ಕರ್ನಾಟಕ

karnataka

By

Published : Nov 7, 2020, 4:12 PM IST

ETV Bharat / state

ಈ ಗ್ರಾಮದಲ್ಲಿ ಮದ್ಯ ಮಾರಿದರೆ 10 ಸಾವಿರ ರೂ. ದಂಡ, ಪತ್ತೆ ಹಚ್ಚಿದರೆ 5 ಸಾವಿರ ರೂ. ಬಹುಮಾನ !

ಅಕ್ರಮ ಮದ್ಯ ಮಾರಾಟ ಮಾಡುವ ಕಿರಾಣಿ ಅಂಗಡಿಯವರಿಗೆ 10 ಸಾವಿರ ರೂ. ದಂಡ, ಮಾರಾಟಕ್ಕೆ ಪ್ರೋತ್ಸಾಹಿಸಿ ಜಗಳ ಮಾಡಿದವರಿಗೆ 5 ಸಾವಿರ ರೂ. ದಂಡ ಹಾಗೂ ಮಾಲು ಸಮೇತ ಅಕ್ರಮ ಮದ್ಯ ಮಾರಾಟವನ್ನು ಪತ್ತೆಹಚ್ಚಿಕೊಟ್ಟವರಿಗೆ 5 ಸಾವಿರ ರೂ. ಬಹುಮಾನ ಘೋಷಣೆ ಮಾಡಿ ಲಿಖಿತ ಪ್ರಕಟಣೆ ಹೊರಡಿಸಿದ್ದಾರೆ.

illicit liquor
ಅಕ್ರಮ ಮದ್ಯ

ಕೊಳ್ಳೇಗಾಲ:ತಾಲೂಕಿನ ಸಿದ್ದಯ್ಯನಪುರ ಗ್ರಾಮದಲ್ಲಿ ಅಕ್ರಮ ಮದ್ಯಮಾರಾಟಕ್ಕೆ ಮುಂದಾದವರಿಗೆ 10 ಸಾವಿರ ರೂ. ದಂಡ ವಿಧಿಸುವ ಹಾಗೂ ಮಾರುವವರ ಪತ್ತೆ ಹಚ್ಚಿಕೊಟ್ಟವರಿಗೆ 5 ಸಾವಿರ ರೂ. ಬಹುಮಾನ ನೀಡುವ ನಿರ್ಧಾರವನ್ನು ಗ್ರಾಮಸ್ಥರು ಕೈಗೊಂಡಿದ್ದಾರೆ.

ಗ್ರಾಮದ ಮಹಿಳಾ ಸಂಘದ ಪದಾಧಿಕಾರಿಗಳು ಹಾಗೂ ಯುವಕರ ಸಂಘದ ದೂರಿನನ್ವಯ ನ.1 ರಂದು ಗ್ರಾಮದಲ್ಲಿ ಕುಲಸ್ಥರ ಸಮ್ಮುಖದಲ್ಲಿ ಯಜಮಾನರಾದ ಚಾಮರಾಜು, ಲಕ್ಷ್ಮಣ ಸ್ವಾಮಿ, ಧರ್ಮರತ್ನಕರ, ಕಾಂತರಾಜು, ಮಾದಯ್ಯ, ಮಹೇಂದ್ರ, ಶ್ರೀನಿವಾಸ್, ಎಂ.ಮಹದೇವ, ಸಿ.ಎಂ.ಮಹದೇವ, ಲಿಂಗರಾಜು, ದೊರೆಸ್ವಾಮಿ ಸೇರಿ ಇತರರು ಸಭೆ ಸೇರಿ ಈ ಮಹತ್ವದ ನಿರ್ಣಯ ಕೈಗೊಂಡಿದ್ದಾರೆ.

ಲಿಖಿತ ಪ್ರಕಟಣೆ

ಹಾಗೊಂದು ವೇಳೆ ನಿಷೇಧ ತೀರ್ಮಾನ ಉಲ್ಲಂಘಿಸಿ ಅಕ್ರಮ ಮದ್ಯ ಮಾರಾಟ ಮಾಡುವ ಕಿರಾಣಿ ಅಂಗಡಿಯವರಿಗೆ 10 ಸಾವಿರ ರೂ. ದಂಡ, ಮಾರಾಟಕ್ಕೆ ಪ್ರೋತ್ಸಾಹಿಸಿ ಜಗಳ ಮಾಡಿದವರಿಗೆ 5 ಸಾವಿರ ರೂ. ದಂಡ ಹಾಗೂ ಮಾಲು ಸಮೇತ ಅಕ್ರಮ ಮದ್ಯ ಮಾರಾಟವನ್ನು ಪತ್ತೆಹಚ್ಚಿಕೊಟ್ಟವರಿಗೆ 5 ಸಾವಿರ ರೂ. ಬಹುಮಾನ ಘೋಷಣೆ ಮಾಡಿ ಲಿಖಿತ ಪ್ರಕಟಣೆ ಹೊರಡಿಸಿದ್ದಾರೆ.

ಈ ಕುರಿತು ಪ್ರಕಟಣೆಯನ್ನು ನ.3 ರಂದು ಗ್ರಾಮದ ಪರಿಶಿಷ್ಟಜಾತಿ ಸಮುದಾಯದ ಹಳೆ ಹಾಗೂ ಹೊಸ ಬಡಾವಣೆಗಳ ಹತ್ತಾರು ಕಡೆಗಳಲ್ಲಿ ಗೋಡೆಗೆ ಅಂಟಿಸಿದ್ದು, ಗ್ರಾಮದ ವಿವಿಧ ಸಮುದಾಯದ ಬೀದಿಗಳ ಜನತೆಯಲ್ಲದೆ, ನೆರೆ ಗ್ರಾಮಗಳಲ್ಲಿ ಈ ವಿಚಾರ ಸಾರ್ವಜನಿಕವಾಗಿ ಚರ್ಚೆಗೆ ಗ್ರಾಸವಾಗಿದೆ.

ABOUT THE AUTHOR

...view details