ಬೆಂಗಳೂರು: ಪತಿ ಮೇಲೆ ಪತ್ನಿಯೇ ಆ್ಯಸಿಡ್ ದಾಳಿ ನಡೆದಿರುವ ಘಟನೆ ತಿಲಕ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಪತಿ ಮೊಹಮದ್ ಅತೀಮ್ ಮುಖಕ್ಕೆ ಪತ್ನಿ ಪರ್ವಿನ್ ಎಂಬಾಕೆ ಆ್ಯಸಿಡ್ ಎರಚಿದ್ದಾಳೆ. ಕಳೆದ ಏಪ್ರಿಲ್ 24ರಂದು ಈ ಘಟನೆ ನಡೆದಿದ್ದು ಇದೀಗ ತಡವಾಗಿ ಬೆಳಕಿಗೆ ಬಂದಿದೆ. 2006ರ ಆಗಸ್ಟ್ನಲ್ಲಿ ಪ್ರೀತಿಸಿ ಮದುವೆಯಾಗಿದ್ದ ಈ ಜೋಡಿ ಕಳೆದ ಒಂದು ವರ್ಷದ ಹಿಂದೆ ಅತೀಮ್ ಪತ್ನಿಗೆ ತಲಾಖ್ ನೀಡಿದ್ದ. ನಂತರ ಬೇರೊಂದು ಮದುವೆಯಾಗಲು ಮ್ಯಾಟ್ರಿಮೊನಿಯದಲ್ಲಿ ಪೋಟೋವನ್ನು ಪೋಸ್ಟ್ ಕೂಡ ಮಾಡಿದ್ದ. ಈ ವಿಚಾರ ಪತ್ನಿ ಪರ್ವಿನ್ಗೆ ತಿಳಿದಿತ್ತು.
ತಲಾಖ್ ನೀಡಿದ್ರು ಕೂಡ ಆಗಾಗ ಮಕ್ಕಳನ್ನ ನೋಡಲು ಅತೀಮ್ ಪತ್ನಿಯ ಮನೆಗೆ ಬರ್ತಿದ್ದ. ಏ. 24ರಂದು ಕೂಡ ಮಕ್ಕಳನ್ನು ನೋಡಲು ಬಂದಿದ್ದ. ಈ ವೇಳೆ ಅತೀಮ್ಗೆ ಮ್ಯಾಟ್ರಿಮೋನಿಯದಿಂದ ಕರೆ ಬಂದಿದೆ. ಇದೇ ವಿಚಾರಕ್ಕೆ ಅತೀಮ್ ಹಾಗೂ ಪರ್ವಿನ್ ಮಧ್ಯೆ ಜಗಳವಾಗಿದೆ. ಜಗಳವಾದ ನಂತ್ರ ಪರ್ವಿನ್ ಮನೆಯಲ್ಲಿ ಊಟ ಮಾಡಿ ನಿದ್ರೆಗೆ ಜಾರಿದ ಅತೀಮ್ ಮುಖಕ್ಕೆ ಟಾಯ್ಲೆಟ್ ಕ್ಲೀನ್ ಮಾಡಲು ಬಳಸುವ ಆ್ಯಸಿಡ್ ಎರಚಿದ್ದಾಳೆ.
ಇನ್ನು ಘಟನೆಯಿಂದ ಅತೀಮ್ ಹಣೆ ಹಾಗೂ ಮುಖದ ಭಾಗ ಸುಟ್ಟ ಗಾಯವಾದ್ದು, ಗಾಯಾಳು ಅತೀಮ್ನನ್ನ ಸೆಂಟ್ ಜಾನ್ಸ್ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಪರ್ವಿನ್ನನ್ನ ತಿಲಕ್ ನಗರ ಪೊಲೀಸರು ಬಂಧಿಸಿದ್ದಾರೆ.