ಕರ್ನಾಟಕ

karnataka

ETV Bharat / state

ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ₹17.75 ಕೋಟಿ ಬಿಡುಗಡೆ: ಸಂಸದ ಶ್ರೀನಿವಾಸ್​​​ ಪ್ರಸಾದ್ - MLA D.K.Shivakumar

ಶಾಸಕ ಡಿ.ಕೆ.ಶಿವಕುಮಾರ್ ತಿಹಾರ್ ಜೈಲಿನಿಂದ ಬಂದ ನಂತರ ಸಂಬಂಧವಿಲ್ಲದಂತೆ ಮಾತನಾಡುತ್ತಿದ್ದಾರೆ. ಏಸು ಪ್ರತಿಮೆ ನಿರ್ಮಿಸದಿದ್ದರೆ ಏನಾಗಲ್ಲ ಎಂದು ಸಂಸದ ಶ್ರೀನಿವಾಸ್​​ ಪ್ರಸಾದ್​ ಹೇಳಿದರು.

MP V Srinivas Prasad
ಸಂಸದ ಶ್ರೀನಿವಾಸ್​​​ ಪ್ರಸಾದ್

By

Published : Jan 14, 2020, 7:03 AM IST

ಚಾಮರಾಜನಗರ:ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗೆ ಕೇಂದ್ರ ಸರ್ಕಾರದಿಂದ ₹ 12.75 ಕೋಟಿ ಬಿಡುಗಡೆಯಾಗಿದೆ. ಈ ತಿಂಗಳ ಕೊನೆಯಲ್ಲಿ ಟೆಂಡರ್ ಕರೆದು ರಸ್ತೆ ಅಭಿವೃದ್ಧಿಪಡಿಸಲಾಗುವುದು ಎಂದು ಸಂಸದ ವಿ.ಶ್ರೀನಿವಾಸ್​​​ ಪ್ರಸಾದ್ ತಿಳಿಸಿದರು.

ಅನುದಾನ ಬಿಡುಗಡೆಯಾದ ಹಿನ್ನೆಲೆಯಲ್ಲಿ ಗುಣಮಟ್ಟದ ರಸ್ತೆ ನಿರ್ಮಾಣವಾಗಲಿದೆ. ಮಾದಾಪುರ, ವೆಂಕಟಯ್ಯನ ಛತ್ರ, ಇನ್ನಿತರ ಕಡೆ ರಸ್ತೆ ವಿಸ್ತರಣೆ ಕಾರ್ಯ ಪ್ರಗತಿಯಲ್ಲಿದೆ. ಯಾವುದೇ ಅನುದಾನದ ಕೊರತೆ ಇಲ್ಲ. ಎಲ್ಲ ರಸ್ತೆಗಳ ಕಾಮಗಾರಿಗಳು ಶೀಘ್ರವೇ ನಡೆಯಲಿವೆ ಎಂದರು.

ಜಿಲ್ಲೆಯ ಚಾಮುಲ್‌ನಲ್ಲಿ ಹುದ್ದೆಗಳ ನೇಮಕದಲ್ಲಿ ಭ್ರಷ್ಟಾಚಾರ ಹಾಗೂ ಸ್ವಜನ ಪಕ್ಷಪಾತ ನಡೆದಿದೆ. ಈ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಇದೊಂದು ತಲೆ ತಗ್ಗಿಸುವ ಕೆಲಸ. ನೇಮಕಾತಿ ಕ್ರಮಬದ್ದವಾಗಿಲ್ಲ. ವರದಿ ಬಂದ ನಂತರ ಸಿಓಡಿ ತನಿಖೆಗೆ ವರ್ಗಾಹಿಸಲಾಗುವುದು ಎಂದು ಹೇಳಿದರು.

ಬಿಜೆಪಿ ಸರ್ಕಾರದಲ್ಲಿ ಅಭಿವೃದ್ಧಿ ಕಾರ್ಯಗಳು ಜರುತ್ತಿಲ್ಲ ಎಂಬ ಕಾಂಗ್ರೆಸ್ ಟೀಕೆ ಕುರಿತು ಮಾತನಾಡಿ, ಹಂತ ಹಂತವಾಗಿ ಅಭಿವೃದ್ಧಿ ಕಾರ್ಯಕ್ರಮಗಳು ನಡೆಯಲಿವೆ. 14 ತಿಂಗಳು ಮೈತ್ರಿ ಸರ್ಕಾರ ಅಧಿಕಾರದಲ್ಲಿತ್ತು. ಯಾವ ಅಭಿವೃದ್ಧಿ ಮಾಡಿತ್ತು. ಸಮನ್ವಯ ಸಮಿತಿ ಮಾಡಿಕೊಂಡು ಸಿದ್ದರಾಮಯ್ಯ ಅವರನ್ನ ಅಧ್ಯಕ್ಷರಾಗಿ ಮಾಡಿದ್ದರೂ ಸಮನ್ವಯತೆ ಸಾಧಿಸಲಿಲ್ಲ. ಸಮನ್ವಯತೆ ಸಾಧಿಸಿದ್ದರೆ 17 ಶಾಸಕರು ಕಾಂಗ್ರೆಸ್-ಜೆಡಿಎಸ್​ ಬಿಟ್ಟು ಏಕೆ ಬರುತ್ತಿದ್ದರು ಎಂದು ಪ್ರಶ್ನಿಸಿದರು.

ಶಾಸಕ ಡಿ.ಕೆ.ಶಿವಕುಮಾರ್ ತಿಹಾರ್ ಜೈಲಿನಿಂದ ಬಂದ ನಂತರ ಸಂಬಂಧವಿಲ್ಲದಂತೆ ಮಾತನಾಡುತ್ತಿದ್ದಾರೆ. ಏಸು ಪ್ರತಿಮೆ ನಿರ್ಮಿಸದಿದ್ದರೆ ಏನಾಗಲ್ಲ. ಸೇವೆ ಕ್ರೈಸ್ತ ಧರ್ಮದ ಮುಖ್ಯ ಉದ್ದೇಶ. ಸೇವೆ ಮಾಡಬೇಕೆಂದು ಬಯಸುವವರು ಕ್ರೈಸ್ತ ಧರ್ಮದವರು. ಪ್ರತಿಮೆಗಳನ್ನು ಸ್ಥಾಪಿಸಬೇಕು ಎಂಬುದನ್ನು ಬಯಸುವವರು ಕ್ರೈಸ್ತ ಧರ್ಮದವರಲ್ಲ ಎಂದು ಹೇಳಿದರು.

ಡಿಕೆಶಿ ಸಾವಿರಾರು ಕೋಟಿ ಒಡೆಯ ಎಂದು ಘೋಷಿಸಿಕೊಂಡಿದ್ದು, ಗೋಮಾಳ ಜಾಗ ಬಿಟ್ಟು ಬೇರೆಡೆ ಪ್ರಾರ್ಥನ ಮಂದಿರ ಹಾಗೂ ಪ್ರತಿಮೆ ಕಟ್ಟಿಕೊಡಲಿ. ಗೋಮಾಳ ಸರ್ಕಾರದ ಆಸ್ತಿ. ಸರ್ಕಾರದ ಆಸ್ತಿಯಲ್ಲಿ ಪ್ರತಿಮೆ ನಿರ್ಮಿಸಲು ಯಾರಿಗೂ ಹಕ್ಕಿಲ್ಲ ಎಂದರು.

ABOUT THE AUTHOR

...view details