ಕರ್ನಾಟಕ

karnataka

ETV Bharat / state

'ರಣಂ' ಚಿತ್ರೀಕರಣ ವೇಳೆ ತಾಯಿ-ಮಗಳು ಸಾವು... ನ್ಯಾಯಕ್ಕಾಗಿ ಟವರ್ ಏರಿದ ಸಂಬಂಧಿಕರು - undefined

'ರಣಂ' ಚಿತ್ರದ​ ಚಿತ್ರೀಕರಣ ವೇಳೆ ಉಂಟಾದ ಸಿಲಿಂಡರ್ ಸ್ಫೋಟದಲ್ಲಿ ತಾಯಿ-ಮಗಳು ಮೃತಪಟ್ಟಿದ್ದು, ನಿರ್ಮಾಪಕ, ನಿರ್ದೇಶಕ, ಸ್ಟಂಟ್ ಮಾಸ್ಟರ್, ಅಸೋಸಿಯೇಟ್ ಮ್ಯಾನೇಜರ್, ವಿರುದ್ಧ ಎಫ್ಐಆರ್ ದಾಖಲಿಸಿದ್ದರೂ, ಈವರೆಗೂ ಬಂಧಿಸಿಲ್ಲವೆಂದು ಮೃತರ ಸಂಬಂಧಿಗಳು ಪ್ರತಿಭಟನೆ ನಡೆಸಿದರು.

'ರಣಂ' ಚಿತ್ರೀಕರಣ ವೇಳೆ ಉಂಟಾದ ದುರಂತ ಕುರಿತು ಪ್ರತಿಭಟನೆ

By

Published : Mar 31, 2019, 5:37 PM IST

ಬೆಂಗಳೂರು: ಕನ್ನಡ ಸಿನಿಮಾ 'ರಣಂ' ಚಿತ್ರೀಕರಣದ ವೇಳೆ ಸಿಲಿಂಡರ್ ಸ್ಫೋಟದಲ್ಲಿ‌ ತಾಯಿ-ಮಗಳು ಮೃತಪಟ್ಟಿರುವ ಪ್ರಕರಣ ಕುರಿತು ಇನ್ನೂ ಚಿತ್ರತಂಡದವರನ್ನು ಬಂಧಿಸಿಲ್ಲ ಎಂದು ಅಸಮಾಧಾನ ವ್ಯಕ್ತವಾಗಿದೆ. ಇದನ್ನು ಖಂಡಿಸಿ ಮೃತರ ಸಂಬಂಧಿಕರು ಟವರ್ ಏರಿ ಪ್ರತಿಭಟನೆ ನಡೆಸಿದರು.

ಮೃತರ ಸಂಬಂಧಿಕರಾದ ಮುನ್ನಾವರ್ ಖಾನ್, ಮೆಹಬೂಬ್ ಖಾನ್, ‌ಮನ್ಸೂರ್ ಖಾನ್ಹಾಗೂವಾಹೀದ್ ಎಂಬುವರು ಟವರ್ ಏರಿ ನ್ಯಾಯ ಸಿಗುವವರೆಗೂ ಟವರ್​ನಿಂದ ಇಳಿಯುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

'ರಣಂ' ಚಿತ್ರೀಕರಣ ವೇಳೆ ಉಂಟಾದ ದುರಂತ ಕುರಿತು ಪ್ರತಿಭಟನೆ

'ರಣಂ' ಚಿತ್ರದ ಕಾರ್ ಬ್ಲಾಸ್ಟ್​​ ಚಿತ್ರೀಕರಣ ವೇಳೆ ಉಂಟಾದ ಸಿಲಿಂಡರ್ ಸ್ಫೋಟದಲ್ಲಿ ಸುಮೇರಾ, ಅವರ ಮಗಳು ಆಯೇರಾ ಮೃತಪಟ್ಟರೆ, ಬಾಲಕಿ ಜೈನಬ್ ಗಂಭೀರವಾಗಿ ಗಾಯಗೊಂಡಿದ್ದಾಳೆ. ನಿರ್ಮಾಪಕ ಕನಕಪುರ ಶ್ರೀನಿವಾಸ್, ನಿರ್ದೇಶಕ ವಿ.ಸಮುದ್ರ, ಸ್ಟಂಟ್ ಮಾಸ್ಟರ್ ವಿಜಿಯನ್, ಅಸೋಸಿಯೇಟ್ ಮ್ಯಾನೇಜರ್ ಕಿರಣ್ ಎಂಬುವರ‌‌ ವಿರುದ್ಧ ಎಫ್ಐಆರ್ ದಾಖಲಿಸಿದ್ದರೂ, ಈವರೆಗೂ ಬಂಧಿಸಿಲ್ಲ. ಹೀಗಾಗಿ ನಮಗೆ‌ ನ್ಯಾಯ ಕೊಡಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.

For All Latest Updates

TAGGED:

ABOUT THE AUTHOR

...view details