ಚಾಮರಾಜನಗರ: ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಮಲೆಮಹದೇಶ್ವರ ಬೆಟ್ಟದಲ್ಲಿ ಅಮವಾಸ್ಯೆ ಪ್ರಯುಕ್ತ ಮಲೆಮಹದೇಶ್ವರನಿಗೆ ಬೇಡಗಂಪಣ ಸಮುದಾಯದ 108 ಅರ್ಚಕರಿಂದ ಕುಂಭಾಭಿಷೇಕ ನೆರವೇರುವ ಮೂಲಕ ಶ್ರಾವಣ ಮಾಸದ ವಿಶೇಷ ಪೂಜೆ ಸಂಪನ್ನಗೊಂಡಿದೆ.
ಮಾದಪ್ಪನ ಬೆಟ್ಟದಲ್ಲಿ 108 ಅರ್ಚಕರ ಕುಂಭಾಭಿಷೇಕ ಸಂಪನ್ನ 108 ಅರ್ಚಕರು ಕೆಂಪು ಬಣ್ಣದ ಪಂಚೆ ಹಾಗೂ ಶಲ್ಯೆಯನ್ನು ಉಟ್ಟು ದೇವಾಲಯದ ಮಜ್ಜನ ಭಾವಿಯಿಂದ ಹೊರಟು ಚಪ್ಪರ ಮಾಳಿಗೆಯಲ್ಲಿ ದೇವರಿಗೆ ಕುಂಭಾಭೀಷೇಕ ನೆರವೇರಿಸಿದರು.
ಶ್ರಾವಣ ಮಾಸದಿಂದ ಈ ಇಂದಿನ ಅಮವಾಸ್ಯೆಯವರೆಗೆ ಪ್ರತಿ ದಿನ 12 ಕುಂಭಾಭೀಷೇಕದಿಂದ ಪೂಜೆ ಸಲ್ಲಿಸುತ್ತಾ ಬಂದಿರುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ. ಶ್ರಾವಣ ಮಾಸದ ಆರಂಭ ಮತ್ತು ಕೊನೆ ದಿನದಂದು 108 ಕುಂಬಾಭಿಷೇಕ ಹಾಗೂ ವಿಶೇಷ ಪೂಜಾ ನೆರವೇರಿದ್ದು, ಸಾವಿರಾರು ಭಕ್ತಾಧಿಗಳು ಅಮವ್ಯಾಸೆ ಪೂಜಾ ಕಾರ್ಯದಲ್ಲಿ ಭಾಗವಹಿಸಿ, ಪುನೀತರಾದರು.
ಪಂಜಿನ ಸೇವೆ, ಹುಲಿ ವಾಹನ, ರುದ್ರಾಕ್ಷಿ ಮಂಟೋಪತ್ಸವ, ಬಸವ ವಾಹನ, ಸೇರಿದಂತೆ ವಿವಿಧ ಪೂಜಾ ಕಾರ್ಯಗಳಲ್ಲಿ ಭಕ್ತರು ಆರಾಧ್ಯ ದೈವನಿಗೆ ಪೂಜೆ ಸಲ್ಲಿಸಿದರು.