ಕರ್ನಾಟಕ

karnataka

ETV Bharat / state

ಟಿಡಿಆರ್​​ ಹಗರಣ: ಮೊಕದ್ದಮೆ ದಾಖಲಿಸಲು ಸರ್ಕಾರದ ಮೊರೆ ಹೋಗುತ್ತಿರುವ ಎಸಿಬಿ - undefined

ಟಿಡಿಆರ್ ಹಗರಣದ ತನಿಖೆ ನಡೆಸುತ್ತಿರುವ ಎಸಿಬಿ ಒಂದಲ್ಲ ಮೂರು ಬಾರಿ ಬಿಬಿಎಂಪಿ, ಬಿಡಿಎ ಹಿರಿಯ ಹಾಗೂ ನಿವೃತ್ತ ಅಧಿಕಾರಿಗಳ ವಿರುದ್ಧ ಮೊಕದ್ದಮೆ ದಾಖಲಿಸಿ, ತನಿಖೆ ನಡೆಸಲು ಸರ್ಕಾರಕ್ಕೆ ಅನುಮತಿಗಾಗಿ ಕಡತ ಕಳುಹಿಸಿದೆ. ಸರ್ಕಾರ ಅನುಮತಿ ನೀಡದೆ ಕಡತವನ್ನ ವಾಪಸ್ಸು ಕಳುಹಿಸಿದೆ. ಇದರಿಂದ ಟಿಡಿಆರ್ ಹಗರಣದ ತನಿಖೆಗೆ ಹಿನ್ನಡೆಯಾಗುತ್ತಿದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.

ಭ್ರಷ್ಟಾಚಾರ ನಿಗ್ರಹ ದಳ

By

Published : Jul 3, 2019, 7:22 PM IST

ಬೆಂಗಳೂರು: ಕೋಟ್ಯಂತರ ರೂ.ಗಳ ಟಿಡಿಆರ್ ಹಗರಣದಲ್ಲಿ ಬಿಬಿಎಂಪಿ, ಬಿಡಿಎ ಹಿರಿಯ ಹಾಗೂ ನಿವೃತ್ತ ಅಧಿಕಾರಿಗಳು ಶಾಮೀಲಾಗಿದ್ದು, ಇವರ ವಿರುದ್ಧ ಮೊಕದ್ದಮೆ ದಾಖಲಿಸಿ ತನಿಖೆ ನಡೆಸಲು ರಾಜ್ಯ ಸರ್ಕಾರ ಎಸಿಬಿಗೆ ಅನುಮತಿ ನೀಡಲು ವಿಳಂಬ ನೀತಿ ಅನುಸರಿಸುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಭ್ರಷ್ಟಾಚಾರ ನಿಗ್ರಹ ದಳ

ಬಿಬಿಎಂಪಿಯಲ್ಲಿ ಬಹುದೊಡ್ಡ ಹಗರಣವೆಂದು ಭಾವಿಸಲಾಗಿರುವ ಟಿಡಿಆರ್ ಹಗರಣದಲ್ಲಿ ಹಲವು ಅಧಿಕಾರಿಗಳ ಹೆಸರು ಕೇಳಿ ಬಂದಿದ್ದು, ಅವರ ವಿರುದ್ಧ ಮೊಕದ್ದಮೆ ದಾಖಲಿಸಲು ಎಸಿಬಿ ಸರ್ಕಾರದ ಅನುಮತಿ ಕೋರಿದೆ. ಆದರೆ ಇದುವರೆಗೂ ಅನುಮತಿ ಸಿಕ್ಕಿಲ್ಲ ಎಂದು ಮೂಲಗಳು ತಿಳಿಸಿವೆ.

ಇನ್ನು ಟಿಡಿಆರ್ ಹಗರಣದ ತನಿಖೆ ನಡೆಸುತ್ತಿರುವ ಎಸಿಬಿ ಒಂದಲ್ಲ ಮೂರು ಬಾರಿ ಸರ್ಕಾರಕ್ಕೆ ಅನುಮತಿಗಾಗಿ ಕಡತ ಕಳುಹಿಸಿದೆ. ಸರ್ಕಾರ ಅನುಮತಿ ನೀಡದೆ ಕಡತವನ್ನ ವಾಪಸ್​​​​ ಕಳುಹಿಸಿದೆ. ಇದರಿಂದ ಟಿಡಿಆರ್ ಹಗರಣದ ತನಿಖೆಗೆ ಹಿನ್ನಡೆಯಾಗುತ್ತಿದೆ. ಈ ಹಗರಣದಲ್ಲಿ ಬಿಡಿಎ ಎಂಜಿನಿಯರ್ ಕೃಷ್ಣಲಾಲ್ ಜೊತೆಗೆ ನಿವೃತ್ತ ಅಧಿಕಾರಿಯೊಬ್ಬರ ಮೇಲೆ ಮಾತ್ರ ಸರ್ಕಾರ ಪ್ರಕರಣ ದಾಖಲಿಸಿ ದಾಳಿ ನಡೆಸಲು ಎಸಿಬಿಗೆ ಅನುಮತಿ ನೀಡಿದೆ. ಆದರೆ ಉಳಿದ ನಿವೃತ್ತ ಹಾಗೂ ಹಾಲಿ ಇರುವ ಅಧಿಕಾರಿಗಳ ಮೇಲೆ ದಾಳಿ‌ ಮಾಡಲು ಅನುಮತಿ ನೀಡದೆ ಇರುವುದರಿಂದ ಸರ್ಕಾರದ ನಡೆ ಅನುಮಾನ ಹುಟ್ಟಿಸುವಂತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಒಟ್ಟಿನಲ್ಲಿ ಎಸಿಬಿಯು ಈಗಾಗಲೇ ಟಿಡಿಆರ್ ಹಗರಣ ಕುರಿತಂತೆ ಕೃಷ್ಣಲಾಲ್ ಹಾಗೂ ಆತನ ಆಪ್ತರ ಮನೆ ಮೇಲೆ ದಾಳಿ‌ ನಡೆಸಿ ಕೆಲ ದಾಖಲೆ ಕ್ರೋಢೀಕರಿಸಲಾಗಿದೆ. ಆದರೆ ತನಿಖೆ ಪೂರ್ಣವಾಗಿ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲು ಅನುಮತಿ ಸಿಗದೇ ಇರುವುದು ಎಸಿಬಿ ಅಧಿಕಾರಿಗಳಿಗೆ ಬಹಳ ಹಿನ್ನಡೆಯಾಗಿದೆ ಎಂದು ಎಸಿಬಿ ಉನ್ನತ ಮೂಲಗಳಿಂದ ತಿಳಿದು ಬಂದಿದೆ.

For All Latest Updates

TAGGED:

ABOUT THE AUTHOR

...view details