ಬೆಂಗಳೂರು : ಬೆಳ್ಳಂಬೆಳಗ್ಗೆ ಪಾರ್ಕ್ನಲ್ಲಿ ಜಾಗಿಂಗ್ ಮಾಡೋ ಯುವತಿಯರನ್ನೇ ಟಾರ್ಗೇಟ್ ಮಾಡಿ ಕಿರುಕುಳ ನೀಡ್ತಿದ್ದ ಆರೋಪಿಯನ್ನ ಬೆನ್ನಟ್ಟಿರುವ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಶ್ರೀನಿವಾಸ ರೆಡ್ಡಿ ಬಂಧಿತ ಆರೋಪಿ.
ಬೆಂಗಳೂರು : ಬೆಳ್ಳಂಬೆಳಗ್ಗೆ ಪಾರ್ಕ್ನಲ್ಲಿ ಜಾಗಿಂಗ್ ಮಾಡೋ ಯುವತಿಯರನ್ನೇ ಟಾರ್ಗೇಟ್ ಮಾಡಿ ಕಿರುಕುಳ ನೀಡ್ತಿದ್ದ ಆರೋಪಿಯನ್ನ ಬೆನ್ನಟ್ಟಿರುವ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಶ್ರೀನಿವಾಸ ರೆಡ್ಡಿ ಬಂಧಿತ ಆರೋಪಿ.
ಇದೇ ತಿಂಗಳ 23 ರಂದು ಆರೋಪಿ ಶ್ರೀನಿವಾಸ ರೆಡ್ಡಿ, ಉತ್ತರಭಾರತ ಮೂಲದ ಯುವತಿ ಜೀವನ್ ಭೀಮಾನಗರದ ಮಿರಿಂಡಾ ಸ್ಕೂಲ್ ಬಳಿಯ ಪಾರ್ಕ್ನಲ್ಲಿ ವಾಕಿಂಗ್ ತೆರಳುತ್ತಿದ್ದ ವೇಳೆ ಅಸಭ್ಯವಾಗಿ ವರ್ತಿಸಿ ವಿಕೃತಿ ಮೆರೆದಿದ್ದ. ಅಷ್ಟೇ ಅಲ್ಲದೇ ಯುವತಿಯೊಂದಿಗೆ ಕೆಟ್ಟ ಪದಗಳನ್ನು ಬಳಸಿ ಮಾತನಾಡಿದ್ದ. ಇದನ್ನು ಪ್ರಶ್ನಿಸಿದ್ದಕ್ಕೆ ಯುವತಿಗೆ ಜೀವಬೆದರಿಕೆ ಹಾಕಿ, ಅವಳನ್ನು ಹಿಂಬಾಲಿಸಿ ಕಿರುಕುಳ ನೀಡಿದ್ದಾನೆ ಎಂದು ಆಕೆ ದೂರಿನಲ್ಲಿ ತಿಳಿಸಿದ್ದರು.
ನೊಂದ ಯುವತಿ ಆತನ ಪೊಟೋ ತೆಗೆದು ಜೀವನ್ ಭೀಮಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಐಪಿಸಿ ಸೆಕ್ಷನ್ 354 (ಲೈಂಗಿಕ ಕಿರುಕುಳ), 506 (ಜೀವಬೆದರಿಕೆ) ಕಾಯ್ದೆಯಡಿ ದೂರು ದಾಖಲಿಸಿ, ಆರೋಪಿಯನ್ನ ಬಂಧಿಸಿದ್ದಾರೆ.