ಕರ್ನಾಟಕ

karnataka

ETV Bharat / state

ವಿಶ್ವ ಬೈಸಿಕಲ್ ದಿನ: ಹೀರೋ ಸೈಕಲ್ಸ್​ ವತಿಯಿಂದ ಅಭಿಯಾನ

ವಿಶ್ವ ಸೈಕಲ್ ದಿನದ ಅಂಗವಾಗಿ ಹೀರೋ ಸೈಕಲ್ಸ್​ ವತಿಯಿಂದ ಸೈಕಲ್ ಬಳಸಿ - ಜಾಗೃತಿ ಮೂಡಿಸಿ ಎಂಬ ಅಭಿಯಾನವನ್ನು ಆಯೋಜಿಸಲಾಗಿತ್ತು.

By

Published : Jun 3, 2019, 9:11 AM IST

ಸೈಕಲ್ ರೇಸ್​ನಲ್ಲಿ ಪಾಲ್ಗೊಂಡಿರುವವರು

ಬೆಂಗಳೂರು:ವಿಶ್ವ ಸೈಕಲ್ ದಿನದ ಅಂಗವಾಗಿ ಸೈಕಲ್ ಬಳಸಿ, ಇಂಧನ ಉಳಿಸಿ, ಪರಿಸರ ರಕ್ಷಿಸಿ, ಆರೋಗ್ಯ ವೃದ್ಧಿಸಿ ಘೋಷಣೆಯಡಿ ನಿನ್ನೆ ಜಯನಗರದಲ್ಲಿ ಹೀರೋ ಸೈಕಲ್ಸ್​ ವತಿಯಿಂದ ಸೈಕಲ್ ರೇಸ್ ನಡೆಯಿತು.

ಜೂನ್ 3 ವಿಶ್ವ ಸೈಕಲ್ ದಿನ. ಇದರ ಅಂಗವಾಗಿ ಸೈಕಲ್‌ನ ಮಹತ್ವ ಸಾರುವ ಉದ್ದೇಶದಿಂದ ಹೀರೋ ಸೈಕಲ್ಸ್​ ವತಿಯಿಂದ ಸೈಕಲ್ ಬಳಸಿ - ಜಾಗೃತಿ ಮೂಡಿಸಿ ಎಂಬ ಅಭಿಯಾನವನ್ನು ಆಯೋಜಿಸಲಾಗಿತ್ತು. ಜಯನಗರದ 4ನೇ ಬ್ಲಾಕ್‌ನ ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾಂಗಣದಿಂದ ಕಬ್ಬನ್ ಪಾರ್ಕ್‌ವರೆಗೆ ಸೈಕಲ್ ರೇಸ್ ನಡೆಯಿತು. ಬೆಳಕು ಹರಿಯುವ ಮುನ್ನವೇ ನೂರಾರು ಮಂದಿ ಪರಿಸರ ಜಾಗೃತಿ ಬಿಂಬಿಸುವ ಫಲಕಗಳನ್ನು ಹಿಡಿದು, ಟಿ-ಶರ್ಟ್ ತೊಟ್ಟು ಲವಲವಿಕೆಯಿಂದ ಕ್ರೀಡಾಂಗಣದಲ್ಲಿ ಹಾಜರಾಗಿ ತಮ್ಮ ಉತ್ಸುಕತೆ ತೋರಿದರು.

ಸೈಕಲ್ ರೇಸ್​ನಲ್ಲಿ ಪಾಲ್ಗೊಂಡಿರುವವರು

ಒಂದು ಸೈಕಲ್ ನಮ್ಮ ಬದುಕಿನ ಚಕ್ರವನ್ನೇ ಬದಲಿಸುತ್ತದೆ. ಸೈಕಲ್ ಭೂಮಿಯಷ್ಟೇ ಅಲ್ಲದೇ ದೇಹಕ್ಕೂ ಹಿತಕಾರಿ. ಸೈಕಲ್ ಬಳಕೆಯಿಂದ ನಾನಾ ರೀತಿಯ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಬಹುದಾಗಿದೆ ಎಂದು ರೇಸ್​ನಲ್ಲಿ ಪಾಲ್ಗೊಂಡಿದ್ದ ಬೈಸಿಕಲ್ ರೈಡರ್ ಹೇಳಿದರು.

ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರವರೆಗೂ ನಿರೀಕ್ಷೆಗಿಂತ ಹೆಚ್ಚು ಜನ ರೇಸ್​ನಲ್ಲಿ ಉತ್ಸಾಹದಿಂದ ಪಾಲ್ಗೊಂಡು ನಮ್ಮ ಅಭಿಯಾನವನ್ನು ಯಶಸ್ವಿಗೊಳಿಸಿದರು ಎಂದು ಬೈಸಿಕಲ್ ರೇಸ್ ಆಯೋಜಕರಾದ ಅಭಿಜಿತ್ ತಿಳಿಸಿದರು.

For All Latest Updates

TAGGED:

ABOUT THE AUTHOR

...view details