ಚಾಮರಾಜನಗರ: ಶ್ರಾವಣ ಮಾಸದ ಕಡೆಯ ದಿನವಾದ ಇಂದು ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಬೇಡಗಂಪಣ ಅರ್ಚಕರಿಂದ 108 ಕುಂಭೋತ್ಸವ ಸೇವೆ ನಡೆದಿದೆ.
ಮಹದೇಶ್ವರನಿಗೆ 108 ಕುಂಭಾಭಿಷೇಕ: ಶ್ರಾವಣ ಮಾಸದ ವಿಶೇಷ ಪೂಜೆ ಸಂಪನ್ನ
ಶ್ರಾವಣ ಮಾಸದ ಕೊನೆ ದಿನವಾದ ಇಂದು ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರನ ಸನ್ನಿಧಿಯಲ್ಲಿ ಅರ್ಚಕರು ವಿಶಿಷ್ಟ 108 ಕುಂಭೋತ್ಸವ ಸೇವೆ ನಡೆಸಿದ್ದು, ಪೂಜೆ ಸಂಪನ್ನವಾಗಿದೆ.
ಮಹದೇಶ್ವರನಿಗೆ 108 ಕುಂಭಾಭಿಷೇಕ
ಶ್ರೀಕ್ಷೇತ್ರದ ಪ್ರಧಾನ ಆಗಮಿಕರಾದ ಕರವೀರಸ್ವಾಮಿ ನೇತೃತ್ವದಲ್ಲಿ ಬೇಡಗಂಪಣ ಅರ್ಚಕರು ಮಜ್ಜನಬಾವಿಯಿಂದ 108 ಕುಂಭಗಳನ್ನು ಹೊತ್ತು ತಂದು ಹೋಮ ನೆರವೇರಿಸಿ ಸ್ವಾಮಿಗೆ ಅಭಿಷೇಕ ಮಾಡಿದ್ದಾರೆ. ಇದರೊಟ್ಟಿಗೆ, 108 ಎಳನೀರುಗಳಿಂದಲೂ ಅಭಿಷೇಕ ಮಾಡುವ ಮೂಲಕ ಶ್ರಾವಣ ಮಾಸದ ವಿಶೇಷ ಪೂಜೆ ಸಂಪನ್ನವಾಗಿದೆ.
ಮಹದೇಶ್ವರನಿಗೆ ಶ್ರಾವಣ ಮಾಸದ ಮೊದಲ ದಿನ ಹಾಗೂ ಕೊನೆಯ ದಿನ 108 ಕುಂಭಾಭಿಷೇಕ, ಪ್ರತಿದಿನದ ಪ್ರತಿಪೂಜೆಯಲ್ಲಿ ಸಹಸ್ರ ಬಿಲ್ವಾರ್ಚನೆ, ಪ್ರತಿದಿನದ 2 ನೇ ಪೂಜೆಗೆ 12 ಕುಂಭಾಭಿಷೇಕ ನಡೆಸುವುದು ಪಾಲಿಸಿಕೊಂಡು ಬಂದಿರುವ ಸಂಪ್ರದಾಯವಾಗಿದೆ.