಇಂದು ಒಂದೇ ದಿನ 787 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದೆ. ಅಲ್ಲದೇ, 406 ಮಂದಿ ಸಂಪರ್ಕಿತರ ಮೇಲೂ ನಿಗಾ ಇಡಲಾಗಿದೆ.