ಕೊಳ್ಳೇಗಾಲ (ಚಾಮರಾಜನಗರ) ತಾಲೂಕಿನ ಮಧುವನಹಳ್ಳಿ ಗ್ರಾಮದ ತಿಲಕ್ ರಾಜ್ - ದೀಪು ದಂಪತಿಯ 15 ದಿನದ ಗಂಡು ಮಗು ಕೊರೊನಾದಿಂದ ಗುಣಮುಖವಾಗಿದೆ. ಕೋವಿಡ್ ಕೇರ್ ಸೆಂಟರ್ನಿಂದ ಬಿಡುಗಡೆಯಾಗುವ ಮೂಲಕ ಕೊರೊನಾ ಬಗ್ಗೆ ಜಿಲ್ಲೆಯ ಜನರಿಗಿದ್ದ ಆತಂಕವನ್ನು ಬಹುಪಾಲು ಕಡಿಮೆ ಮಾಡಿ ಆತ್ಮಸ್ಥೈರ್ಯ ಹೆಚ್ಚುವಂತೆ ಮಾಡಿದೆ.
ಮೈಸೂರಿನ ಅರಮನೆಯಲ್ಲಿ ಜೂನಿಯರ್ ಅಸಿಸ್ಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಚಾಮರಾಜನಗರ ತಾಲೂಕಿನ ತಿಲಕ್ ರಾಜ್ ಶೀತ, ನಾಲಿಗೆ ರುಚಿ ಗ್ರಹಿಕೆ ಕಳೆದುಕೊಂಡ ಲಕ್ಷಣಗಳನ್ನು ಗಮನಿಸಿ ಜು. 25 ರಂದು ಕೊಳ್ಳೇಗಾಲದ ಕೊರೊನಾ ತಪಾಸಣಾ ಕೇಂದ್ರದಲ್ಲಿ ಟೆಸ್ಟ್ ಮಾಡಿಸಿದ್ದರಿಂದ ಕೊರೊನಾ ಇರುವುದು ದೃಢವಾಗಿತ್ತು. ತಪಾಸಣೆಗೂ ಮುನ್ನ, ತನ್ನ ಹೆಂಡತಿ-ಮಗುವಿನ ಯೋಗಕ್ಷೇಮ ವಿಚಾರಿಸಲು ಕೊಳ್ಳೇಗಾಲದ ಮಧುವನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ್ದರು. ಈ ವೇಳೆ ತಿಲಕ್ ರಾಜ್ಗೆ ಕೊರೊನಾ ಇರುವುದು ಗೊತ್ತಾಗಿದೆ.
ಆರೋಗ್ಯಾಧಿಕಾರಿಗಳು ತಿಲಕ್ ರಾಜ್ ಅವರ ಹೆಂಡತಿ ಮತ್ತು ಮಗುವಿನ ತಪಾಸಣೆ ಮಾಡಿಸಿದಾಗ ಈ ಇಬ್ಬರಲ್ಲೂ ಕೊರೊನಾ ಇದೆ ಎಂದು ತಿಳಿದು ಭಯವಾಯಿತು. ಆದರೆ, ಇನ್ನಿತರ ನಮ್ಮ ಕುಟುಂಬದ ಸದಸ್ಯರಿಗೆ ನೆಗೆಟಿವ್ ಬಂದಿರುವುದು ತಿಳಿಯಿತು ಎಂದು ದೀಪು ಅವರ ತಂದೆ ಬಸವರಾಜು ಶೆಟ್ಟಿ ಈ ಬಗ್ಗೆ 'ಈಟಿವಿ ಭಾರತ'ದ ಜೊತೆ ಮಾತನಾಡುತ್ತಾ ಮಾಹಿತಿ ನೀಡಿದ್ದಾರೆ.
ಮಗು ಜನನವಾದ 15 ದಿನಗಳ ಬಳಿಕ ನನ್ನ ಗಂಡನಿಗೆ ಕೊರೊನಾ ಇರುವುದು ಗೊತ್ತಾಗಿ ಗಾಬರಿಗೊಂಡೆ, ಆರೋಗ್ಯ ಸಿಬ್ಬಂದಿ ನನ್ನ ಜೊತೆ ಮಗುವಿಗೂ ಕೊರೊನಾ ತಪಾಸಣೆ ನಡೆಸಿದ್ದರಿಂದ ಕೊರೊನಾ ನಮ್ಮಿಬ್ಬರಲ್ಲೂ ಇದೆ ಎಂಬುದು ತಿಳಿದು ನನಗೂ ಆತಂಕವಾಯಿತು. ನವಜಾತ ಶಿಶುವಿಗೂ ಬಂತಲ್ಲ ಇದು ಎಂದು ಕಣ್ಣೀರಿಟ್ಟೆ. ನಂತರ ಮೂವರನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಸೇರಿಸಲಾಯಿತು. ಅಲ್ಲಿನ ವಾತಾವಾರಣ ಮತ್ತು ಕೊರೊನಾ ಇರುವ ಮಕ್ಕಳನ್ನು ನೋಡಿ ಸ್ವಲ್ಪ ಮಟ್ಟಿಗೆ ನೆಮ್ಮದಿ ಸಿಕ್ಕಿತು. ನಮಗೂ ಕೊರೊನಾ ಗುಣವಾಗುತ್ತದೆ ಎಂಬ ವಿಶ್ವಾಸ ಮೂಡಿತು. 5 ದಿನಗಳ ಕಾಲ ಚಿಕಿತ್ಸೆ ನೀಡಲಾಯಿತು. ನನಗೆ ಮತ್ತು ಮಗುವಿಗೆ ಯಾವುದೇ ಕೊರೊನಾ ಲಕ್ಷಣ ಇರಲಿಲ್ಲ. ವರದಿ ಮಾತ್ರ ಪಾಸಿಟಿವ್ ಬಂತು. ಗುಣವಾದರೆ ಸಾಕು ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದೆ. 5 ದಿನದ ನಂತರ ಅಲ್ಲಿನ ವೈದ್ಯರು ಗುಣವಾಗಿದ್ದೀರಿ ಎಂದಾಗ ಮನಸ್ಸಿನಲ್ಲಿದ್ದ ಚಿಂತೆ ದೂರವಾಯ್ತು. ಸದ್ಯಕ್ಕೆ 10 ದಿನಗಳ ಹೋಂ ಐಸೋಲೇಷನ್ ಇರಬೇಕೆಂದು ತಿಳಿಸಲಾಗಿತ್ತು. ಇದೀಗ 7 ದಿನ ಮುಗಿದಿದೆ. ಪತಿಯೂ ಕೂಡ ನಿನ್ನೆ ಅಷ್ಟೆ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ದೀಪು ತಿಲಕ್ ಕುಮಾರ್ ವಿವರಿಸಿದ್ದಾರೆ.
ಕೊರೊನಾ ಕಾಮನ್ ಎನಿಸಿತು: