ಸೋಮವಾರ ತಡರಾತ್ರಿವರೆಗೂ ನಡೆಯದ ವಿಶ್ವಾಸಮತ ಯಾಚನೆ
ಮಂಗಳವಾರ ಬೆಳಗ್ಗೆ 10 ಗಂಟೆಗೆ ವಿಧಾನಸಭಾ ಕಲಾಪ ಮುಂದೂಡಿಕೆ
ಸಂಜೆ 4 ಗಂಟೆ ಒಳಗೆ ಚರ್ಚೆ ಪೂರ್ಣಗೊಳಿಸಿ, 6 ಗಂಟೆ ಒಳಗೆ ವಿಶ್ವಾಸಮತ ಪ್ರಕ್ರಿಯೆ ಮುಗಿಸಲು ಮೈತ್ರಿ ನಾಯಕರಿಗೆ ಸ್ಪೀಕರ್ ಸೂಚನೆ
01:26 July 23
ಸದನದಲ್ಲಿ ಬರೀ ಚರ್ಚೆ-ಗದ್ದಲ, ಕಲಾಪ ಮಂಗಳವಾರಕ್ಕೆ ಮುಂದೂಡಿಕೆ... 'ವಿಶ್ವಾಸ'ಕ್ಕೆ ಸ್ಪೀಕರ್ರಿಂದ ಡೆಡ್ಲೈನ್
ಸೋಮವಾರ ತಡರಾತ್ರಿವರೆಗೂ ನಡೆಯದ ವಿಶ್ವಾಸಮತ ಯಾಚನೆ
ಮಂಗಳವಾರ ಬೆಳಗ್ಗೆ 10 ಗಂಟೆಗೆ ವಿಧಾನಸಭಾ ಕಲಾಪ ಮುಂದೂಡಿಕೆ
ಸಂಜೆ 4 ಗಂಟೆ ಒಳಗೆ ಚರ್ಚೆ ಪೂರ್ಣಗೊಳಿಸಿ, 6 ಗಂಟೆ ಒಳಗೆ ವಿಶ್ವಾಸಮತ ಪ್ರಕ್ರಿಯೆ ಮುಗಿಸಲು ಮೈತ್ರಿ ನಾಯಕರಿಗೆ ಸ್ಪೀಕರ್ ಸೂಚನೆ
22:41 July 22
ಸದನ ನಾಳೆಗೆ ಮುಂದೂಡಿಕೆ ಮಾಡಲು ಕಾಂಗ್ರೆಸ್-ಜೆಡಿಎಸ್ ಶಾಸಕರು ಒತ್ತಾಯ
ಸದನದಲ್ಲಿ ಗದ್ದಲ ಮಾಡುತ್ತಿರುವ ಜೆಡಿಎಸ್-ಕಾಂಗ್ರೆಸ್ ಪಕ್ಷದ ಸದಸ್ಯರು
ತಮ್ಮ ತಮ್ಮ ಸ್ಥಾನಗಳಲ್ಲಿ ಕುಳಿತುಕೊಳ್ಳುವಂತೆ ಡೆಪ್ಯುಟಿ ಸ್ಪೀಕರ್ ಕೃಷ್ಣಾರೆಡ್ಡಿ ಸೂಚನೆ
ನಿಮ್ಮ ಸೀಟ್ನಲ್ಲಿ ಕುಳಿತುಕೊಂಡು ಮಾತನಾಡುವಂತೆ ಆಡಳಿತ ಪಕ್ಷದ ಸದಸ್ಯರಿಗೆ ಮನವಿ
22:34 July 22
ಅಧ್ಯಕ್ಷರೇ ಸಮಯ ಆಯ್ತು, ಮುಕ್ತಾಯ ಮಾಡಿ ಎಂದ ಆಡಳಿತ ಪಕ್ಷದ ಸದಸ್ಯರು
ಸದನದಲ್ಲಿ ಜಿಂದಾಲ್ ಕಂಪನಿಗೆ ಭೂಮಿ ಹಸ್ತಾಂತರದ ಬಗ್ಗೆ ಜಾರ್ಜ್ ಮಾಹಿತಿ
ಈ ಹಿಂದೆ ಬಿಜೆಪಿ ಭೂಮಿ ನೀಡಿದಾಗ ನಾವು ಸ್ವಾಗತಿಸಿದ್ದೇವು: ಜಾರ್ಜ್
ಕಾರ್ಖಾನೆಗಳು ಹೆಚ್ಚಾಗಿ ಬರಲಿ ಎಂದು ನಾವು ಸ್ವಾಗತಿಸಿದ್ದೇವು
ಆದರೆ ಇದೀಗ ಬಿಜೆಪಿಯಿಂದ ವಿನಾಕಾರಣ ವಿವಾದ ಉದ್ಭವ
ಅಧ್ಯಕ್ಷರೇ ಸಮಯ ಆಯ್ತು, ಮುಕ್ತಾಯ ಮಾಡಿ ಎಂದ ಆಡಳಿತ ಪಕ್ಷದ ಸದಸ್ಯರು
