ಕರ್ನಾಟಕ

karnataka

ETV Bharat / state

ಚಾಮರಾಜನಗರದಲ್ಲಿ 52 ಕೋವಿಡ್ ಪಾಸಿಟಿವ್, ಇಬ್ಬರು ಬಲಿ - Chamarajangar coronavirus news

ಇಂದು ಪತ್ತೆಯಾದ ಸೋಂಕಿತರಲ್ಲಿ 5 ವರ್ಷ, 16, 13,15, 13 ವರ್ಷದ ಮಕ್ಕಳಿದ್ದು 60 ವರ್ಷ ಮೇಲ್ಪಟ್ಟವರು‌ 5 ಮಂದಿ ಇದ್ದಾರೆ. ‌ಇನ್ನು, ಬಿಡುಗಡೆಯಾದವರಲ್ಲಿ 1 ವರ್ಷದ ಮಗುವೂ ಇದೆ.

ಚಾಮರಾಜನಗರದಲ್ಲಿ 52 ಕೋವಿಡ್ ಪಾಸಿಟಿವ್, ಇಬ್ಬರು ಬಲಿ
ಚಾಮರಾಜನಗರದಲ್ಲಿ 52 ಕೋವಿಡ್ ಪಾಸಿಟಿವ್, ಇಬ್ಬರು ಬಲಿ

By

Published : Aug 3, 2020, 7:10 PM IST

ಚಾಮರಾಜನಗರ: ಇಂದು ಜಿಲ್ಲೆಯಲ್ಲಿ ಬರೋಬ್ಬರಿ 52 ಕೋವಿಡ್ ಪಾಸಿಟಿವ್ ಕೇಸ್ ಪತ್ತೆಯಾಗುವ ಮೂಲಕ ಸೋಂಕಿತರ ಸಂಖ್ಯೆ 797 ಕ್ಕೆ ಏರಿಕೆಯಾಗಿದೆ.‌ ಮಹಾಮಾರಿಗೆ ಇಂದು ಕೂಡ ಇಬ್ಬರು ಬಲಿಯಾಗಿದ್ದಾರೆ.

ಇಂದು 23 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 265 ಇದೆ. ‌ಐಸಿಯುನಲ್ಲಿ ದಾಖಲಾಗಿರುವವರ ಸಂಖ್ಯೆ 12 ಕ್ಕೆ ಏರಿಕೆಯಾಗಿದೆ. ಇಂದಿನ‌ ಸೋಂಕಿತರಲ್ಲಿ ಚಾಮರಾಜನಗರ 14, ಕೊಳ್ಳೇಗಾಲ 13, ಹನೂರು‌ 03, ಗುಂಡ್ಲುಪೇಟೆ 13, ಯಳಂದೂರು ತಾಲೂಕಿನ 09 ಮಂದಿ ಇದ್ದಾರೆ.

ಚಾಮರಾಜನಗರದ ಕೋವಿಡ್​ ವರದಿ

ಕೊಳ್ಳೇಗಾಲದ 57 ವರ್ಷದ ಮಹಿಳೆಯೊಬ್ಬರು ಹಾಗೂ ಚಾಮರಾಜನಗರದ 65 ವರ್ಷದ ವ್ಯಕ್ತಿಯೊಬ್ಬರು ಇಂದು ಕೊರೊನಾಗೆ ಬಲಿಯಾಗಿದ್ದಾರೆ. ಮೃತರ ಅಂತ್ಯಸಂಸ್ಕಾರವನ್ನು ಪಿಎಫ್ಐ ಕಾರ್ಯಕರ್ತರು ಗುಂಡ್ಲುಪೇಟೆ ರಸ್ತೆಯಲ್ಲಿನ ಮುಸ್ಲಿಂ ಖಬರಸ್ತಾನದಲ್ಲಿ ನೆರವೇರಿಸಿದ್ದಾರೆ.

ಇಂದು ಪತ್ತೆಯಾದ ಸೋಂಕಿತರಲ್ಲಿ 5 ವರ್ಷ, 16, 13,15, 13 ವರ್ಷದ ಮಕ್ಕಳಿದ್ದು 60 ವರ್ಷ ಮೇಲ್ಪಟ್ಟವರು‌ 5 ಮಂದಿ ಇದ್ದಾರೆ. ‌ಇನ್ನು, ಬಿಡುಗಡೆಯಾದವರಲ್ಲಿ 1 ವರ್ಷದ ಮಗುವೂ ಇದೆ.

ABOUT THE AUTHOR

...view details