ಬೆಂಗಳೂರು: ವಿದ್ಯುತ್ ದರ ಏರಿಕೆಯನ್ನು ಖಂಡಿಸಿ ವಾಟಾಳ್ ನಾಗರಾಜ್ ವಿಭಿನ್ನವಾಗಿ ಪ್ರತಿಭಟನೆ ಮಾಡಿದರು. ಬೆಳಕಿನಲ್ಲಿ ಗ್ಯಾಸ್ ಲೈಟ್, ಎಮರ್ಜೆನ್ಸಿ ಲೈಟ್ ತಂದು ಸಮ್ಮಿಶ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ವಿದ್ಯುತ್ ದರ ಏರಿಕೆ: ಎಮರ್ಜನ್ಸಿ ಲೈಟ್ ಹಿಡಿದು ವಾಟಳ್ ನಾಗರಾಜ್ ಪ್ರತಿಭಟನೆ -
ವಿದ್ಯುತ್ ದರ ಏರಿಕೆಯನ್ನು ಖಂಡಿಸಿ ಇಂದು ವಾಟಾಳ್ ನಾಗರಾಜ್ ಕೆಪಿಟಿಸಿಎಲ್ ವಿರುದ್ಧ ವಿಭಿನ್ನವಾಗಿ ಪ್ರತಿಭಟನೆಗೆ ನಡೆಸಿದರು.
ವಿದ್ಯುತ್ ದರ ಏರಿಕೆ
ಮೈಸೂರು ಬ್ಯಾಂಕ್ ಸರ್ಕಲ್ ನಲ್ಲಿರುವ ಕೆಪಿಟಿಸಿಎಲ್ ಕಚೇರಿ ಮುಂದೆ ಮಲಗಿ ಆಕ್ರೋಶ ವ್ಯಕ್ತಪಡಿಸಿದ ವಾಟಾಳ್ ನಾಗರಾಜ್, ಕಚೇರಿಗೆ ನುಗಲು ಎತ್ನಿಸಿದಾಗ ಪೋಲಿಸರು ವಶಕ್ಕೆ ಪಡೆದರು. ಇದಕ್ಕೂ ಮುನ್ನ ಮಾತಾನಾಡಿದ ವಾಟಾಳ್ ನಾಗರಾಜ್, ವಿದ್ಯುತ್ ದರ ಏರಿಕೆ ಅವೈಜ್ಞಾನಿಕವಾಗಿದೆ ಎಂದರು.
ತಮಗೆ ಇಷ್ಟ ಬಂದಷ್ಟು ಏಕಾಏಕಿ ವಿದ್ಯುತ್ ದರ ಏರಿಕೆ ಮಾಡಿರುವುದು ಸರಿಯಲ್ಲ. ಈಗಾಗಲೇ ಆಹಾರ ಪದಾರ್ಥಗಳ ತರಕಾರಿ ಬೆಲೆ ಗಗನಕ್ಕೆರಿದೆ. ಇತ್ತ ಕುಡಿಯುವ ನೀರಿನ ಬೆಲೆಯು ಏರಿಕೆ ಆಗಿದ್ದು, ವಿದ್ಯುತ್ ದರ ಏರಿಕೆಯಿಂದಾಗಿ ಜನ ಸಾಮಾನ್ಯರಿಗೆ ಇದು ಪೆಟ್ಟು ಬೀಳುತ್ತೆ ಅಂತ ಹೇಳಿದರು.