ಚಾಮರಾಜನಗರ: ಕೆಲ ದಿನಗಳಿಂದ ಇಳಿಕೆ ಕಂಡಿದ್ದ ಸಾವಿನ ಪ್ರಮಾಣ ಇಂದು ಮತ್ತೇ ಏರಿಕೆ ಕಂಡಿದ್ದು ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಕಳೆದ 24 ತಾಸಲ್ಲಿ 17 ಮಂದಿ ಮೃತಪಟ್ಟಿದ್ದಾರೆ.
ಮಂಗಳವಾರ ಸಂಜೆ 6 ಗಂಟೆಯಿಂದ ಬುಧವಾರ ಸಂಜೆ 6 ರವರೆಗೆ ಒಟ್ಟು 17 ಮಂದಿ ಅಸುನೀಗಿದ್ದು ಇವರಲ್ಲಿ ಕೋವಿಡ್ಗೆ 10 ಮಂದಿ, 7 ಮಂದಿ ನಾನ್ ಕೋವಿಡ್ ರೋಗಿಗಳು ಮೃತಪಡುವ ಮೂಲಕ ಮತ್ತೇ ಆತಂಕ ಸೃಷ್ಟಿಯಾಗಿದೆ.
ಇನ್ನು, ಇಂದು 208 ಮಂದಿಗೆ ಕೋವಿಡ್ ದೃಢವಾಗಿದ್ದು 163 ಮಂದಿ ಮಹಾಮಾರಿಯಿಂದ ಗುಣಮುಖರಾಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 2835 ಇದ್ದು, ಹೋಂ ಐಸೋಲೇಷನ್ನಲ್ಲಿ 534 ಮಂದಿ ಇದ್ದಾರೆ. 3120 ಮಂದಿ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಮೇಲೆ ಆರೋಗ್ಯ ಇಲಾಖೆ ನಿಗಾ ಇಟ್ಟಿದೆ.
ನಿಲ್ಲದ ಮರಣ ಮೃದಂಗ: ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ 24 ತಾಸಲ್ಲಿ 17 ಮಂದಿ ಸಾವು..! - ಚಾಮರಾಜನಗರದಲ್ಲಿ 17 ಸಾವು
ಮಂಗಳವಾರ ಸಂಜೆ 6 ಗಂಟೆಯಿಂದ ಬುಧವಾರ ಸಂಜೆ 6 ರವರೆಗೆ ಒಟ್ಟು 17 ಮಂದಿ ಅಸುನೀಗಿದ್ದು ಇವರಲ್ಲಿ ಕೋವಿಡ್ಗೆ 10 ಮಂದಿ, 7 ಮಂದಿ ನಾನ್ ಕೋವಿಡ್ ರೋಗಿಗಳು ಮೃತಪಡುವ ಮೂಲಕ ಮತ್ತೇ ಆತಂಕ ಸೃಷ್ಟಿಯಾಗಿದೆ.
![ನಿಲ್ಲದ ಮರಣ ಮೃದಂಗ: ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ 24 ತಾಸಲ್ಲಿ 17 ಮಂದಿ ಸಾವು..! ಚಾಮರಾಜನಗರದಲ್ಲಿ 17 ಸಾವು](https://etvbharatimages.akamaized.net/etvbharat/prod-images/768-512-11995233-783-11995233-1622657851063.jpg)
ಚಾಮರಾಜನಗರದಲ್ಲಿ 17 ಸಾವು