ಚಾಮರಾಜನಗರ: ರಾಜ್ಯದ ಪ್ರಮುಖ ಮತ್ತು ಹೆಚ್ಚು ಆದಾಯ ಹೊಂದಿರುವ ಹಿಂದಾ ದೇವಾಲಯಗಳಲ್ಲಿ ಒಂದಾಗಿರುವ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಗುರುವಾರ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ಕೋಟ್ಯಂತರ ರೂ. ಹಣ, ಕೆಜಿಗಟ್ಟಲೆ ಬೆಳ್ಳಿ ಸಂಗ್ರಹವಾಗಿದೆ.
ಕೇವಲ 43 ದಿನಗಳಲ್ಲಿ 1 ಕೋಟಿ 87 ಲಕ್ಷದ 14,358 ರೂ. ಕಾಣಿಕೆ ಬಂದಿದೆ. ಇದರ ಜೊತೆಗೆ 50 ಗ್ರಾಂ ಚಿನ್ನ ಹಾಗೂ 2 ಕೆಜಿ ಬೆಳ್ಳಿಯನ್ನು ಏಳುಮಲೆ ಒಡೆಯನಿಗೆ ಭಕ್ತರು ಕಾಣಿಕೆ ರೂಪದಲ್ಲಿ ಅರ್ಪಿಸಿದ್ದಾರೆ.