ಕರ್ನಾಟಕ

karnataka

ETV Bharat / state

ಚಾಮರಾಜನಗರದಲ್ಲಿ ಹುಲಿ ಉಗುರು ಮಾರಾಟ ಯತ್ನ: 3.5 ಲಕ್ಷ ಮೌಲ್ಯದ 8 ಉಗುರುಗಳು ವಶಕ್ಕೆ - ಈಟಿವಿ ಭಾರತ್ ಕನ್ನಡ

ಹುಲಿ ಉಗುರು ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿ, 8 ಹುಲಿ ಉರುಗುಗಳನ್ನು ವಶ ಪಡಿಸಿಕೊಳ್ಳಲಾಗಿದೆ.

ಹುಲಿ ಉಗುರು ಮಾರಾಟ ಯತ್ನ
ಹುಲಿ ಉಗುರು ಮಾರಾಟ ಯತ್ನ

By

Published : Aug 18, 2022, 7:50 AM IST

ಚಾಮರಾಜನಗರ: ಹುಲಿ ಉಗುರು ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ಬಂಧಿಸಿರುವ ಘಟನೆ ಚಾಮರಾಜನಗರದ ಡಾ.ಬಿ‌‌.ಆರ್.ಅಂಬೇಡ್ಕರ್ ಭವನ ರಸ್ತೆಯಲ್ಲಿ ನಡೆದಿದೆ. ಚಾಮರಾಜನಗರದಲ್ಲಿ ಮೆಕಾನಿಕ್ ಕೆಲಸ ಮಾಡಿಕೊಂಡಿದ್ದ ಯಾಸಿರ್ ಅರಾಫತ್(19) ಹಾಗೂ ಫರಾಹದ್(33) ಬಂಧಿತ ಆರೋಪಿಗಳು‌.

ಹುಲಿ ಉಗುರುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಚಾಮರಾಜನಗರ ಸಿಇಎನ್ ಠಾಣೆ ಪಿಐ ಮಹಾದೇವಶೆಟ್ಟಿ ನೇತೃತ್ವದ ತಂಡ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದೆ. ಬಂಧಿತರಿಂದ 3.5 ಲಕ್ಷ ಮೌಲ್ಯದ 8 ಹುಲಿ ಉಗುರು ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಹುಲಿ ಉಗುರು ಮಾರಾಟ ಯತ್ನ

(ಇದನ್ನೂ ಓದಿ: ಮನುಷ್ಯನಂತೆ ಯೋಚಿಸುವ, ಹುಲಿ ಜತೆ ಸೆಣಸುವ ಸಾಮರ್ಥ್ಯದ ಧೈರ್ಯಶಾಲಿ ತರಕರಡಿ ಪತ್ತೆ)

ABOUT THE AUTHOR

...view details