ಬೆಂಗಳೂರು: ಪೊಲೀಸ್ ಠಾಣೆ ಎಂದರೆ ಭಯವಲ್ಲ, ಭರವಸೆಯಂತಾಗಬೇಕು. ಈ ನಿಟ್ಟಿನಲ್ಲಿ ಕರ್ನಾಟಕ ಪೊಲೀಸ್ ಕಾರ್ಯಪ್ರವೃತ್ತವಾಗಿದೆ. ಸಾರ್ವಜನಿಕರಿಂದ ಪೊಲೀಸ್ ಇಲಾಖೆಗೆ ಸಂಬಂಧಿಸಿದಂತೆ ಮನವಿಗಳನ್ನು ಸ್ವೀಕರಿಸಲು ರಾಜ್ಯ ಗೃಹ ಇಲಾಖೆ ಅಧಿಕೃತ ಸಾಮಾಜಿಕ ಜಾಲತಾಣಗಳನ್ನು ಪ್ರಾರಂಭಿಸಿದೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಪೊಲೀಸ್ ಠಾಣೆ ಎಂದರೆ ಭಯವಲ್ಲ, ಭರವಸೆಯಂತಾಗಬೇಕು: ಎಂ.ಬಿ.ಪಾಟೀಲ್ - undefined
ಸಾರ್ವಜನಿಕರಿಂದ ಪೊಲೀಸ್ ಇಲಾಖೆಗೆ ಸಂಬಂಧಿಸಿದಂತೆ ಮನವಿ ಸ್ವೀಕರಿಸಲು ರಾಜ್ಯ ಗೃಹ ಇಲಾಖೆ ಅಧಿಕೃತ ಸಾಮಾಜಿಕ ಜಾಲತಾಣಗಳನ್ನು ಪ್ರಾರಂಭಿಸಿದೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಎಂ.ಬಿ ಪಾಟೀಲ್
ಪೊಲೀಸ್ ಇಲಾಖೆಗೆ ಸಂಬಂಧಿಸಿದಂತೆ ಇಂದು ಬೆಂಗಳೂರಿನಲ್ಲಿ ನಗರ ಪೊಲೀಸ್ ಆಯುಕ್ತ ಆಲೋಕ್ ಕುಮಾರ್ ಮಾತನಾಡಿ, ಜನಪರ ಪೊಲೀಸ್ ವ್ಯವಸ್ಥೆ ಮಾಡಲಾಗಿದೆ. ಸಂದರ್ಶಕರು ಯಾರೇ ಬಂದ್ರು ಅವರಿಗೆ ಸಿಬ್ಬಂದಿ ಟೈಮ್ ಕೊಡಬೇಕು. ಮುಂದಿನ ದಿನ ದೂರು ನೀಡಲು ಟೋಕನ್ ಸಿಸ್ಟಂ ಕೂಡ ವ್ಯವಸ್ಥೆ ಮಾಡ್ತೀವಿ. ನೊಂದವರ ಸಮಸ್ಯೆಗಳನ್ನು ನಿವಾರಣೆ ಮಾಡುವುದಕ್ಕೆ ಪೊಲೀಸ್ ಠಾಣೆ ಇರೋದು. ಯಾರೇ ಏನೇ ಸಮಸ್ಯೆ ಎದುರಿಸುತ್ತಿದ್ರು ಅವರು ಠಾಣೆಗೆ ಬಂದು ದೂರು ಕೊಡಿ. ಠಾಣೆಯಲ್ಲಿ ಸರಿಯಾಗಿ ಸ್ಪಂದನೆ ಸಿಗದಿದ್ರೆ ಹಿರಿಯ ಅಧಿಕಾರಿಗಳನ್ನ ಭೇಟಿ ಮಾಡಿ ದೂರು ನೀಡಿ ಎಂದಿದ್ದಾರೆ.