ಕರ್ನಾಟಕ

karnataka

ETV Bharat / state

ಸುಮಲತಾ ಪ್ರಬುದ್ಧತೆಯನ್ನು ಜೆಡಿಎಸ್​ನವರು ಕಲಿಯಲಿ: ಡಿವಿಎಸ್ ಟೀಕೆ - Dvs on sumalatha

ಮಂಡ್ಯ ಸಂಸದೆ ಸುಮಲತಾರನ್ನು ನೋಡಿಯಾದ್ರೂ ಜೆಡಿಎಸ್​ನವರು ಬುದ್ದಿ ಕಲಿಯಲಿ. ರಾಜಕೀಯ ಅನುಭವ ಇಲ್ಲದಿದ್ದರೂ ಸುಮಲತಾ ಪ್ರಬುದ್ಧತೆ ಹೊಂದಿದ್ದಾರೆ ಎಂದು ಕೇಂದ್ರ ಸಚಿವ ಸದಾನಂದ ಗೌಡ ಟಾಂಗ್‌ ಕೊಟ್ಟರು.

ಡಿವಿಎಸ್

By

Published : Jun 9, 2019, 7:06 PM IST

ಬೆಂಗಳೂರು: ಸಂಸದೆ ಸುಮಲತಾರನ್ನು ನೋಡಿಯಾದರೂ ಜೆಡಿಎಸ್​ನವರು ಪಾಠ ಕಲಿಯಬೇಕು ಎಂದು ಕೇಂದ್ರ ಸಚಿವ ಸದಾನಂದ ಗೌಡ ಟಾಂಗ್ ನೀಡಿದ್ದಾರೆ.

ಮಂಡ್ಯ ಸಂಸದೆ ಸುಮಲತಾ ಪರ ಮಾತನಾಡಿದ ಡಿವಿಎಸ್

ಯಶವಂತಪುರದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾದ ಬಳಿಕ ಮಾತನಾಡಿದ ಅವರು, ಮಂಡ್ಯ ಸಂಸದೆ ಸುಮಲತಾರನ್ನು ನೋಡಿಯಾದ್ರೂ ಕಲಿಯಿರಿ. ರಾಜಕೀಯ ಅನುಭವ ಇಲ್ಲದಿದ್ದರೂ ಸುಮಲತಾ ಪ್ರಬುದ್ಧತೆ ಹೊಂದಿದ್ದಾರೆ. ಅದನ್ನು ಜೆಡಿಎಸ್​ನವರು ಕಲಿಯಬೇಕು. ಮತದಾರರು ವೋಟು ಮಾಡಿದ್ದಾರೆ. ಯಾವ ಪಕ್ಷಕ್ಕೂ ಸೇರಿ, ಯಾರ ಬಳಿಯೂ ಭಿಕ್ಷೆ ಬೇಡಲ್ಲ ಅಂತಾ ಸುಮಲತಾ ಹೇಳಿದ್ದಾರೆ. ಇದನ್ನು ಎಲ್ಲರೂ ಕಲಿಯಬೇಕು ಎಂದು ಸಲಹೆ ನೀಡಿದರು.

ಸಚಿವ ಡಿ.ಸಿ ತಮ್ಮಣ್ಣ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕೇರಳದ ಜನ ಮೋದಿಗೆ ವೋಟು ಕೊಟ್ರಾ? ಆದ್ರೂ ಮೋದಿ ಕೇರಳದ ಜನರ ಬಗ್ಗೆ ಏನಂದ್ರು? ಭಾರತ ಮೊದಲು ಎಂಬ ಭಾವನೆ ಇವರಿಗೆ ಇರಬೇಕು. ವೋಟು ಕೊಟ್ಟಿಲ್ಲ ಎನ್ನುವ ಕಾರಣಕ್ಕೆ ಮತದಾರರ ಬಗ್ಗೆ ಕೀಳು ಹೇಳಿಕೆ ನೀಡಬಾರದು ಎಂದು ಹೇಳಿದರು.

