ಕರ್ನಾಟಕ

karnataka

ETV Bharat / state

ಅಪಘಾತದಲ್ಲಿ ಮೃತಪಟ್ಟ ಪ್ರೇಮಿ: ಮನನೊಂದು ನೇಣಿಗೆ ಶರಣಾದ ಯುವತಿ...! - girl suicide after lover died an accident

ಗ್ರಾಮದ ಪೂಜಾ(19) ಮೃತಪಟ್ಟ ದುರ್ದೈವಿ. ‌ಚಾಮರಾಜನಗರ ತಾಲೂಕಿನ ಚಂದುಕಟ್ಟೆಮೋಳೆ ಗ್ರಾಮದ ಮಹೇಶ್(23) ಹಾಗೂ ಪೂಜಾ ಇಬ್ಬರು ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಬುಧವಾರ ರಾತ್ರಿ ಅಪಘಾತದಲ್ಲಿ ಮಹೇಶ್ ಮೃತಪಟ್ಟ‌ ವಿಚಾರ ತಿಳಿದು ಇಂದು ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ನೇಣಿಗೆ ಶರಣಾಗಿದ್ದಾಳೆ ಎನ್ನಲಾಗಿದೆ.

girl suicide in chamarajanagara
ಪ್ರಿಯತಮನ ಸಾವಿನಿಂದ ನೊಂದು ಯುವತಿ ಆತ್ಮಹತ್ಯೆ

By

Published : Sep 17, 2021, 4:06 AM IST

ಚಾಮರಾಜನಗರ: ಪ್ರೇಮಿಸುತ್ತಿದ್ದ ಯುವಕ ಅಪಘಾತದಲ್ಲಿ ಮೃತಪಟ್ಟ ವಿಚಾರ ತಿಳಿದು ಯುವತಿ ನೇಣಿಗೆ ಶರಣಾಗಿರುವ ಘಟನೆ ಚಾಮರಾಜನಗರ ತಾಲೂಕಿನ ಬಂಡಿಗೆರೆ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಪೂಜಾ(19) ಮೃತಪಟ್ಟ ದುರ್ದೈವಿ. ‌ಚಾಮರಾಜನಗರ ತಾಲೂಕಿನ ಚಂದುಕಟ್ಟೆಮೋಳೆ ಗ್ರಾಮದ ಮಹೇಶ್(23) ಹಾಗೂ ಪೂಜಾ ಇಬ್ಬರು ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಬುಧವಾರ ರಾತ್ರಿ ಅಪಘಾತದಲ್ಲಿ ಮಹೇಶ್ ಮೃತಪಟ್ಟ‌ ವಿಚಾರ ತಿಳಿದು ಇಂದು ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ನೇಣಿಗೆ ಶರಣಾಗಿದ್ದಾಳೆ ಎನ್ನಲಾಗಿದೆ.

ಯುವತಿ ಆತ್ಮಹತ್ಯೆ ಸುದ್ದಿ ತಿಳಿದು ಗ್ರಾನಸ್ಥರು, ಇವರಿಬ್ಬರ ಸ್ನೇಹಿತರ ಗುಂಪು ಮರುಗುತ್ತಿದ್ದು ಸಾಮಾಜಿಕ ಜಾಲತಾಣಗಳಲ್ಲಿ "ರೋಮಿಯೋ-ಜೂಲಿಯೆಟ್" ಗೆ ಹೋಲಿಸಿ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ. ‌ಚಾಮರಾಜನಗರ ಪೂರ್ವ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಈ ಸಂಬಂಧ ದೂರು, ಪ್ರಕರಣ ದಾಖಲಾಗಿಲ್ಲ.

ಇದನ್ನು ಓದಿ:ಪೆಟ್ರೋಲ್ ಟ್ಯಾಂಕರ್​​ಗೆ ಬೈಕ್ ಡಿಕ್ಕಿ: ಯುವಕರಿಬ್ಬರ ದುರ್ಮರಣ

ABOUT THE AUTHOR

...view details