ಬೆಂಗಳೂರು: ಚುನಾವಣೆಗೆ ಒಂದೇ ದಿನ ಬಾಕಿ ಇರುವ ಹಿನ್ನೆಲೆಯಲ್ಲಿ ಚುನಾವಣಾ ಫ್ಲೈಯಿಂಗ್ ಸ್ವ್ಕಾಡ್ಗಳು ನಗರದ ಎಲ್ಲಾ ಚೆಕ್ ಪೋಸ್ಟ್ಗಳಲ್ಲಿ ಹದ್ದಿನ ಕಣ್ಣಿಟ್ಟಿದ್ದಾರೆ.
ವಾಹನಗಳ ತಪಾಸಣೆಗೆ ಮಧ್ಯರಾತ್ರಿ ಫೀಲ್ಡ್ಗಿಳಿದ ವಿಶೇಷಾಧಿಕಾರಿ ಮೌನೀಶ್ - undefined
ಬೆಂಗಳೂರು ದಕ್ಷಿಣ, ಉತ್ತರ ಹಾಗೂ ಕೇಂದ್ರ ಲೋಕಸಭಾ ಕ್ಷೇತ್ರಗಳ ಚುನಾವಣೆಗೆ ಒಂದೇ ದಿನ ಬಾಕಿ. ಮಧ್ಯರಾತ್ರಿಯೂ ವಾಹನಗಳ ತಪಾಸಣೆ ನಡೆಸಿದ ವಿಶೇಷಾಧಿಕಾರಿ ಮೌನೀಶ್ ಮುದ್ಗಿಲ್ ಮತ್ತು ಫ್ಲೈಯಿಂಗ್ ಸ್ವ್ಕಾಡ್ಗಳು.
![ವಾಹನಗಳ ತಪಾಸಣೆಗೆ ಮಧ್ಯರಾತ್ರಿ ಫೀಲ್ಡ್ಗಿಳಿದ ವಿಶೇಷಾಧಿಕಾರಿ ಮೌನೀಶ್](https://etvbharatimages.akamaized.net/etvbharat/images/768-512-3024598-thumbnail-3x2-bng.jpg)
ವಿಶೇಷಾಧಿಕಾರಿ ಮೌನೀಶ್ ಮೌದ್ಗೀಲ್
ಈ ಸಂಬಂಧ ಬೆಂಗಳೂರು ದಕ್ಷಿಣ, ಉತ್ತರ ಹಾಗೂ ಕೇಂದ್ರ ಲೋಕಸಭಾ ಕ್ಷೇತ್ರಗಳಲ್ಲಿ ನೀತಿ ಸಂಹಿತೆ ಜಾರಿ ಇರುವುದರಿಂದ ವಿಶೇಷಾಧಿಕಾರಿ ಮೌನೀಶ್ ಮುದ್ಗಿಲ್ ಅವರು ಖುದ್ದು ಚೆಕ್ ಪೋಸ್ಟ್ಗಳಲ್ಲಿ ಮಧ್ಯರಾತ್ರಿಯೂ ವಾಹನಗಳ ತಪಾಸಣೆ ನಡೆಸಿದರು.
ಯಶವಂತಪುರ, ಕುರುಬರಹಳ್ಳಿ, ಲಕ್ಷ್ಮೀಪುರ, ಹೂಸ್ಕೂರು ಸೇರಿದಂತೆ ಮತ್ತಿತರ ಪ್ರದೇಶಗಳಲ್ಲಿ ನಾಕಬಂದಿ ಹಾಕಿ ವಾಹನಗಳನ್ನು ತಪಾಸಣೆಗೆ ಒಳಪಡಿಸಿದರು.