22:34 July 22
ಎಷ್ಟೇ ಸಮಯವಾದರೂ ಇವತ್ತೇ ವಿಶ್ವಾಸಮತ ಯಾಚನೆ ಆಗಲಿ: ಬಿಎಸ್ವೈ
ಎಷ್ಟೇ ಸಮಯವಾದರೂ ಇವತ್ತೇ ವಿಶ್ವಾಸಮತ ಯಾಚನೆ ಆಗಲಿ: ಬಿಎಸ್ವೈ
ಎಷ್ಟೇ ಸಮಯವಾದರೂ ಇವತ್ತೇ ವಿಶ್ವಾಸಮತ ಯಾಚನೆ ಆಗಲಿ: ಬಿಎಸ್ವೈ
ನಮಗೆ ಊಟದ ವ್ಯವಸ್ಥೆ ಮಾಡುವಂತೆ ವಿಪಕ್ಷ ನಾಯಕ ಮನವಿ
ನಾಳೆಗೆ ಮುಂದೂಡಿಕೆ ಮಾಡುವಂತೆ ಆಡಳಿತ ಪಕ್ಷದ ಸದಸ್ಯರಿಂದ ಗದ್ದಲ
ಅಧಿಕಾರಕ್ಕೆ ಬರಲು ಬಿಜೆಪಿಯವರು ಕಾಯುತ್ತಿದ್ದಾರೆ: ಆಡಳಿತ ಪಕ್ಷದ ಸದಸ್ಯರು
ಸದನವನ್ನ ನಾಳೆಗೆ ಮುಂದೂಡಿಕೆ ಮಾಡಿ: ಕೆಜೆ ಜಾರ್ಜ್
22:03 July 22
ಅತೃಪ್ತರಿಗೆ ಡಿಕೆಶಿ ವಾರ್ನ್
21:49 July 22
ವಿಶ್ವಾಸ ನಿರ್ಣಯಕ್ಕೆ ನಾನು ಸಿದ್ಧನಿದ್ದೇನೆ: ಸಿಎಂ ಹೆಚ್ಡಿಕೆ
21:37 July 22
ನಾನು ರಾಜೀನಾಮೆ ನೀಡಿದ್ದೇನೆ ಎಂದು ಸುಳ್ಳು ನಕಲಿ ಪತ್ರ: ಸಿಎಂ ಹೆಚ್ಡಿಕೆ
ಶಾಸಕರು ತೆರಳುವಾಗಿ ಝೀರೋ ಟ್ರಾಫಿಕ್ ಮಾಡಿರಲಿಲ್ಲ
ಹಿರಿಯ ಪೊಲೀಸ್ ಅಧಿಕಾರಿಗಳು ಈಗಾಗಲೇ ಮಾಹಿತಿ ನೀಡಿದ್ದಾರೆ
ನಾನು ರಾಜೀನಾಮೆ ನೀಡಿದ್ದೇನೆ ಎಂದು ಸುಳ್ಳು ನಕಲಿ ಪತ್ರ: ಸಿಎಂ ಹೆಚ್ಡಿಕೆ
ಮುಖ್ಯಮಂತ್ರಿ ಆಗಲು ಇಷ್ಟೊಂದು ಕೆಳ ಮಟ್ಟದ ರಾಜಕಾರಣ ನಡೆಯುತ್ತಿದೆ
ನಕಲಿ ರಾಜೀನಾಮೆ ಪತ್ರದ ಬಗ್ಗೆ ಮಾಹಿತಿ ನೀಡಿದ ಕುಮಾರಸ್ವಾಮಿ
21:31 July 22
ಝೀರೋ ಟ್ರಾಫಿಕ್ ಬಗ್ಗೆ ಯಾರು ಅನುಮತಿ ನೀಡಿಲ್ಲ: ಸ್ಪೀಕರ್
21:26 July 22
ನಾಳೆ ಇನ್ನೊಬ್ಬರು ನನ್ನ ಬಗ್ಗೆ ಹಗುರವಾಗಿ ಮಾತನಾಡಬೇಕಾಗಿಲ್ಲ: ಸ್ಪೀಕರ್
21:12 July 22
ಬೇರೆ ಮಾತು ಬಿಟ್ಟು ವಿಶ್ವಾಸಮತ ಯಾಚನೆ ಮಾಡಿ: ಬಿಜೆಪಿ ಸದಸ್ಯ ಮಾಧುಸ್ವಾಮಿ
21:11 July 22
21:04 July 22
ಸಿಎಂ ಕುಮಾರಸ್ವಾಮಿ ನಕಲಿ ರಾಜೀನಾಮೆ ಪತ್ರದ ಬಗ್ಗೆ ಮಾಹಿತಿ
