ಕರ್ನಾಟಕ

karnataka

ETV Bharat / state

ಗಿಡ ನೆಟ್ಟು ಪೋಸ್​​​ ಕೊಟ್ಟರೆಂಬ ಆರೋಪಕ್ಕೆ ಮೇಯರ್ ಗಂಗಾಂಬಿಕೆ ತಿರುಗೇಟು - undefined

'ವಿಶ್ವಪರಿಸರ ದಿನ'ಕ್ಕೆ ಮೇಯರ್​​ ಗಂಗಾಂಬಿಕೆಯವರು ಎರಡು ಸಸಿಗಳನ್ನು ನೆಟ್ಟು ಮಾಧ್ಯಮಗಳ ಮುಂದೆ ಫೋಸ್​​ ಕೋಟ್ಟಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ವ್ಯಂಗ್ಯವಾಡಿದ್ದಾರೆ. ಇದಕ್ಕೆ ಮೇಯರ್​ ಗಂಗಾಬಿಕೆ ಖಾರವಾಗಿಯೇ ರಿಪ್ಲೈ ಕೊಟ್ಟಿದ್ದಾರೆ.

ವಿಶ್ವಪರಿಸರ ದಿನ

By

Published : Jun 6, 2019, 6:29 PM IST

Updated : Jun 6, 2019, 7:16 PM IST

ಬೆಂಗಳೂರು: ಬಿಬಿಎಂಪಿ ಮೇಯರ್​ ಗಂಗಾಂಬಿಕೆ ಹಾಗೂ ಬಿಬಿಎಂಪಿಯ ವಿರೋಧ ಪಕ್ಷ ನಾಯಕ ಪದ್ಮನಾಭರೆಡ್ಡಿ ನಡುವೆ ಲೆಟರ್​​ ವಾರ್​ ಶುರುವಾಗಿದೆ. ವಿಶ್ವ ಪರಿಸರ ದಿನದಂದು ಮೇಯರ್ ಗಂಗಾಬಿಕೆ​ ಪೋಸ್​​ ಕೊಡಲು ಗಿಡ ನೆಟ್ಟಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿ ವ್ಯಂಗ್ಯ ಮಾಡಿದ್ದಾರೆ.

ಮೇಯರ್ ಗಂಗಾಬಿಕೆ ಪ್ರತಿಕ್ರಿಯೆ​

ಗಿಡ ನೆಡುವ ಮೂಲಕ ಮೇಯರ್ ಗಂಗಾಂಬಿಕೆ ಹಾಗೂ ಅಧಿಕಾರಿ ವರ್ಗದವರು ಪರಿಸರ ದಿನಾಚರಣೆ ಆಚರಿಸಿದ್ದರು. ಆದ್ರೆ ಮೇಯರ್ ನಡೆಯನ್ನು ಟೀಕಿಸಿ, ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಪತ್ರ ಬರೆದಿದ್ದು, ಈ ಪತ್ರಕ್ಕೆ ಉತ್ತರಿಸಿರುವ ಮೇಯರ್ ಅವರ ಲೆಟರ್ ಇದೀಗ ಬಹಿರಂಗವಾಗಿದೆ.

ಪದ್ಮನಾಭ ರೆಡ್ಡಿಯವರ ಪತ್ರ

ಈ ಬಗ್ಗೆ ಮಾತನಾಡಿದ ಮೇಯರ್​​ ಗಂಗಾಂಬಿಕೆ, ಪದ್ಮನಾಭರೆಡ್ಡಿಯವರು ಅನೇಕ ವರ್ಷಗಳಿಂದ ಕಾರ್ಪೊರೇಟರ್​​ ಆಗಿದ್ದಾರೆ. ಅವರು ಕಾರ್ಪೊರೇಟರ್​ ಆದಾಗಿನಿಂದಲೂ ಈವರೆಗೆ ಗಿಡಮರಗಳನ್ನು ನೆಟ್ಟು, ಬೆಳೆಸಿ ಅವರ ವಾರ್ಡ್​ ಇದೀಗ​ ನೆರಳಿನ ನಂದನವಾಗಿದೆಯೇ? ಎಂದು ಪರೋಕ್ಷವಾಗಿ ತಿವಿದಿದ್ದಾರೆ.

ಮೇಯರ್​​ ಗಂಗಾಂಬಿಕೆ ಬರೆದ ಪತ್ರ
Last Updated : Jun 6, 2019, 7:16 PM IST

For All Latest Updates

TAGGED:

ABOUT THE AUTHOR

...view details