ಬೆಂಗಳೂರು: ಸಮ್ಮಿಶ್ರ ಸರ್ಕಾರಕ್ಕೆ ವಿಶ್ವಾಸ ಮತಗಳೇ ಇಲ್ಲ. ಎಲ್ಲದಕ್ಕಿಂದ ಹೆಚ್ಚಾಗಿ ಈ ಸರ್ಕಾರ ಜನರ ವಿಶ್ವಾಸದಿಂದ ಆಯ್ಕೆಗೊಂಡ ಸರ್ಕಾರವಲ್ಲ. ತಾಂತ್ರಿಕ ಕಾರಣಕ್ಕೆ ಕಾಂಗ್ರೆಸ್-ಜೆಡಿಎಸ್ ಒಟ್ಟಾಗಿ ಸೇರಿ ಸಮ್ಮಿಶ್ರ ಸರ್ಕಾರ ರಚನೆ ಮಾಡಿದ್ರು. ಹೇಳಿಕೊಂಡಿದ್ದು ದೋಸ್ತಿ ಸರ್ಕಾರ, ಆದರೆ ಆಗಿದ್ದು ದುಷ್ಮನ್ ಸರ್ಕಾರ ಎಂದು ಶಾಸಕ ಸಿ.ಟಿ ರವಿ ಟೀಕಿಸಿದರು.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಮತ್ತು ಕಾಂಗ್ರೆಸ್ ಎಂದೂ ದೋಸ್ತಿ ಸರ್ಕಾರದಂತೆ ನಡೆದುಕೊಂಡಿಲ್ಲ. ಬದಲಾಗಿ ಪರಸ್ಪರ ಕಚ್ಚಾಡಿಕೊಂಡು ಕಾಲ ಕಳೆದಿದ್ದಾರೆ ಎಂದರು. ಇಂದು ದೋಸ್ತಿ ಸರ್ಕಾರ ಬಹುಮತ ಕಳೆದುಕೊಂಡಿದೆ. ಹೀಗಾಗಿ ಸಿಎಂ ಕುಮಾರಸ್ವಾಮಿಗೆ ರಾಜಭವನಕ್ಕೆ ಹೋಗಿ ರಾಜೀನಾಮೆ ಸಲ್ಲಿಸುವ ಕೆಲಸ ಮಾಡಬೇಕು ಎಂದು ಸಿ.ಟಿ. ರವಿ ಆಗ್ರಹಿಸಿದರು.