20:52 July 22
ಕೊಟ್ಟ ಮಾತಿನಂತೆ ಇವತ್ತು ವಿಶ್ವಾಸಮತ ಯಾಚನೆ ಮಾಡಿ: ಬಿಎಸ್ವೈ
20:41 July 22
ಉಳಿಸಿ..ಉಳಿಸಿ ಸರ್ಕಾರ ಉಳಿಸಿ ಎಂದು ಆಡಳಿತ ಸದಸ್ಯರಿಂದ ಘೋಷಣೆ
20:36 July 22
ರಾತ್ರಿ 12ಗಂಟೆಯಾದರೂ ನಾವೂ ಕುಳಿತುಕೊಳ್ಳುತ್ತೇವೆ: ಬಿಎಸ್ವೈ
20:22 July 22
ಯಾವುದೇ ಕಾರಣಕ್ಕೂ ಕಲಾಪ ಮುಂದೂಡಿಕೆ ಮಾಡಲ್ಲ ಎಂದ ಸ್ಪೀಕರ್
20:01 July 22
ರಾತ್ರಿ 9 ಗಂಟೆಗೆ ವಿಶ್ವಾಸಮತ ಸಾಬೀತು ಮಾಡಲು ಸಿಎಂಗೆ ಸ್ಪೀಕರ್ ಖಡಕ್ ಸೂಚನೆ!?
18:44 July 22
18:21 July 22
ಕಲಾಪ ಮುಂದೂಡಿಕೆ
18:12 July 22
17:45 July 22
17:33 July 22
ಕಲಾಪಕ್ಕೆ ಸ್ಪೀಕರ್ ಆಗಮನ
17:17 July 22
17:03 July 22
ಝೀರೋ ಟ್ರಾಫಿಕ್ ಬಗ್ಗೆ ಕಾವೇರಿದ ಚರ್ಚೆ
17:00 July 22
ಸದನದಲ್ಲಿ ಇಸ್ರೋ ಸಾಧನೆಗೆ ಮೆಚ್ಚುಗೆ
ಚಂದ್ರಯಾನ-2 ಯಶಸ್ವಿ ಉಡಾವಣೆಗೆ ಸದನದಲ್ಲಿ ಅಭಿನಂದನೆ
ಸದನದ ಪರವಾಗಿ ಇಸ್ರೋ ವಿಜ್ಞಾನಿಗಳನ್ನು ಪ್ರಶಂಸಿಸಿದ ಡಿಸಿಎಂ ಡಾ.ಜಿ.ಪರಮೇಶ್ವರ್
16:47 July 22
ಕಣ್ಣೀರಾದ ಅರವಿಂದ ಲಿಂಬಾವಳಿ
16:22 July 22
ಸಂಜೆ ವೇಳೆಗೆ ಶಾಸಕರ ಹಾಜರಿಗೆ ಸೂಚನೆ
15:41 July 22
ಕಲಾಪ ಪುನರಾರಂಭ
14:12 July 22
ಈ ಪರಿಸ್ಥಿತಿಗೆ ನೀವೇ ಪರಿಹಾರ ಒದಗಿಸಬೇಕು: ಸಚಿವ ಬೈರೇಗೌಡ ಮನವಿ
13:59 July 22
ತಮಿಳುನಾಡಿನಲ್ಲಿ ಶಾಸಕರು ಪಕ್ಷಾಂತರ ಮಾಡಿದ್ದ ಬಗ್ಗೆ ಬೈರೇಗೌಡ ಪ್ರಸ್ತಾಪ
13:47 July 22
ರಾಜೀನಾಮೆ ನೀಡಿದ ಶಾಸಕರು ಪಕ್ಷಾಂತರ ಮಾಡಿದ್ದಾರೆ: ಕೃಷ್ಣಬೈರೇಗೌಡ
13:32 July 22
ಶಾಸಕರನ್ನ ಪ್ಲೈಟ್ ಹತ್ತಿಸಿದ ಬಿಎಸ್ವೈ ಸಹಾಯಕ: ಕೃಷ್ಣಬೈರೇಗೌಡ
13:20 July 22
ಸ್ವಯಂ ಪ್ರೇರಣೆಯಿಂದ ಎಲ್ಲರ ರಾಜೀನಾಮೆ ಸಾಧ್ಯವೇ?
