ಚಾಮರಾಜನಗರ: ಹಲವು ತಿಂಗಳ ಯೋಜನೆ, ಸಂಭ್ರಮ-ಸಡಗರದ ವಿವಾಹ ಸಮಾರಂಭಕ್ಕೆ ಕೊರೊನಾ ತಣ್ಣೀರು ಎರಚಿದ್ದು, ಲಾಕ್ಡೌನ್ 4.Oನಲ್ಲಿ ವಿವಾಹವಾಗುವವರು 19 ಕಂಡೀಷನ್ಗಳನ್ನು ಪಾಲಿಸಲೇಬೇಕಿದೆ.
ಈ ಹಿಂದೆ ವರನ ಕಡೆಯವರು ಇಲ್ಲವೇ ವಧುವಿನ ಕಡೆಯವರು ಕೆಲವು ಕಂಡೀಷನ್ಸ್ ಹಾಕಿ ಮದುವೆ ಮಾಡಿಕೊಡುತ್ತಿದ್ದುದು ಸಾಮಾನ್ಯವಾಗಿತ್ತು. ಆದರೆ ಕೊರೊನಾ ಕರಿಛಾಯೆಯಿಂದ ಮದುವೆ ಸಮಾರಂಭಕ್ಕೆ ಜಿಲ್ಲಾಡಳಿತ ಬರೋಬ್ಬರಿ 19 ಷರತ್ತುಗಳನ್ನು ವಿಧಿಸಿದ್ದು, ಸಪ್ತಪದಿ ತುಳಿಯಲು ಇದರ ಪಾಲನೆ ಕಡ್ಡಾಯವಾಗಿದೆ.
ಷರತ್ತುಗಳು
1. ವಿವಾಹ ಸಮಾರಂಭಕ್ಕೆ ಜಿಲ್ಲಾಡಳಿತದ ಅನುಮತಿ ಕಡ್ಡಾಯ
2. ಸಮಾರಂಭದಲ್ಲಿ ಭಾಗಿಯಾಗುವವರು ಮಾಸ್ಕ್ ಧರಿಸುವುದು ಕಡ್ಡಾಯ
3. ವಧು-ವರ ಸೇರಿದಂತೆ ಅತಿಥಿಗಳ ಸಂಖ್ಯೆ ಗರಿಷ್ಠ 50 ಮಂದಿ ಮಾತ್ರ ಭಾಗಿಯಾಗಬೇಕು
4. ಎ/ಸಿ ಬಳಸುವಂತಿಲ್ಲ, ಸೂಕ್ತ ಗಾಳಿ- ಬೆಳಕು ಇರಲೇಬೇಕು
5. ಕಂಟೇನ್ಮೆಂಟ್ ವಲಯದ ವ್ಯಕ್ತಿಗಳು ಸಮಾರಂಭದಲ್ಲಿ ಪಾಲ್ಗೊಳ್ಳುವಂತಿಲ್ಲ
6. 65 ವರ್ಷ ಮೇಲ್ಪಟ್ಟವರು, ಗರ್ಭಿಣಿಯರು ಹಾಗೂ 10 ವರ್ಷದ ಮಕ್ಕಳು ಭಾಗವಹಿಸಲು ನಿರ್ಬಂಧ
7. ಸಮಾರಂಭದಲ್ಲಿ ಭಾಗಿಯಾಗುವವರಿಗೆ ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯ
8. ಜ್ವರ, ಶೀತ, ಕೆಮ್ಮು ಇರುವವರು ಭಾಗಿಯಾಗುವಂತಿಲ್ಲ