ಚಾಮರಾಜನಗರ:ಆರ್ಬಿಐ ಎಷ್ಟೇ ಸ್ಪಷ್ಟನೆ ನೀಡಿದ್ದರೂ ೧೦ ರೂ. ನಾಣ್ಯಕ್ಕೆ ಶುಕ್ರದೆಸೆ ಒದಗಿದಂತೆ ಕಾಣುತ್ತಿಲ್ಲ ಎಂಬುದಕ್ಕೇ ಈ ಘಟನೆಯೇ ನಿದರ್ಶನ.
ಹೌದು, ಕೊಳ್ಳೇಗಾಲದಿಂದ ತೆರಳುತ್ತಿದ್ದ ಕೆಎ-೪೨ ಎಫ್-೨೧೮೦ ಬಸ್ನ ಕಂಡಕ್ಟರ್ ೧೦ ರೂ. ನಾಣ್ಯ ಪಡೆಯಲು ನಿರಾಕರಿಸಿದ್ದು, ದೇಶದಲ್ಲೇ ೧೦ ರೂ. ನಾಣ್ಯ ಬ್ಯಾನ್ ಮಾಡಿದ್ದಾರೆಂದು ತಮ್ಮ ಅಜ್ಞಾನ ಪ್ರದರ್ಶಿಸಿದ್ದಾರೆ. ಈ ವೇಳೆ ಡಿಪೋದಲ್ಲಿ ೧೦ ರೂ. ನಾಣ್ಯವನ್ನು ಪಡೆಯುತ್ತಿಲ್ಲ, ನಾನು ಲಾಸ್ ಮಾಡಿಕೊಳ್ಳಲೇ ಎಂಬ ಅಸಹಾಯತೆ ತೋರ್ಪಡಿಸಿದ್ದಾರೆ. ನಾಣ್ಯ ಪಡೆದು ಟಿಕೆಟ್ ನೀಡಬೇಕೆಂದು ಸಹ ಪ್ರಯಾಣಿಕರು ಎಷ್ಟೇ ಒತ್ತಾಯ ಮಾಡಿದರೂ ಹಣ ಪಡೆಯದೇ ಬ್ಯಾನ್ ಆಗಿದೆ ಎಂದಿರುವ ವಿಡಿಯೋ ಈಟಿವಿ ಭಾರತಕ್ಕೆ ಲಭ್ಯವಾಗಿದೆ.