ಬೆಂಗಳೂರು:ಪತ್ರಿಕೆಗಳ ಇಂದಿನ ಸ್ಥಿತಿಗತಿಯ ಬಗ್ಗೆ ಅವಲೋಕಿಸಿದರೆ ಪತ್ರಕರ್ತರ ಸಂಘದ ಧ್ಯೇಯ ಹಾಗೂ ಮೌಲ್ಯಗಳನ್ನು ಪತ್ರಿಕೆಗಳು ಇಂದಿಗೂ ಅಳವಡಿಸಿಕೊಂಡಿವೆ ಅನ್ನೋದು ಗೊತ್ತಾಗುತ್ತೆ ಎಂದು ಖ್ಯಾತ ಬರಹಗಾರ ಬಾಬು ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.
ನಾರದ ಜಯಂತಿ ಅಂಗವಾಗಿ ಪತ್ರಕರ್ತರಿಗೆ ಸನ್ಮಾನ ಇಂದು ನಾರದ ಜಯಂತಿ ಅಂಗವಾಗಿ ಬೆಂಗಳೂರಿನ ಕೇಶವ ಕೃಪದ ರಾಷ್ಟ್ರೋತ್ಥಾನ ಪರಿಷತ್ನಲ್ಲಿ ನಡೆದ ಪತ್ರಕರ್ತರಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. ವಿಶ್ವ ಸಂವಾದ ಕೇಂದ್ರ ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಆಯೋಜಿಸಿತ್ತು.
ಸ್ವತಂತ್ರ ಪೂರ್ವದ ಎಲ್ಲಾ ಪತ್ರಕರ್ತರು ಸರಳ ಜೀವನ ನಡೆಸಿದ್ದಾರೆ. ಪತ್ರಿಕೆಗೆಳ ಉಳಿವಿಗಾಗಿ ಸಾಕಷ್ಟು ಹೋರಾಡಿದ್ದಾರೆ. ಆಗ ಬರಹದ ತೀಕ್ಷ್ಣತೆ ಎಷ್ಟಿತ್ತೆಂದರೆ ಪುಂಖಾನುಪುಂಖವಾಗಿ ಲೇಖನಗಳು ಬಂದಿವೆ. ನಾರದನ ಹೆಸರಲ್ಲಿ ಪತ್ರಕರ್ತರಿಗೆ ಪ್ರಶಸ್ತಿ ನೀಡುತ್ತಿರುವುದು ಪ್ರಾಚೀನ ಸಂಸ್ಕೃತಿಯನ್ನು ನೆನೆಪಿಸಿಕೊಂಡಂತೆ ಆಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಈ ವೇಳೆ ಹಿರಿಯ ಪತ್ರಕರ್ತ ಟಿ.ತಾ. ಶರ್ಮ ನೆನಪಿನ ಪುರಸ್ಕಾರವನ್ನು ಅಂಕಣಕಾರ ರೋಹಿತ್ ಶರ್ಮಾ ಹಾಗೂ ಬೆ.ಸು.ನಾ ಮಲ್ಯ ನೆನಪಿನ ಪುರಸ್ಕಾರವನ್ನು ಅಸೀಮಾ ಮಾಸಿಕ ಕಾರ್ಯನಿರ್ವಾಹಕ ಸಂಪಾದಕ ಸಂತೋಷ್ ತಮ್ಮಯ್ಯ ಅವರಿಗೆ ನೀಡಿ ಗೌರವಿಸಲಾಯಿತು.