13:06 July 22
ಸಂವಿಧಾನದಲ್ಲಿ ರಾಜೀನಾಮೆ ನೀಡಲು ಅವಕಾಶ: ಕೃಷ್ಣ ಬೈರೇಗೌಡ
13:00 July 22
ನಾನು ಯಾವುದೇ ಬಿರಿಯಾನಿ ತಿಂದಿಲ್ಲ: ಸಿಎಂ
12:48 July 22
ಶಾಸಕರನ್ನು ಖರೀದಿ ಮಾಡುವುದು ನೈತಿಕವೇ?
12:35 July 22
ಕೃಷ್ಣಬೈರೇಗೌಡರ ಪ್ರಸ್ತಾಪಕ್ಕೆ ಜಗದೀಶ್ ಶೆಟ್ಟರ್ ವಿರೋಧ
12:28 July 22
ಆಪರೇಷನ್ ಕಮಲದ ಬಗ್ಗೆ ಪ್ರಸ್ತಾಪಿಸಿದ ಕೃಷ್ಣಬೈರೇಗೌಡ
12:26 July 22
ಸಿಎಂ ಹಾಗೂ ಸ್ಪೀಕರ್ ವಿರುದ್ಧ ಹೈಕೋರ್ಟ್ನಲ್ಲಿ ಪಿಐಎಲ್ ಸಲ್ಲಿಕೆ
12:18 July 22
ಸುಪ್ರೀಂಕೋರ್ಟ್ನಿಂದ ಯಾವುದೇ ಗೊಂದಲವಿಲ್ಲದೇ ತೀರ್ಪು : ಸ್ಪೀಕರ್
12:00 July 22
ಇಲ್ಲೇ ರೂಲಿಂಗ್ ಕೊಡ್ತೇನಿ : ಸ್ಪೀಕರ್
11:44 July 22
ಇಂದೇ ವಿಶ್ವಾಸಮತ ಪ್ರಕ್ರಿಯೆ ಮುಗಿಸುವುದಾಗಿ ಹೇಳಿದ ಸ್ಪೀಕರ್
11:36 July 22
ವಿಶ್ವಾಸ ಮತಯಾಚನೆ ವಿಳಂಬಕ್ಕೆ ಒಪ್ಪದ ಸ್ಪೀಕರ್
11:22 July 22
ವಿಶ್ವಾಸ ಮತಯಾಚನೆಗೆ ಇಂದೇ ಸಮಯ ನಿಗದಿಪಡಿಸಿ: ಸ್ಪೀಕರ್ಗೆ ಬಿಜೆಪಿ ಮನವಿ
11:13 July 22
ಕುದುರೆ ವ್ಯಾಪಾರ ಆರೋಪ ಅರ್ಜಿ ತಿರಸ್ಕರಿಸಿದ ಸುಪ್ರೀಂ
11:07 July 22
ಶಕ್ತಿಸೌಧಕ್ಕೆ ಸಿಎಂ ಕುಮಾರಸ್ವಾಮಿ ಎಂಟ್ರಿ
11:04 July 22
ವಿಧಾನಸೌಧಕ್ಕೆ ಕಾಂಗ್ರೆಸ್ ಶಾಸಕರ ಆಗಮ
10:47 July 22
ವಿಧಾನಸೌಧಕ್ಕೆ ಸ್ಪೀಕರ್ ರಮೇಶ್ ಕುಮಾರ್ ಆಗಮನ
10:45 July 22
ವ್ಯಾಸರಾಜ ಮಠಕ್ಕೆ ಸಿಎಂ ಭೇಟಿ
10:33 July 22
