ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟ ಹುಂಡಿ ಎಣಿಕೆಯು ಸೋಮವಾರ ನಡೆದಿದ್ದು ಬರೋಬ್ಬರಿ 1ಕೋಟಿ 93 ಲಕ್ಷ ರೂ. ಸಂಗ್ರಹವಾಗಿದೆ.
ಮಾದಪ್ಪನ ಹುಂಡಿಗೆ ಹರಿದು ಬಂತು 1.93 ಕೋಟಿ ರೂ, ಭಕ್ತರಿಂದ ಚಿನ್ನ, ಬೆಳ್ಳಿಯ ಉಡುಗೊರೆ - Male Mahadeshwara Betta
ಮಲೆ ಮಹದೇಶ್ವರ ಬೆಟ್ಟದ ಹುಂಡಿ ಎಣಿಕೆ ಕಾರ್ಯ ನಿನ್ನೆ ನಡೆಸಲಾಯಿತು. ಮುಂದಿನ ತಿಂಗಳಿನ ಹುಂಡಿ ಹಣದಲ್ಲಿ ಇದಕ್ಕಿಂತಲೂ ಹೆಚ್ಚಿನ ಹಣ ಬರುವ ನಿರೀಕ್ಷೆ ಇದೆ.
ಮಲೆ ಮಹದೇಶ್ವರ ಬೆಟ್ಟ
ಸಾಲೂರು ಮಠದ ಹಿರಿಯ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಹುಂಡಿ ಎಣಿಕೆಯಲ್ಲಿ 1,93,73,279 ರೂ. ಕಾಣಿಕೆ ಸಲ್ಲಿಕೆಯಾಗಿದ್ದು 105 ಗ್ರಾಂ ಚಿನ್ನ ಹಾಗೂ 2 ಕೆಜಿಯಷ್ಟು ಬೆಳ್ಳಿ ಹರಕೆ ರೂಪದಲ್ಲಿ ಭಕ್ತಾದಿಗಳು ಸಲ್ಲಿಸಿದ್ದಾರೆ. ಬೇಸಿಗೆ ರಜೆ ಇರುವುದರಿಂದ ಭಕ್ತಾದಿಗಳ ಸಂಖ್ಯೆ ಹೆಚ್ಚಿದ್ದು ಮುಂದಿನ ತಿಂಗಳಿನ ಹುಂಡಿ ಹಣದಲ್ಲೂ ಇದಕ್ಕಿಂತಲೂ ಹೆಚ್ಚಿನ ಹಣ ಬರುವ ನಿರೀಕ್ಷೆ ಪ್ರಾಧಿಕಾರದ್ದಾಗಿದೆ.