ಚಾಮರಾಜನಗರ:ಎಲ್ಲಾ ಸೇವೆಗಳಿಗೆ ಅನುಮತಿ ಸಿಕ್ಕ ಹಿನ್ನೆಲೆಯಲ್ಲಿ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟಕ್ಕೆ ಭಕ್ತಸಾಗರವೇ ಹರಿದು ಬರುತ್ತಿದ್ದು, ನಿನ್ನೆ (ಶುಕ್ರವಾರ) ಒಂದೇ ದಿನ ವಿವಿಧ ಸೇವೆಗಳಿಂದ ಲಕ್ಷಾಂತರ ರೂ. ಆದಾಯ ಬಂದಿದೆ.
ಈ ಕುರಿತು ಪ್ರಾಧಿಕಾರದ ಕಾರ್ಯದರ್ಶಿ ಮಾಹಿತಿ ನೀಡಿದ್ದು, ಮುಡಿ ಸೇವೆಯಿಂದ 61,400 ರೂ.ಬಂದಿದ್ದು, 6.200 ಕೆಜಿ ಉದ್ದಕೂದಲು ಸಂಗ್ರಹವಾಗಿದೆ. ಚಿನ್ನದ ರಥ, ಬಸವ, ರುದ್ರಾಕ್ಷಿ ವಾಹನ, ಹುಲಿ ವಾಹನ ಸೇವೆ ಮೂಲಕ ಬರೋಬ್ಬರಿ 8,06,085 ರೂ. ವರಮಾನ ಬಂದಿದೆ. ಲಾಡು ಪ್ರಸಾದದಿಂದ 1.44 ಲಕ್ಷ ರೂ. ಸಂಗ್ರವಾಗಿರುವುದು ಭಕ್ತಸಾಗರಕ್ಕೆ ಸಾಕ್ಷಿಯಾಗಿದೆ.