ಕರ್ನಾಟಕ

karnataka

ETV Bharat / state

ಉಘೇ ಉಘೇ ಕೋಟ್ಯಾಧೀಶ ಮಾದಪ್ಪ: ಹುಂಡಿಯಲ್ಲಿ 1.48 ಕೋಟಿ ಸಂಗ್ರಹ

ಮಹಾಮಾರಿ ಕರಿಛಾಯೆ ಬಳಿಕ ಮಾದಪ್ಪ ಮತ್ತೇ ಶ್ರೀಮಂತನಾಗುತ್ತಿದ್ದು, ಭಕ್ತರ ಸಂಖ್ಯೆಯಲ್ಲೂ ಗಣನೀಯ ಏರಿಕೆ ಕಂಡಿದೆ. ವಿಶೇಷ ಪೂಜೆಗಳು ನಡೆಯುತ್ತಿದ್ದು, ಮುಂದಿನ ಜಾತ್ರೆಗಳನ್ನು ನಡೆಸಲು ಗ್ರೀನ್ ಸಿಗ್ನಲ್ ಸಿಕ್ಕಿದೆ.

1.48 crore collected in mahadeshwara hundi
ಉಘೇ ಉಘೇ ಕೋಟ್ಯಾಧೀಶ ಮಾದಪ್ಪ: ಹುಂಡಿಯಲ್ಲಿ 1.48 ಕೋಟಿ ಸಂಗ್ರಹ

By

Published : Feb 25, 2021, 9:41 PM IST

ಚಾಮರಾಜನಗರ: ರಾಜ್ಯದ ಪ್ರಮುಖ ದೇಗುಲಗಳಲ್ಲಿ ಒಂದಾದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಹುಂಡಿ‌ ಎಣಿಕೆ ನಡೆದಿದ್ದು, ಬರೋಬ್ಬರಿ ₹1.48 ಕೋಟಿ ಸಂಗ್ರಹವಾಗಿದೆ.

28 ದಿನಗಳಲ್ಲಿ ಭಕ್ತರಿಂದ 1,48,73,233 ರೂ. ಸಂಗ್ರಹವಾಗಿದ್ದು, ಭಕ್ತಾದಿಗಳು ಮಾದಪ್ಪನಿಗೆ ಹಣದ ಹೊಳೆಯನ್ನೇ ಹರಿಸಿದ್ದಾರೆ.

ಕೊರೊನಾ ನಂತರದಲ್ಲಿ ಉತ್ಸವಗಳು, ವಿಶೇಷ ಸೇವೆಗಳಿಗೆ ಅವಕಾಶ ಮಾಡಿಕೊಟ್ಟ ಹಿನ್ನೆಲೆಯಲ್ಲಿ ಇಷ್ಟು ಮೊತ್ತದ ಹಣ ಸಂಗ್ರಹವಾಗಿದೆ ಎನ್ನಲಾಗಿದೆ. ಈ ಬಾರಿ 31 ಗ್ರಾಂ ಚಿನ್ನ ಹಾಗೂ 2.82 ಕೆಜಿ ಬೆಳ್ಳಿ ಕಾಣಿಕೆ ರೂಪದಲ್ಲಿ ಭಕ್ತರು ಮಾದಪ್ಪನಿಗೆ ಅರ್ಪಿಸಿದ್ದಾರೆ.

ಮಹಾಮಾರಿ ಕರಿಛಾಯೆ ಬಳಿಕ ಮಾದಪ್ಪ ಮತ್ತೇ ಶ್ರೀಮಂತನಾಗುತ್ತಿದ್ದು, ಭಕ್ತರ ಸಂಖ್ಯೆಯಲ್ಲೂ ಗಣನೀಯ ಏರಿಕೆ ಕಂಡಿದೆ. ವಿಶೇಷ ಪೂಜೆಗಳು ನಡೆಯುತ್ತಿದ್ದು ಮುಂದಿನ ಜಾತ್ರೆಗಳನ್ನು ನಡೆಸಲು ಗ್ರೀನ್ ಸಿಗ್ನಲ್ ಸಿಕ್ಕಿದೆ.

ABOUT THE AUTHOR

...view details