ಕರ್ನಾಟಕ

karnataka

ETV Bharat / state

ಐಟಿ ಅಧಿಕಾರಿ ಎಂದು ನಂಬಿಸಿ ಮದುವೆಯಾದ ದರೋಡೆಕೋರ... ಹೆಂಡತಿ ಗೋಳು ಒಂದೆರಡಲ್ಲ - undefined

ಮೊದಲು ಇನ್ಕಂ ಟ್ಯಾಕ್ಸ್ ಆಫೀಸರ್ ಎಂದು ಹೇಳಿ ಹೆಂಡತಿಗೆ ಮೋಸ. ನಂತರ ಬೇರೆ ಯುವತಿಯೋರ್ವಳೊಂದಿಗೆ ಅನೈತಿಕ ಸಂಬಂಧ. ಕಾನೂನು ಕ್ರಮ ತೆಗೆದುಕೊಳ್ಳದ ಪೊಲೀಸರು. ನ್ಯಾಯಕ್ಕಾಗಿ ಮಾಧ್ಯಮದ ಮುಂದೆ ಮಹಿಳೆ ಅಳಲು.

ಆರೋಪಿ ಚರಣ್​ರಾಜ್​

By

Published : Mar 27, 2019, 8:45 PM IST

ಬೆಂಗಳೂರು: ತಾನೊಬ್ಬ ಆದಾಯ ತೆರಿಗೆ ಇಲಾಖೆಯ ಉನ್ನತ ಅಧಿಕಾರಿಯೆಂದು ಹೇಳಿ ಹೆಂಡತಿಯನ್ನು ನಂಬಿಸಿದ್ದಲ್ಲದೇ, ಈಗ ಬೇರೆ ಯುವತಿಯ ಜೊತೆ ಸಂಬಂಧ ಹೊಂದಿರುವ ವ್ಯಕ್ತಿಯೋರ್ವನ ಬಂಡವಾಳ ಬಯಲಾಗಿದೆ.

ಚರಣ್​ ರಾಜ್​ ಎಂಬಾತನೇ ನಕಲಿ ಇನ್ಕಂ ಟ್ಯಾಕ್ಸ್ ಆಫೀಸರ್. ಮಾಗಡಿ ರೋಡ್ ನಿವಾಸಿಯಾಗಿರುವ ಮಂಜುಳಾ ಎಂಬವರೊಂದಿಗೆ 7 ವರುಷದ ಹಿಂದೆಯೇ ಈತ ಮದುವೆಯಾಗಿದ್ದನು. ತಾನು ಇನ್ಕಂ ಟ್ಯಾಕ್ಸ್ ಆಫೀಸರ್ ಎಂದು ಹೇಳಿ ಅದ್ಯಾರಿಗೋ ಟ್ಯಾಕ್ಸ್ ಹಾಕಲು ಹೋಗಿ ಆರು ತಿಂಗಳು ಜೈಲಿಗೆ ಹೋದಾಗಲೇ ಮಂಜುಳಾ ಪತಿಯ ಅಸಲಿ ಮುಖವನ್ನು ನೋಡಿದ್ದಳು.

ಕಟ್ಕೊಂಡಾಗಿದೆಯೆಲ್ಲ, ಇನ್ನಾದರೂ ನೆಟ್ಟಗಿದ್ರೆ ಸಾಕು ಅಂದುಕೊಂಡವಳಿಗೆ ಗಂಡನ ಒಂದೊಂದೆ ಅಸಲಿ ಬಂಡವಾಳ ತಿಳಿಯುತ್ತಾ ಹೋಗಿದೆ. ಒಂದು ದಿನ ಮಂಜುಳಾ ತವರು ಮನೆಗೆ ಹೋದವಳು ಅಚಾನಕ್ ವಾಪಾಸ್ ಬಂದಾಗ ಚರಣ್​ ರಾಜ್, ಬೇರೆ ಯುವತಿಯ ಜೊತೆ ಇದ್ದಿದ್ದು ತಿಳಿದಿದೆ. ಇದನ್ನು ಪ್ರಶ್ನಿಸಿದ್ದಕ್ಕೆ ಅಮ್ಮ, ತಂಗಿಯ ಜೊತೆ ಸೇರಿಕೊಂಡು ಆಕೆಯ ಮೇಲೆ ಹಲ್ಲೆ ಕೂಡ ನಡೆಸಿದ್ದನು ಎಂದು ಮಂಜುಳಾ ಆರೋಪಿಸಿ, ತನಗೆ ನ್ಯಾಯ ಬೇಕು ಎಂದು ಮಂಜುಳಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.

Woman expressing her pain

ಸದ್ಯ ಎರಡು ಮಕ್ಕಳ ಜೊತೆ ಬೇರೆ ಮನೆಯಲ್ಲಿರುವ ಮಂಜುಳಾ, ಈ ಸಂಬಂಧ ಕೆ.ಪಿ. ಅಗ್ರಹಾರ ಪೊಲೀಸ್ ಠಾಣೆ, ಕರ್ನಾಟಕ‌ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ರಾಜ್ ಹಾಗೂ ‌ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಆದರೆ ಯಾರೊಬ್ಬರು ಈ ವರೆಗೆ ಕಾನೂನು ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ, ತನಗೆ ನ್ಯಾಯ ಕೊಡಿಸಿ ಎಂದು‌ ಮಾಧ್ಯಮದವರ ಜೊತೆ ಅಳಲು ತೊಡಿಕೊಂಡಿದ್ದಾಳೆ.

For All Latest Updates

TAGGED:

ABOUT THE AUTHOR

...view details