ಕರ್ನಾಟಕ

karnataka

ETV Bharat / state

ಕಾರು ಕಳ್ಳತನ ಮಾಡಿ ಹೈಫೈ ಜೀವನ, ಪೊಲೀಸರ ಬಲೆಗೆ ಬಿತ್ತು ಗ್ಯಾಂಗ್‌

ರಾತ್ರಿ ವೇಳೆ ಕಾರಿನಲ್ಲಿ ಬರುವ ಜನರನ್ನು ಅಡ್ಡಗಟ್ಟಿ ಸುಲಿಗೆ ಮಾಡಿ, ನಂತರ ಕಾರಿನೊಂದಿಗೆ ಪರಾರಿಯಾಗಿ ಮಾರಾಟ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್​ ಕೆ.ಪಿ ಅಗ್ರಹಾರ ಪೊಲೀಸರ ಬಲೆಗೆ ಬಿದ್ದಿದೆ. ​

ಕಾರು ಕಳ್ಳತನ

By

Published : Jun 2, 2019, 11:58 AM IST

ಬೆಂಗಳೂರು: ಐಷಾರಾಮಿ ಜೀವನಕ್ಕಾಗಿ ಕಾರುಗಳನ್ನ ಕದ್ದು ಮಾರಾಟ ಮಾಡ್ತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಕೆ.ಪಿ ಅಗ್ರಹಾರ ಪೊಲೀಸರು ಯಶಸ್ವಿಯಾಗಿದ್ದಾರೆ.

ಕಾರು ಕಳ್ಳತನ ಮಾಡುತ್ತಿರುವ ಖತರ್ನಾಕ್ ಗ್ಯಾಂಗ್

ಶಶಿಕುಮಾರ್,ಪ್ರಕಾಶ್,ಪ್ರಶಾಂತ್ ಹಾಗೂ ಮೋಹನ್ ಕುಮಾರ್ ಬಂಧಿತ ಆರೋಪಿಗಳಾಗಿದ್ದಾರೆ.

ಈ ಆರೋಪಿಗಳು ರಾತ್ರಿವೇಳೆ ಕಾರಿನಲ್ಲಿ ಬರುತ್ತಿದ್ದ ವ್ಯಕ್ತಿಗಳನ್ನ ಅಡ್ಡಗಟ್ಟುತ್ತಿದ್ದರು. ಬಳಿಕ ಅವರನ್ನು ಸುಲಿಗೆ ಮಾಡಿ, ಕಾರನ್ನ ಹೊತ್ತೊಯ್ದು, ಅನುಮಾನ ಬಾರದ ರೀತಿ ಮಾರಾಟ ಮಾಡುತ್ತಿದ್ದರು.

ಈ ಕುರಿತು ಕಾರು ಕಳೆದುಕೊಂಡವರು ಕೆ.ಪಿ ಅಗ್ರಹಾರ ಠಾಣೆಗೆ ದೂರು ನೀಡಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸರು ಸಿಸಿಟಿವಿ ದೃಶ್ಯ ಆಧರಿಸಿ ಆರೋಪಿಗಳನ್ನು ಬಂಧಿಸಿದ್ದು, ಅವರಿಂದ ಸುಲಿಗೆ ಮಾಡಿದ 4 ಕಾರು ಮತ್ತು 100 ಗ್ರಾಂ. ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಈ ಆರೋಪಿಗಳು ಸಿಲಿಕಾನ್ ಸಿಟಿಯ ಹಲವೆಡೆ ಇದೇ ರೀತಿಯ ಕೃತ್ಯ ಮಾಡಿರುವ ಶಂಕೆ ಇದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details