ಕರ್ನಾಟಕ

karnataka

ETV Bharat / state

ಶುಲ್ಕ ಪಾವತಿಸದಿದ್ದರೆ ಅನುದಾನ ತಡೆ: ಖಾಸಗಿ ಕಾಲೇಜುಗಳಿಗೆ ಶಿಕ್ಷಣ ಇಲಾಖೆ ನೋಟಿಸ್ - undefined

ಹಲವು ಖಾಸಗಿ ಅನುದಾನಿತ ಕಾಲೇಜುಗಳು ವಿದ್ಯಾರ್ಥಿಗಳಿಂದ ಶುಲ್ಕ ಸಂಗ್ರಹಿಸಿದ್ದರೂ ಕೋಟಿ ಕೋಟಿ ಹಣವನ್ನು ಸರ್ಕಾರಕ್ಕೆ ಪಾವತಿ ಮಾಡದೆ ಬಾಕಿ ಉಳಿಸಿಕೊಂಡಿವೆ.

ಶಿಕ್ಷಣ ಇಲಾಖೆ ನೋಟಿಸ್

By

Published : May 18, 2019, 1:21 PM IST

ಬೆಂಗಳೂರು: ವಿದ್ಯಾರ್ಥಿಗಳಿಂದ ಶುಲ್ಕ ಸಂಗ್ರಹಿಸಿದ್ದರೂ ಕೋಟಿ ಕೋಟಿ ಹಣವನ್ನು ಸರ್ಕಾರಕ್ಕೆ ಪಾವತಿ ಮಾಡದೇ ಬಾಕಿ ಉಳಿಸಿಕೊಂಡಿರುವ ಖಾಸಗಿ ಅನುದಾನಿತ ಕಾಲೇಜುಗಳಿಗೆ ರಾಜ್ಯ ಸರ್ಕಾರ ನೋಟಿಸ್ ಜಾರಿಗೊಳಿಸಿದೆ.

ಖಾಸಗಿ ಅನುದಾನಿತ ಕಾಲೇಜುಗಳು ವಿದ್ಯಾರ್ಥಿಗಳಿಂದ ಸಂಗ್ರಹಿಸಿದ್ದ ಬೋಧನಾ ಶುಲ್ಕ, ಲ್ಯಾಬ್ ಶುಲ್ಕವನ್ನು 2003 ರಿಂದ 2014 ರವರಿಗೂ ಸರ್ಕಾರಕ್ಕೆ ಕಟ್ಟಿಲ್ಲ. ಈ ಬಗ್ಗೆ ಎಚ್ಚೆತ್ತುಕೊಂಡ ಕಾಲೇಜು ಶಿಕ್ಷಣ ಇಲಾಖೆ ಹಣ ಬಾಕಿ ಉಳಿಸಿಕೊಂಡಿರುವ ಖಾಸಗಿ ಅನುದಾನಿತ ಕಾಲೇಜುಗಳಿಗೆ ನೋಟಿಸ್ ಜಾರಿಗೊಳಿಸಿದೆ. ನೋಟಿಸ್ ತಲುಪಿದ ಒಂದು ವಾರದೊಳಗೆ ಶುಲ್ಕ ಪಾವತಿ ಮಾಡದಿದ್ದರೆ ವೇತನ ಅನುದಾನ ತಡೆ ಹಿಡಿಯುವುದಾಗಿ ಕಾಲೇಜುಗಳಿಗೆ ಎಚ್ಚರಿಕೆ ನೀಡಿದೆ.

ಶಿಕ್ಷಣ ಇಲಾಖೆ ನೋಟಿಸ್

ಕಾಲೇಜುಗಳು ಸರ್ಕಾರಕ್ಕೆ ಪಾವತಿ ಮಾಡಬೇಕಾದ ಮೊತ್ತ:

  • ಕ್ರೈಸ್ಟ್ ಯೂನಿವರ್ಸಿಟಿ : 1.77 ಕೋಟಿ
  • ಸಂತ ಜೋಸೆಫ್ ಕಲಾ ಹಾಗೂ ವಿಜ್ಞಾನ ಕಾಲೇಜು: 1.06 ಕೋಟಿ
  • ಜ್ಯೋತಿ ನಿವಾಸ್ ಕಾಲೇಜ್: 61.94 ಲಕ್ಷ
  • ಸಂತ ಜೋಸೆಫರ ವಾಣಿಜ್ಯ ಕಾಲೇಜು: 44.51 ಲಕ್ಷ

ಪಿಯುಸಿ ವಿದ್ಯಾರ್ಥಿಗಳಿಗೆ ಯೂನಿಫಾರ್ಮ್ ಕಡ್ಡಾಯ ಅಲ್ಲ !

ಪಿಯುಸಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ಕಡ್ಡಾಯ ಅಲ್ಲ ಎಂದು ಪದವಿ ಪೂರ್ವ ಶಿಕ್ಷಣ ಮಂಡಳಿ ಸುತ್ತೋಲೆ ಹೊರಡಿಸಿದೆ. ಯೂನಿಫಾರ್ಮ್ ಕಡ್ಡಾಯ ಹೆಸರಲ್ಲಿ ಪದವಿ ಪೂರ್ವ ಕಾಲೇಜುಗಳ ಆಡಳಿತ ಮಂಡಳಿಗಳು ವಿದ್ಯಾರ್ಥಿಗಳಿಂದ ಹೆಚ್ಚುವರಿ ಹಣ ವಸೂಲಿ ಮಾಡುತ್ತಿದ್ದ ಹಲವಾರು ದೂರುಗಳನ್ನು ಸ್ವೀಕರಿಸಿದ್ದ ಪಿಯು ಮಂಡಳಿ 2018-19 ರಲ್ಲೇ ಯೂನಿಫಾರ್ಮ್ ಕಡ್ಡಾಯ ಅಲ್ಲ ಎಂಬ ಸುತ್ತೋಲೆ ಹೊರಡಿಸಿತ್ತು. ಈ ವರ್ಷ ಕೂಡ ಸುತ್ತೋಲೆ‌ ಪಾಲಿಸುವಂತೆ ಸೂಚಿಸಿರುವುದಾಗಿ ಬೋರ್ಡ್‌ ನಿರ್ದೇಶಕಿ ಸಿ.ಶಿಖಾ ಸ್ಪಷ್ಟಪಡಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details