ಕರ್ನಾಟಕ

karnataka

ETV Bharat / state

ಮೆಟ್ರೋ ನಿಲ್ದಾಣದಲ್ಲಿ ಬೈಕ್​ಗಳನ್ನೇ ಟಾರ್ಗೆಟ್​​​ ಮಾಡ್ತಿದ್ದ ಖದೀಮರು ಅರೆಸ್ಟ್​​​​

ಮೆಟ್ರೋ ನಿಲ್ದಾಣದಲ್ಲಿ ಪಾರ್ಕಿಂಗ್ ಮಾಡುತ್ತಿದ್ದ ಬೈಕ್​ಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನ ಮಾಗಡಿ‌ ಪೊಲೀಸರು ಬಂಧಿಸಿದ್ದಾರೆ.

ಕಳ್ಳತನ ಮಾಡುತ್ತಿದ್ದ ನಾಲ್ವರು ಆರೋಪಿಗಳ ಬಂಧನ

By

Published : Apr 8, 2019, 7:44 PM IST

ಬೆಂಗಳೂರು: ಮೆಟ್ರೋ ನಿಲ್ದಾಣವನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಆರೋಪಿಗಳ‌ನ್ನು ಕೊನೆಗೂ ಬಂಧಿಸುವಲ್ಲಿ‌ ಮಾಗಡಿ‌ ಪೊಲೀಸರು ಯಶಸ್ವಿಯಾಗಿದ್ದಾರೆ.

ಪ್ರವೀಣ್ ಕುಮಾರ್, ಫೈಜ್ ಷರೀಫ್, ಮಹೇಶ್ ಅಲಿಯಾಸ್ ಮಚ್ಚಿ, ದಿನೇಶ್ ಬಂಧಿತ ಆರೋಪಿಗಳು. ಇವರು ಮೆಟ್ರೋ ನಿಲ್ದಾಣದಲ್ಲಿ ಪಾರ್ಕಿಂಗ್ ಮಾಡುತ್ತಿದ್ದ ಬೈಕ್​ಗಳನ್ನೇ ಟಾರ್ಗೆಟ್ ಮಾಡುತ್ತಿದ್ದರು.

ಕಳ್ಳತನ ಮಾಡುತ್ತಿದ್ದ ನಾಲ್ವರು ಆರೋಪಿಗಳ ಬಂಧನ
ಕ್ಷಣ ಮಾತ್ರದಲ್ಲಿ ಬೈಕ್​ಗಳನ್ನು ಎಗರಿಸಿ ಎಸ್ಕೇಪ್​ ಆಗುತ್ತಿದ್ರು. ಈ ಸಂಬಂಧ ಮಾಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇದೀಗ ಆರೋಪಿಗಳನ್ನು ಬಂಧಿಸಲಾಗಿದೆ.

ಇನ್ನು ತನಿಖೆಯಲ್ಲಿ ಆರೋಪಿಗಳು ಬೆಂಗಳೂರಿನ ಮಾಗಡಿ ರೋಡ್, ವಿಜಯನಗರ ಸೇರಿಂದಂತೆ ಹಲವು ಮೆಟ್ರೋ ಸ್ಟೇಷನ್​ನಲ್ಲಿ ಕಳ್ಳತನ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.‌ ಅದರಲ್ಲೂ ನಕಲಿ ಕೀ ಬಳಸಿ ‌ಪ್ರಯಾಣಿಕರ ಸೋಗಿನಲ್ಲಿ ಹೋಗಿ ಕಳ್ಳತನ ಮಾಡುತ್ತಿದ್ರು. ಸದ್ಯ ಆರೋಪಿಗಳನ್ನ ಬಂಧಿಸಿರುವ ಮಾಗಡಿ ರಸ್ತೆ ಪೊಲೀಸರು, ಆರೋಪಿಗಳಿಂದ 55 ಬೈಕ್​​ಗಳನ್ನ ವಶಕ್ಕೆ ಪಡೆದುಕೊಂಡಿದ್ದಾರೆ.

For All Latest Updates

TAGGED:

ABOUT THE AUTHOR

...view details