ಕರ್ನಾಟಕ

karnataka

ETV Bharat / state

ಮಹದೇಶ್ವರ ಬೆಟ್ಟದ ಹುಂಡಿಗೆ ಬಂತು ಇಷ್ಟು ಕಾಣಿಕೆ: 54 ದಿನದಲ್ಲಿ ₹ 2.21 ಕೋಟಿ ಸಂಗ್ರಹ - ಮಲೆಮಹದೇಶ್ವರ ಬೆಟ್ಟದಲ್ಲಿ ಹುಂಡಿ ಹಣ ಎಣಿಕೆ ಸುದ್ದಿ

ಇಂದು ಚಾಮರಾಜನಗರ ಜಿಲ್ಲೆಯ ಮಹದೇಶ್ವರ ಬೆಟ್ಟದ ಹುಂಡಿ ಹಣ ಎಣಿಕೆ ಕಾರ್ಯ ನಡೆದಿದ್ದು 54 ದಿನದಲ್ಲಿ ಒಟ್ಟು ₹ 2.21 ಕೋಟಿ ಸಂಗ್ರಹವಾಗಿದೆ.

2.21 crore hundi collection in mahadeshwara temple within 54 days
ಹುಂಡಿ ಹಣ ಎಣಿಕೆ ಕಾರ್ಯ

By

Published : Nov 13, 2020, 10:52 AM IST

ಚಾಮರಾಜನಗರ: ಹೆಚ್ಚು ಆದಾಯ ಹೊಂದುವ ದೇಗುಲಗಳಲ್ಲಿ ಒಂದಾದ ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಶುಕ್ರವಾರ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ₹ 2 ಕೋಟಿಗೂ ಹೆಚ್ಚು ಕಾಣಿಕೆ ಹಣ ಸಂಗ್ರಹವಾಗಿದೆ.

ಹುಂಡಿ ಹಣ ಎಣಿಕೆ ಕಾರ್ಯ
54 ದಿನಗಳ ಬಳಿಕ ನಡೆದ ಹುಂಡಿ ಎಣಿಕೆಯಲ್ಲಿ ಒಟ್ಟು 2,21,32,439 ಸಂಗ್ರಹವಾಗಿದೆ. 40 ಗ್ರಾಂ ಚಿನ್ನ ಹಾಗೂ 1.667 ಕೆಜಿ ಬೆಳ್ಳಿಯನ್ಬು ಕಾಣಿಕೆ ರೂಪದಲ್ಲಿ ಭಕ್ತರು ಅರ್ಪಿಸಿದ್ದಾರೆ. ಇನ್ನು ಇದೇ 25 ಹಾಗೂ 26 ರಂದು ಮಲೆಮಹದೇಶ್ವರ ಬೆಟ್ಟಕ್ಕೆ ಸಿಎಂ ಬಿ.ಎಸ್‌.ಯಡಿಯೂರಪ್ಪ ಭೇಟಿ ನೀಡಲಿದ್ದು, ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ.

ABOUT THE AUTHOR

...view details