ಬೆಂಗಳೂರು: ಸಿನಿಮಾ ಎಂಬ ಮಾಯಾ ಲೋಕಕ್ಕೆ ಕನಸಿನ ಕುದುರೆಯೆರಿ "ಅಡ್ಡದಾರಿ" ಮೂಲಕ ಹೊಸ ತಂಡವೊಂದು ಗಾಂಧಿನಗರಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಅಡ್ಡದಾರಿ' ಮೂಲಕ ಚಂದನವನಕ್ಕೆ ನ್ಯೂ ಎಂಟ್ರಿ ಈ ಹಿಂದೆ "ಚಿತ್ರಾನ್ನ" ಎಂಬ ಸಿನಿಮಾ ಮಾಡಿದ ಅನುಭವವಿರುವ ನಿರ್ದೇಶಕ ಆರ್ಯವರ್ಧನ್, ರಘುವಿಜಯ ಎಂಬ ನವ ನಟನನ್ನು "ಅಡ್ಡದಾರಿ" ಎಂಬ ಚಿತ್ರದ ಮೂಲಕ ನಾಯಕನಾಗಿ ಕರೆದುಕೊಂಡು ಚಂದನವನಕ್ಕೆ ಬಂದಿದ್ದು. ಇಂದು "ಅಡ್ಡದಾರಿ" ಚಿತ್ರದ ಮುಹೂರ್ತ ನೆರವೇರಿದೆ. ಇನ್ನು ಅಡ್ಡದಾರಿ ಚಿತ್ರ ಲವ್ ಸ್ಟೋರಿ ಆಗಿದ್ದು ಸ್ನೇಹಿತರ ಸುತ್ತ ಸುತ್ತುವ ಚಿತ್ರವಾಗಿದೆ. ಶ್ರೀಮಂತ ಹುಡುಗಿಯನ್ನು ಹುಡುಗನು ಪ್ರೀತಿ ಮಾಡಿ ಹುಡುಗಿಗಾಗಿ ಹಣದ ಹಿಂದೆ ಬಿದ್ದು. ಹಣ ಸಂಪಾದನೆ ಮಾಡಲಿಕ್ಕಾಗಿ ಯಾವ ರೀತಿಯ ಅಡ್ಡದಾರಿ ಹಿಡಿಯುತ್ತಾನೆ ಎಂಬುದೇ ಚಿತ್ರದ ಒನ್ ಲೈನ್ ಸ್ಟೋರಿ ಯಾಗಿದೆ. ಚಿತ್ರದಲ್ಲಿ ರಘುವಿಜಯ ಲೀಡ್ ರೋಲ್ ಪ್ಲೇ ಮಾಡುತ್ತಿದ್ದು . ಅವರ ಸ್ನೇಹಿತರಾಗಿ ಇನ್ನು ನಾಲ್ಕು ಹೊಸಮುಖಗಳು ತಮ್ಮ ಅದೃಷ್ಟ ಪರೀಕ್ಷೆಗೆ ರೆಡಿಯಾಗಿದ್ದಾರೆ.
ಅಲ್ಲದೆ ಚಿತ್ರದಲ್ಲಿ 5 ನಾಯಕಿಯರಿದ್ದು. ಬಹುಭಾಷಾ ನಟ ಚರಣರಾಜ್ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸುವ ಸಾಧ್ಯತೆಯಿದ್ದು ಚಿತ್ರತಂಡ ಚರಣ್ ರಾಜ್ ಅವರ ಜೊತೆ ಒಂದು ಸುತ್ತಿನ ಮಾತುಕತೆ ಮುಗಿಸಿದ್ದಾರೆ. ಇನ್ನು ಚಿತ್ರವನ್ನು ಏ ವಾಕರ್ಸ್ ಕ್ರಿಯೇಷನ್ಸ್ ಲಾಂಛನದಡಿ ವಿಜಯ ಮುನೇಗೌಡ ಹಾಗೂ ವಿ ರಾಯಪ್ಪ ಈ ಚಿತ್ರಕ್ಕೆ ಹಣ ಹೂಡಿಕೆ ಮಾಡ್ತಿದ್ದಾರೆ. ಅಲ್ಲದೆ ತುಂಬಾ ದಿನಗಳ ನಂತರ ಸಂಗೀತ ನಿರ್ದೇಶಕ ರಾಜೇಶ್ ರಾಮನಾಥ್ ಈ ಚಿತ್ರಕ್ಕೆ ಟ್ಯೂನ್ ಕಂಪೋಸ್ ಮಾಡುತ್ತಿರುವುದು ವಿಶೇಷವಾಗಿದೆ.
ಇನ್ನೂ ಈಗಾಗಲೇ ಅಡ್ಡದಾರಿ ಚಿತ್ರದ ಸ್ಕ್ರಿಪ್ಟ್ ವರ್ಕ್ ಕಂಪ್ಲೀಟ್ ಆಗಿದ್ದು ಬೆಂಗಳೂರು ಸುತ್ತಮುತ್ತ ಚಿತ್ರದ ಶೂಟಿಂಗ್ ಮಾಡಿಲಿದ್ದು , ಒಂದು ಸಾಂಗ್ ಗಾಗಿ ವಿದೇಶ ಹೋಗಲು ಚಿತ್ರತಂಡ ಪ್ಲಾನ್ ಮಾಡ್ತಾಯಿದೆ ಎಂದು ನಿರ್ದೇಶಕರು ಹೇಳಿದ್ದಾರೆ. ಆ ಚಿತ್ರದಲ್ಲಿ ಬಹುತೇಕ ಎಲ್ಲ ಕಲಾವಿದರು ಹೊಸಬರೇ ಆಗಿದ್ದು 'ಅಡ್ಡದಾರಿ' ಮೂಲಕ ಬರುತ್ತಿರುವ ಈ ತಂಡ ಚಂದನವನದ ಮುಖ್ಯರಸ್ತೆಯಲ್ಲಿ ಕಾಣಿಸಿಕೊಳ್ಳುತ್ತಾರಾ? ಕಾದು ನೋಡಬೇಕಿದೆ.