ಮಧ್ಯಂತರ ಚುನಾವಣೆ ಸಂಬಂಧ ನಿಖಿಲ್ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿವಿಎಸ್, ನಿಖಿಲ್ ಇಷ್ಟು ದೊಡ್ಡ ರಾಜಕಾರಣಿ ಆದ್ರಲ್ಲ, ನನಗೆ ಆಶ್ಚರ್ಯವಾಗುತ್ತಿದೆ. ಅವರು ಸಿನಿಮಾದಲ್ಲಿ ರಾಜಕಾರಣ ಮಾಡಿರಬಹುದು ಎಂದು ವ್ಯಂಗ್ಯವಾಡಿದರು.

'ಸಂಪುಟ ವಿಸ್ತರಣೆ ಸರ್ಕಾರ ಬೀಳಲು ಅಡಿಗಲ್ಲು':

ಸಂಪುಟ ವಿಸ್ತರಣೆಯೇ ಸರ್ಕಾರ ಪತನವಾಗಲು ಅಡಿಗಲ್ಲು ಆಗಲಿದೆ ಎಂದು ಡಿವಿಎಸ್ ಭವಿಷ್ಯ ನುಡಿದರು. ಅವರ ವಿಚಾರದಲ್ಲಿ ನಾನು ತಲೆ ಹಾಕಲ್ಲ. ಆದರೆ ಸರ್ಕಾರ ಉಳಿಸಲು ಮಾಡುವ ಈ ಸಾಹಸ ಕೊನೆಯ ಸಾಹ‌ಸವಾಗಲಿದೆ. ಸಂಪುಟ ವಿಸ್ತರಣೆಯೇ ಮೈತ್ರಿ ಸರ್ಕಾರಕ್ಕೆ ಮುಳುವಾಗಲಿದೆ ಎಂದು ತಿಳಿಸಿದರು.

'ಉ.ಕನ್ನಡಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕಿದೆ':

ಉತ್ತರ ಕನ್ನಡ ಜಿಲ್ಲೆ ಪಶ್ಚಿಮಘಟ್ಟಗಳ ಸಾಲು. ಅಲ್ಲಿ ಆಗಾಗ ಬೇರೆ ಬೇರೆ ಕಾಯಿಲೆಗಳು ಬರುತ್ತಿರುತ್ತವೆ. ಹೀಗಾಗಿ ಉತ್ತರ ಕನ್ನಡ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕಿದೆ‌ ಎಂದು ಅಭಿಪ್ರಾಯಪಟ್ಟರು. ಈ ಬಗ್ಗೆ ಕೇಂದ್ರದ ಮಂತ್ರಿಗಳ ಜೊತೆ ಮಾತನಾಡ್ತೇನೆ. ಕೇಂದ್ರದ ವಿಶೇಷ ಅನುದಾನ ಬಳಸಿ ಆಸ್ಪತ್ರೆ ನಿರ್ಮಾಣಕ್ಕೆ ಒತ್ತು ನೀಡುತ್ತೇವೆ. ಅನಂತ್ ಕುಮಾರ್ ಹೆಗಡೆಯವರನ್ನು ಜೊತೆಗೆ ಕರೆದುಕೊಂಡು ಹೋಗ್ತೇನೆ ಎಂದು ಸ್ಪಷ್ಟಪಡಿಸಿದರು.

'ಜಿಂದಾಲ್ ಭೂಮಿ ಜೇಬು ತುಂಬಿಸುವ ಕೆಲಸ':

ಜಿಂದಾಲ್​ಗೆ ಭೂಮಿ ನೀಡುವ ವಿಚಾರವಾಗಿ ಪ್ರತಿಕ್ರಿಯಿಸಿದ ಡಿವಿಎಸ್, ಇದು ಸಿಂಗಲ್ ಪಾಯಿಂಟ್ ಪೋಗ್ರಾಂ. ಇದು ಜೇಬು ತುಂಬಿಸುವ‌ ಕೆಲ್ಸ. ಸರ್ಕಾರಿ ಖಜಾನೆಯ ಲೂಟಿ ನಡೆಯುತ್ತಿದೆ ಎಂದು ಆರೋಪಿಸಿದರು.

For All Latest Updates

ABOUT THE AUTHOR

...view details