ಅರ್ಜಿ ವಿಚಾರಣೆ ಇಂದು ಅಸಾಧ್ಯ ಎಂದ ಸುಪ್ರೀಂ
10:26 July 22
ಅತೃಪ್ತ ಶಾಸಕರಿಗೆ ಸ್ಪೀಕರ್ ಕಚೇರಿಯಿಂದ ನೋಟಿಸ್
10:23 July 22
ರಾಹುಕಾಲ ಮುಗಿಸಿ ವಿಧಾನಸೌಧಕ್ಕೆ ಆಗಮಿಸಿದ ಬಿಜೆಪಿ ಶಾಸಕರು
10:18 July 22
ವೀರಾಂಜನೇಯನ ಆಶೀರ್ವಾದ ಪಡೆದ ಬಿಎಸ್ವೈ
09:56 July 22
ಎಷ್ಟೇ ಸಮಯವಾದರೂ ಇವತ್ತೇ ವಿಶ್ವಾಸಮತ ಯಾಚನೆ ಆಗಲಿ: ಬಿಎಸ್ವೈ
ಬೆಂಗಳೂರು: ವಿಧಾನಸಭಾ ಅಧಿವೇಶನದಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ವಿಶ್ವಾಸ ಮತ ಯಾಚಿಸುತ್ತಾರೋ ಇಲ್ಲವೋ ಎಂಬ ಕುರಿತು ದೇಶಾದ್ಯಂತ ಚರ್ಚೆಯಾಗುತ್ತಿದ್ದು, ಸೋಮವಾರ ತಡರಾತ್ರಿಯಾದರೂ ವಿಶ್ವಾಸಮತ ಯಾಚನೆ ನಡೆಯಲಿಲ್ಲ.
ಹೆಚ್ಡಿಕೆ ಅವರು ಅತೃಪ್ತ ಶಾಸಕರು ಸದನಕ್ಕೆ ಹಾಜರಾಗಲೇಬೇಕೆಂದು ಮಾಡಿದ ಮನವಿಗೆ ಅವರು ಸೊಪ್ಪು ಹಾಕದಿರುವುದು ಮೈತ್ರಿ ಪಾಳಯಕ್ಕೆ ಕಂಟಕವಾಗಲಿದೆ.
ವಿಪ್ ಜಾರಿ ಕುರಿತು ಸುಪ್ರೀಂ ಕೋರ್ಟ್ ಇನ್ನೂ ಯಾವುದೇ ನಿರ್ಧಾರವನ್ನು ಪ್ರಕಟಿಸದಿರುವುದು ಸಾಂವಿಧಾನ ಬಿಕ್ಕಟ್ಟಿಗೆ ಎಡೆಮಾಡಿಕೊಡಬಹುದು.
ಶನಿವಾರವೇ ವಿಶ್ವಾಸ ಮತ ಯಾಚನೆ ಮಾಡಬೇಕೆಂದು ಬಿಜೆಪಿ ನಾಯಕರು ಪಟ್ಟು ಹಿಡಿದಿದ್ದರು. ಆದರೆ, ಸದನವನ್ನು ಸ್ಪೀಕರ್ ಸೋಮವಾರಕ್ಕೆ ಮುಂದೂಡಿದ್ದರು. ಆದರೆ ಸೋಮವಾರ ತಡರಾತ್ರಿಯಾದರೂ ವಿಶ್ವಾಸಮತಯಾಚನೆ ನಡೆಯಲಿಲ್ಲ. ಕಾರಣ ಕಲಾಪವನ್ನು ಮಂಗಳವಾರ ಬೆಳಗ್ಗೆ 10 ಗಂಟೆಗೆ ಮುಂದೂಡಲಾಗಿದೆ.