ಬೆಂಗಳೂರು:ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ತನಿಖೆಯಲ್ಲಿ ಮತ್ತೊಂದು ವಿಚಾರ ಬೆಳಕಿಗೆ ಬಂದಿದ್ದು, ಈ ಪ್ರಕರಣದಲ್ಲಿ ನಾಲ್ವರು ಮೌಲ್ವಿಗಳು ಭಾಗಿಯಾಗಿದ್ದಾರೆ ಎನ್ನಲಾಗಿದೆ.
ಈ ಹಗರಣದಲ್ಲಿ ಮನ್ಸೂರ್ ಜೊತೆ ನಾಲ್ವರು ಮೌಲ್ವಿಗಳಿದ್ದು, ಇದರಲ್ಲಿ ಒಬ್ಬ ಮಸೀದಿಗೆ ನಮಾಜ್ಗೆ ಬರುತ್ತಿದ್ದ ಜನರಿಗೆ ಮೈಂಡ್ ವಾಶ್ ಮಾಡಿ ಧರ್ಮದ ಹೆಸರಿನಲ್ಲಿ ಐಎಂಎಗೆ ಹಣ ಹೂಡಿಕೆ ಮಾಡುವಂತೆ ಸಲಹೆ ನೀಡುತ್ತಿದ್ದ ವಿಚಾರ ತನಿಖೆಯಲ್ಲಿ ಬಯಲಾಗಿದೆ ಎನ್ನಲಾಗಿದೆ.
ಮನ್ಸೂರ್ ಮೌಲ್ವಿಗಳನ್ನು ಬಳಸಿಕೊಂಡು ಬಡವರಿಂದ ಐಎಂಎಗೆ ಹಣ ಹೂಡಿಕೆ ಮಾಡಿಸಿದ್ದಾನೆ. ಇದಕ್ಕಾಗಿ ಮೌಲ್ವಿಗಳಿಗೆ ಲಕ್ಷಾಂತರ ರೂಪಾಯಿ ಹಣ ಸುರಿದಿದ್ದಾನೆ. ಅಷ್ಟೇ ಅಲ್ಲದೇ ಮೌಲ್ವಿಗಳಿಗೆ ಶಿವಾಜಿನಗರ ಸೇರಿದಂತೆ ವಿವಿಧೆಡೆ ಮನೆ ಕೂಡ ಕಟ್ಟಿಸಿ ಕೊಟ್ಟಿದ್ದಾನೆ ಎಂದು ಎಸ್ಐಟಿ ಮೂಲಗಳು ತಿಳಿಸಿವೆ.
ಮೌಲ್ವಿಯ ಮೊಬೈಲ್ ಕಾಲ್ ವಿವರ, ಆತ ನಡೆಸಿದ ವ್ಯವಹಾರದ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಅಲ್ಲದೆ, ಅಗತ್ಯವಿದ್ದರೆ ಮೌಲ್ವಿಯನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಎಸ್ಐಟಿಯ ಉನ್ನತ ಮೂಲಗಳು ತಿಳಿಸಿವೆ.