ಗುಂಡ್ಲುಪೇಟೆ:ಜಾನುವಾರಗಳನ್ನು ಘಾಸಿಗೊಳಿಸಿ ಜನರಲ್ಲಿ ಜೀವಭಯ ಹುಟ್ಟಿಸಿದ್ದ ಚಿರತೆಯನ್ನು ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ಸೆರೆ ಹಿಡಿಯಲಾಗಿದೆ.
ಗುಂಡ್ಲುಪೇಟೆಯಲ್ಲಿ ಬೋನಿಗೆ ಬಿದ್ದ 2 ವರ್ಷದ ಗಂಡು ಚಿರತೆ - leopard captured in Gundlupeta
ಗುಂಡ್ಲುಪೇಟೆ ಜನರಲ್ಲಿ ಜೀವಭಯ ಹುಟ್ಟಿಸಿದ್ದ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ಗುಂಡ್ಲುಪೇಟೆಯಲ್ಲಿ 2 ವರ್ಷದ ಗಂಡು ಚಿರತೆ ಸೆರೆ
ಚಿರತೆಯ ಉಪಟಳದಿಂದ ಬೇಸತ್ತ ಗ್ರಾಮಸ್ಥರು ಚಿರತೆಯನ್ನು ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಯ ಮೇಲೆ ಒತ್ತಡ ಹೇರಿದ್ದರು. ಅದರಂತೆ ಎರಡು ದಿನಗಳ ಹಿಂದೆ ಇಲಾಖೆಯ ಸಿಬ್ಬಂದಿ ಚಿರತೆ ಸೆರೆಗೆ ಬೋನು ಇಟ್ಟಿದ್ದರು. ಇಂದು ಬೆಳಗ್ಗೆ 5ರ ಸುಮಾರಿಗೆ 2 ವರ್ಷದ ಗಂಡು ಚಿರತೆ ಬೋನಿಗೆ ಬಿದ್ದಿದೆ.
ಸೆರೆಯಾದ ಚಿರತೆಯನ್ನು ಬಂಡೀಪುರ ವಲಯದ ಹೊಸಕೆರೆಕಟ್ಟೆ ಬಳಿ ಬಿಡಲಾಗಿದೆ ಎಂದು ಅರಣ್ಯಾಧಿಕಾರಿ ಲೋಕೇಶ್ ತಿಳಿಸಿದರು. ಕಳೆದ ವಾರ ಒಂದು ಹೆಣ್ಣು ಚಿರತೆಯನ್ನು ಇದೇ ಸ್ಥಳದಲ್ಲಿ ಸೆರೆ ಹಿಡಿದು ಮೂಲೆಹೊಳೆ ಪ್ರದೇಶದಲ್ಲಿ ಬಿಡಲಾಗಿತ್ತು.