ಬೆಂಗಳೂರು: ಜೆಡಿಎಸ್ ಶಾಸಕರೆಲ್ಲಾ ರೆಸಾರ್ಟ್ನಲ್ಲಿ ಸೇಫ್ ಆಗಿದ್ದಾರೆ. ಮುಂಬೈನಲ್ಲಿರುವ ಮೂವರು ಶಾಸಕರು ಹೊರತುಪಡಿಸಿ ಬಹುತೇಕ ಜೆಡಿಎಸ್ ಶಾಸಕರು ಇಲ್ಲೇ ಇದ್ದೇವೆ. ಬಿಜೆಪಿಯ ಯಾವುದೇ ಆಮಿಷಗಳಿಗೆ ನಾವು ಬಗ್ಗೋದಿಲ್ಲ ಎಂದು ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಹೇಳಿದ್ದಾರೆ.
ಬಿಜೆಪಿಯ ಯಾವುದೇ ಆಮಿಷಗಳಿಗೆ ಬಗ್ಗೋದಿಲ್ಲ: ನಿಸರ್ಗ ನಾರಾಯಣಸ್ವಾಮಿ - undefined
ನಮಗೆ ಯಾರಿಂದಲೂ ಯಾವುದೇ ಆಮಿಷಗಳು ಬಂದಿಲ್ಲ, ಬಂದರೂ ನಾವು ಬಗ್ಗೋದಿಲ್ಲ. ನಾವೆಲ್ಲ ಒಗ್ಗಟ್ಟಾಗಿದ್ದೇವೆ ಎಂದು ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ಬಿಜೆಪಿಯ ಆಮಿಷಗಳಿಗೆ ಬಗ್ಗೋದಿಲ್ಲ ಎಂದು ನಿಸರ್ಗ ನಾರಾಯಣಸ್ವಾಮಿ ಸ್ಪಷ್ಟನೆ
ಬಿಜೆಪಿಯ ಆಮಿಷಗಳಿಗೆ ಬಗ್ಗೋದಿಲ್ಲ: ನಿಸರ್ಗ ನಾರಾಯಣಸ್ವಾಮಿ ಸ್ಪಷ್ಟನೆ
ದೇವನಹಳ್ಳಿ ನಂದಿ ಹಿಲ್ಸ್ ಮಾರ್ಗ ಮಧ್ಯೆ ಇರುವ ಗಾಲ್ಪ್ ಶೈರ್ ರೆಸಾರ್ಟ್ ಬಳಿ ಮಾತನಾಡಿದ ಅವರು, ಕುಮಾರಣ್ಣ, ಅನಿತಕ್ಕ, ರೇವಣ್ಣ ಸೇರಿದಂತೆ ಪಕ್ಷದ ಎಲ್ಲ ಶಾಸಕರು ಸೇಫ್ ಆಗಿದ್ದೇವೆ. ನಮಗೆ ಯಾರಿಂದಲೂ ಯಾವುದೇ ಆಮಿಷಗಳು ಬಂದಿಲ್ಲ, ಬಂದರೂ ನಾವು ಬಗ್ಗೋದಿಲ್ಲ. ನಾವೆಲ್ಲ ಒಗ್ಗಟ್ಟಾಗಿದ್ದೇವೆ. ಹೊರಗಡೆ ಹೋದರೆ ಏನೇನೋ ಹೇಳ್ತಾರೆ ಅಂತ ನಾವೆಲ್ಲರೂ ರೆಸಾರ್ಟ್ನಲ್ಲೇ ಒಟ್ಟಿಗೆ ಇದ್ದೇವೆ ಎಂದರು.