ಬೆಂಗಳೂರು: ಲೋಕಸಭಾ ಚುನಾವಣೆ ಹತ್ತಿರ ಇರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ತನ್ನ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನುಇಂದು ಬಿಡುಗಡೆ ಮಾಡಲಿದೆ.
ಕೆಪಿಸಿಸಿ ಇಂದಿನ ಕೇಂದ್ರ ಚುನಾವಣಾ ಸಮಿತಿ(ಸಿಇಸಿ) ಸಭೆಯಲ್ಲಿ ಚರ್ಚೆ ಮಾಡಿ ಅಂತಿಮ ನಿರ್ಧಾರ ತೆಗೆದುಕೊಂಡು ಸಂಜೆ ವೇಳೆಗೆ ಕೈ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಿದೆ.
ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಲ್ಲಿಕಾರ್ಜುನ ಖರ್ಗೆ ಈಗಾಗಲೇ ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. ನಿನ್ನೆ ದೆಹಲಿಯಲ್ಲಿ ಸುದೀರ್ಘ ಸ್ಕ್ರೀನಿಂಗ್ ಕಮಿಟಿ ಸಭೆ ನಡೆದಿತ್ತು. ಸಭೆಯಲ್ಲಿ ಸಂಭಾವ್ಯ ಕೈ ಅಭ್ಯರ್ಥಿಗಳ ಬಗ್ಗೆ ಸಮಾಲೋಚನೆ ನಡೆಸಲಾಗಿದೆ. ಅಭ್ಯರ್ಥಿಗಳ ಸಾಮರ್ಥ್ಯ , ಗೆಲುವಿನ ಸಾಮರ್ಥ್ಯ, ಜಾತಿ ಲೆಕ್ಕಾಚಾರಗಳನ್ನು ಸಭೆಯಲಿ ಸುದೀರ್ಘವಾಗಿ ಚರ್ಚಿಸಲಾಗಿದೆ.
ಸ್ಕ್ರೀನಿಂಗ್ ಸಮಿತಿ ಸಭೆಯಲ್ಲಿ ಜಾತಿ, ಪ್ರಬಲ ಸಮುದಾಯದ ಆಧಾರದಲ್ಲಿ ಅಭ್ಯರ್ಥಿಗಳ ಆಯ್ಕೆ ಮಾಡುವ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆಸಲಾಗಿದೆ. ಅದರಂತೆ ಬೆಳಗಾವಿ, ಬೀದರ್, ಬಾಗಲಕೋಟೆ, ದಾವಣಗೆರೆ, ಧಾರವಾಡ, ಚಿಕ್ಕೋಡಿಗೆ ಲಿಂಗಾಯುತ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ನೀಡಲು ಕಾಂಗ್ರೆಸ್ ಹೈ ಕಮಾಂಡ್ ಮುಂದಾಗಿದೆ.
ಇತ್ತ ಮೈಸೂರು ಮತ್ತು ಹಾವೇರಿ, ಕೊಪ್ಪಳಕ್ಕೆ ಕುರುಬ, ಬೆಂಗಳೂರು ಗ್ರಾಮಾಂತರ ಮತ್ತು ದಕ್ಷಿಣದಲ್ಲಿ ಒಕ್ಕಲಿಗ ಅಭ್ಯರ್ಥಿಗೆ ಟಿಕೆಟ್ ನೀಡುವ ಬಗ್ಗೆ ಚರ್ಚಿಸಲಾಗಿದೆ. ಇನ್ನು ಚಾಮರಾಜನಗರ, ಕೋಲಾರ, ಕಲಬುರ್ಗಿ, ಚಿತ್ರದುರ್ಗ ಎಸ್ ಸಿ, ಬಳ್ಳಾರಿ ಮತ್ತು ರಾಯಚೂರನ್ನು ಎಸ್ಟಿಗೆ ಕೊಡಲು ಚಿಂತನೆ ನಡೆದಿದೆ.
ಸಂಭಾವ್ಯ ಅಭ್ಯರ್ಥಿಗಳ್ಯಾರು?:
ಬೆಳಗಾವಿ - ಶಿಶಿಕಾಂತ ಸಿದ್ನಳ್, ಸಾದನ್ನನವರ್
ಧಾರವಾಡ - ವಿನಯ್ ಕುಲಕರ್ಣಿ
ಚಿಕ್ಕೋಡಿ - ಪ್ರಕಾಶ್ ಹುಕ್ಕೇರಿ
ಬೀದರ್ - ಈಶ್ವರ್ ಖಂಡ್ರೆ
ಹಾವೇರಿ - ಡಿ.ಆರ್ ಪಾಟೀಲ್
ಬಾಗಲಕೋಟೆ - ವೀಣಾ ಕಾಶಪ್ಪನವರ್
ದಾವಣಗೆರೆ - ಎಸ್ ಎಸ್ ಮಲ್ಲಿಕಾರ್ಜುನ