ಕರ್ನಾಟಕ

karnataka

ETV Bharat / state

ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟ, ಆರೋಪಿಗಳು ಅರೆಸ್ಟ್‌

ದ್ವಿತೀಯ ಪಿ.ಯು.ಸಿ 2017 ರ ಪ್ರಶ್ನೆ ಪತ್ರಿಕೆಯನ್ನು 2019ರ ಪ್ರಶ್ನೆ ಪತ್ರಿಕೆಯೆಂದು ಬಿಂಬಿಸಿ ವಾಟ್ಸಾಪ್ ಮೂಲಕ ಹರಿಬಿಟ್ಟ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

By

Published : Apr 11, 2019, 5:26 PM IST

Updated : Apr 11, 2019, 5:36 PM IST

ಬಂಧನ

ಬೆಂಗಳೂರು: ದ್ವಿತೀಯ ಪಿ.ಯು.ಸಿ 2017ರ ಪ್ರಶ್ನೆ ಪತ್ರಿಕೆಯನ್ನು 2019ರ ಪ್ರಶ್ನೆ ಪತ್ರಿಕೆಯೆಂದು ಬಿಂಬಿಸಿ ವಾಟ್ಸಾಪ್ ಮೂಲಕ ಹರಿಬಿಟ್ಟ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಮಂಜುನಾಥ ಹಾಗು ಕಾನೂನು ಸಂಘರ್ಷಕ್ಕೊಳಗಾದ ಬಾಲಕ ಬಂಧಿತ ಆರೋಪಿಗಳಾಗಿದ್ದಾರೆ. ಮಾರ್ಚ್​16 ರಂದು ವಾಟ್ಸಾಪ್‌ನಲ್ಲಿ 2019ರ ಸಾಲಿನ ದ್ವಿತೀಯ ವರ್ಷದ ಅರ್ಥಶಾಸ್ತ್ರ ಪ್ರಶ್ನೆ ಪತ್ರಿಕೆ ಹರಿದಾಡುತ್ತಿತ್ತು. ಇದನ್ನು ಗಮನಿಸಿದ ಕರ್ನಾಟಕ ಪದವಿ ಪೂರ್ವ ಶಿಕ್ಷಣ ಮಂಡಳಿ ಸೈಬರ್ ಅಪರಾಧ ಠಾಣೆಯಲ್ಲಿ ದೂರು ದಾಖಲಿಸಿತ್ತು.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಸಿಸಿಬಿ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣದ ಸಂಬಂಧ ಸುಮಾರು 30 ಜನರನ್ನ ವಿಚಾರಣೆಗೆ ಒಳಪಡಿಸಿದಾಗ ಯಾದಗಿರಿ ಜಿಲ್ಲೆಯಲ್ಲಿ ದ್ವಿತೀಯ ಪಿ.ಯು.ಸಿ ಓದುತ್ತಿದ್ದ ವಿದ್ಯಾರ್ಥಿಯಿಂದ ಈ ಕೃತ್ಯ ಜರುಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ದೊರತಿದೆ.

ವಿದ್ಯಾರ್ಥಿಗಳಲ್ಲಿ ಆತಂಕಸೃಷ್ಟಿ ಮಾಡುವ ಉದ್ದೇಶದಿಂದ 2017ರ ಪ್ರಶ್ನೆ ಪತ್ರಿಕೆಯನ್ನು 2019ರ ಪ್ರಶ್ನೆ ಪತ್ರಿಕೆಯೆಂದು ಪರಿಚಯವಿರುವ ವಿದ್ಯಾರ್ಥಿಗಳಿಗೆ ಹಂಚಿರುವುದು ಆರೋಪಿಗಳನ್ನು ವಿಚಾರಣೆ ಮಾಡಿದಾಗ ಗೊತ್ತಾಗಿದೆ.

Last Updated : Apr 11, 2019, 5:36 PM IST

ABOUT THE AUTHOR

...view details