ಕರ್ನಾಟಕ

karnataka

ETV Bharat / state

ಕಪ್ಪು ಪಟ್ಟಿ ಧರಿಸಿ ಖಾಸಗಿ ವೈದ್ಯರ ಪ್ರತಿಭಟನೆ

ರೋಗಿಗಳ ಹಿತಕಾಯುವ ವೈದ್ಯರ ಮೇಲೆ ದೌರ್ಜನ್ಯ ಎಸಗಿರುವುದು ಸರಿಯಲ್ಲ. ಈ ಬಗ್ಗೆ ಕೇಂದ್ರ ಸರ್ಕಾರ ಗಮನಹರಿಸಬೇಕು ಎಂದು ಒತ್ತಾಯಿಸಿದರು.

By

Published : Jun 14, 2019, 6:33 PM IST

ಪ್ರತಿಭಟನೆ

ಬೆಂಗಳೂರು: ಪಶ್ಚಿಮ ಬಂಗಾಳದಲ್ಲಿ ನಡೆದ ವೈದ್ಯರ ಮೇಲಿನ ಹಲ್ಲೆಗೆ ಎಲ್ಲೆಡೆ ಭಾರಿ ವಿರೋಧದ ಕೂಗು ಕೇಳಿ ಬರುತ್ತಿದೆ. ಈ ದೌರ್ಜನ್ಯ ಖಂಡಿಸಿ ಇಂದು ವೈದ್ಯರು ದೇಶವ್ಯಾಪ್ತಿ ಪ್ರತಿಭಟನೆ ನಡೆಸಿದ್ದಾರೆ.

ಇಂಡಿಯನ್​ ಮೆಡಿಕಲ್​ ಅಸೋಸಿಯೇನ್​ ವತಿಯಿಂದ ಪ್ರತಿಭಟನೆ ಮಾಡಲಾಯಿತು

ರಾಜಧಾನಿಯಲ್ಲೂ ಇಂಡಿಯನ್​ ಮೆಡಿಕಲ್​ ಅಸೋಸಿಯೇಶನ್​ ವತಿಯಿಂದ ಖಾಸಗಿ ಆಸ್ಪತ್ರೆ ಹಾಗೂ ಫನಾ ಅಡಿಯಲ್ಲಿ ಬರುವ ವೈದ್ಯರು ಕಪ್ಪು ಪಟ್ಟಿ ಧರಿಸಿ ಚಾಮರಾಜಪೇಟೆಯ ಭಾರತೀಯ ವೈದ್ಯಕೀಯ ಸಂಸ್ಥೆಯ ಕಚೇರಿ ಎದುರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಸುಮಾರು 2 ಗಂಟೆಗಳ ಕಾಲ ಆಸ್ಪತ್ರೆಯಲ್ಲಿ ಒಪಿಡಿ ಬಂದ್ ಮಾಡಿ ಕೇವಲ ತುರ್ತು ಚಿಕಿತ್ಸಾ ಸೇವೆಗೆ ಮಾತ್ರ ಅವಕಾಶ ನೀಡಿದರು. ಇದರೊಟ್ಟಿಗೆ ಇಡೀ ದಿನ ಕಪ್ಪು ಪಟ್ಟಿ ಧರಿಸಿ ವೈದ್ಯರು ಕಾರ್ಯನಿರ್ವಹಿಸಿದರು.

For All Latest Updates

TAGGED:

ABOUT THE AUTHOR

...view details