ಬೆಂಗಳೂರು: ಕೋರ್ಟ್ ಕೇಸ್ ಇದ್ದ ಕಾರಣ ಕುಂದಗೋಳಕ್ಕೆ ಹೋಗುವುದಕ್ಕೆ ಆಗಲಿಲ್ಲ. ನಾಳೆಯೂ ವಿಚಾರಣೆ ಮುಂದುವರೆಯುತ್ತಿದೆ, ಇದರಿಂದ ಈ ವಿಚಾರದಲ್ಲಿ ಅನ್ಯತಾ ಅರ್ಥ ಬೇಡ ಎಂದು ಸಚಿವ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಮೈಸೂರು, ಗುಂಡ್ಲುಪೇಟೆ ಸೇರಿ ಹಲವು ಬೈ ಎಲೆಕ್ಷನ್ಗಳಲ್ಲಿ ಕೆಲಸ ಮಾಡಿ ಅಂದಿದ್ರು. ಹೋಗಿ ಅಂದ್ರೇ ಹೋಗ್ತೀನಿ, ಬೇಡ ಅಂದ್ರೆ ಬೇಡ. ಪಾರ್ಟಿ ಹೇಳಿದ ಮೇಲೆ ನಾನು ಕೇಳಲೇಬೇಕಾಗುತ್ತದೆ. ಶಿವಳ್ಳಿ ಮತ್ತು ನನ್ನ ಸಂಬಂಧ ಯಾರಿಗೂ ಬಿಡಿಸಿ ಹೇಳಬೇಕಾಗಿಲ್ಲ, ಶಿವಳ್ಳಿಯನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿದ್ದೇ ನಾನು ಎಂದರು.
ಯಾರೇ ಆಗಲಿ ಯಾರ ಮೇಲೆ ಪ್ರೀತಿ ಜಾಸ್ತಿ ಇರತ್ತೆ ಅವರನ್ನ ನೆನಸಿಕೊಳ್ತಾರೆ. ಸತೀಶ್ ಜಾರಕಿಹೊಳಿ ಸಾಹುಕಾರರು, ನಾಯಕರು. ಆದರೆ, ನಾವು ಪ್ರಜೆಗಳು. ಪಕ್ಷ ಏನು ಕೆಲಸ ವಹಿಸಿದೆಯೋ ಅದನ್ನು ನಾನು ಮಾಡ್ತೇನೆ. ಬಳ್ಳಾರಿಯಲ್ಲೂ ದೊಡ್ಡ ದೊಡ್ಡ ನಾಯಕರಿದ್ದು, ನನ್ನ ಫ್ಯಾಮಿಲಿ ಕರೆದುಕೊಂಡು ನಾನು ಎಲ್ಲಾದರೂ ಪ್ರವಾಸಕ್ಕೆ ಹೋಗೋಣ ಅಂದುಕೊಂಡಿದ್ದೆ. ಆದರೆ, ಪಕ್ಷದ ಕೆಲಸದಿಂದ ಹೋಗೋಕಾಗ್ತಿಲ್ಲ. ಗ್ರೇಟ್ ಇನ್ ಜಸ್ಟಿಸ್ ಟು ಮೈ ಫ್ಯಾಮಿಲಿ. ಎಲ್ಲ ಸರ್ವೇಗಳನ್ನು ನೋಡಿ ನೋಡಿ ನನ್ನ ಕೂದಲೇ ಬೆಳ್ಳಗಾಗ್ತಿದೆ. ಪ್ರೀತಿ ಇದ್ರೇ ಮಾತ್ರ ನೆನೆಸಿಕೊಳ್ತಾರೆ, ನನಗೆ ಯಾರೂ ಶತ್ರುಗಳಿಲ್ಲ ಎಂದರು.
ನಾನೇ ಭವಿಷ್ಯ ನುಡಿತಾ ಇದ್ದೇನೆ, ಯಡಿಯೂರಪ್ಪ ಶಿವಮೊಗ್ಗದಲ್ಲೇ ಸೋಲ್ತಾರೆ, ಮಧು ಬಂಗಾರಪ್ಪ ಗೆಲ್ತಾರೆ ಎಂದು ಯಡಿಯೂರಪ್ಪಗೆ ಡಿಕೆಶಿ ಟಾಂಗ್ ಕೊಟ್ಟರು.ಎಸ್.ಟಿ ಸೋಮಶೇಖರ್ ಸಭೆ ವಿಚಾರ ಮಾತನಾಡಿ, ಬೇರೆ ಪಕ್ಷಗಳಲ್ಲೂ ಅಧಿಕೃತ-ಅನಧಿಕೃತವಾಗಿ ಶಾಸಕರು ಸೇರುತ್ತಾರೆ. ಅವರ ಸಮಸ್ಯೆ ಇದೆ ಅದನ್ನು ಹೇಳಿಕೊಳ್ಳುತ್ತಾರೆ. ಅದರಲ್ಲಿ ತಪ್ಪು ಏನಿದೆ? ಸಿಎಂಗೂ ಎಸ್.ಟಿ ಸೋಮಶೇಖರ್ಗೂ ಉತ್ತಮ ಬಾಂಧವ್ಯವಿದೆ ಎಂದು ವಿವರಿಸಿದರು.