ಕರ್ನಾಟಕ

karnataka

ETV Bharat / state

ಯಡಿಯೂರಪ್ಪ ಸಿಎಂ ಆಗೋ ಕನಸು ನನಸಾಗಲ್ಲ: ಪರಮೇಶ್ವರ್​​

ಮೋದಿ ಮತ್ತು ಬಿಜೆಪಿ‌ ಪರವಾಗಿ ಐಟಿ ಡಿಪಾರ್ಟ್​ಮೆಂಟ್​ ಕೆಲಸ ಮಾಡ್ತಿದೆ ಎಂದು ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಆರೋಪ. ಯಡಿಯೂರಪ್ಪರ ಸಿಎಂ ಕನಸು ಈಡೇರಲ್ಲ ಎಂದ ಡಿಸಿಎಂ. ಮೋದಿ ಹಲವು ಸಲ ರಾಜ್ಯಕ್ಕೆ ಬಂದು ಹೋಗುವುದು ಜನರನ್ನು ಮರಳು ಮಾಡುವ ಪ್ರಯತ್ನ ಎಂದು ವ್ಯಂಗ್ಯ.

ಉಪಮುಖ್ಯಮಂತ್ರಿ ಜಿ. ಪರಮೇಶ್ವರ್

By

Published : Apr 12, 2019, 8:58 PM IST

ಬೆಂಗಳೂರು: ನರೇಂದ್ರ ಮೋದಿ ಮತ್ತು ಭಾರತೀಯ ಜನತಾ ಪಕ್ಷದ ಪರವಾಗಿ ಐಟಿ ಡಿಪಾರ್ಟ್​ಮೆಂಟ್ ಕೆಲಸ ಮಾಡುತ್ತಿದೆ ಎಂದು ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಆರೋಪ ಮಾಡಿದರು.

ದೇವನಹಳ್ಳಿಯಲ್ಲಿ ವೀರಪ್ಪ ಮೊಯ್ಲಿ ಪರವಾಗಿ ಪ್ರಚಾರದ ಭಾಷಣ ಮುಗಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಐಟಿ ಡಿಪಾರ್ಟ್​ಮೆಂಟ್​ನವರದ್ದು ಯಾರು ಟ್ಯಾಕ್ಸ್ ಕಟ್ಟಿಲ್ಲ ಅವರ ಮನೆ ಮೇಲೆ ದಾಳಿ ಮಾಡುವ ಕೆಲಸ. ಆದರೆ ಅವರು ಚುನಾವಣೆ ಸಮಯದಲ್ಲಿ ಅದರಲ್ಲೂ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು‌, ಸಚಿವರು ಸೇರಿದಂತೆ ಕಾಂಗ್ರೆಸ್ ಮುಖಂಡರ ಮನೆ ಮೇಲೆ ದಾಳಿ ಏಕೆ ಮಾಡಬೇಕು. ‌ಐಟಿ‌ ಡಿಪಾರ್ಟ್​ಮೆಂಟ್ ಮೋದಿ ಮತ್ತು ಬಿಜೆಪಿ ಪಕ್ಷದ ಪರವಾಗಿ ಕೆಲಸ ಮಾಡುತ್ತಿದೆ ಎಂದು ಈಗಾಗಲೇ ನಮ್ಮ ಹಲವಾರು ಮುಖಂಡರು ಹೇಳಿದ್ದಾರೆ, ಈಗ ನಾನೂ ಹೇಳುತ್ತಿದ್ದೇನೆ ಎಂದರು.

ಯಡಿಯೂರಪ್ಪರ ಸಿಎಂ ಆಸೆ ಈಡೇರಲ್ಲ:

ಯಡಿಯೂರಪ್ಪ ಇನ್ನೊಂದು ಬಾರಿ ಮುಖ್ಯಮಂತ್ರಿ ಆಗಬೇಕು ಅನ್ನೋ ಕನಸು ಕಾಣುತ್ತಿದ್ದಾರೆ. ಆ ಕನಸು ಈಡೇರಲ್ಲ. ನಾವು ಮತ್ತು ಜೆಡಿಎಸ್ ಮೈತ್ರಿಯಾಗಿ ಹತ್ತು ತಿಂಗಳು ಅಧಿಕಾರ ನಡೆಸಿದ್ದೇವೆ. ಇನ್ನು ನಾಲ್ಕು ವರ್ಷ ಇದೇ ರೀತಿ ಉತ್ತಮ ಆಡಳಿತ ನಡೆಸುತ್ತೇವೆ. ಎಲ್ಲಾ ಪಕ್ಷಗಳಲ್ಲಿ ಇರುವ ಹಾಗೇ ನಮ್ಮ ಪಕ್ಷದಲ್ಲೂ ಗೊಂದಲಗಳಿವೆ. ಬಿಜೆಪಿ‌ಯ ಕೆಲವು ಶಾಸಕರೂ ಪ್ರಚಾರಕ್ಕೆ ಬಂದಿಲ್ಲ, ಅವರ ಹೆಸರನ್ನು ಹೇಳಿದ್ರೆ‌ ಮತ್ತೆ ಬಿಜೆಪಿಯಲ್ಲಿ ಅಸಮಾಧಾನ ಶುರುವಾಗುತ್ತದೆ. ಈಗ ಅವರ ಹೆಸರು ಹೇಳುವುದು ಬೇಡ ಎಂದು ತಿರುಗೇಟು ನೀಡಿದರು.

ಉಪಮುಖ್ಯಮಂತ್ರಿ ಜಿ. ಪರಮೇಶ್ವರ್

ಜನರನ್ನು ಮರಳು ಮಾಡುವುದಕ್ಕೆ ಮೋದಿ ರಾಜ್ಯಕ್ಕೆ ಬರ್ತಾರೆ:

ನರೇಂದ್ರ ಮೋದಿ ಹಲವು ಸಲ ರಾಜ್ಯಕ್ಕೆ ಬಂದು ಹೋಗುವುದು ಜನರನ್ನು ಮರಳು ಮಾಡುವ ಪ್ರಯತ್ನ ಮಾಡುವುದಕ್ಕೆ. ಈ ದೇಶದ ಯುವಕರಿಗೆ ನೀವು ಕೊಟ್ಟ ಭರವಸೆ ಏನಾಯಿತು? ದೇಶದ ಆರ್ಥಿಕತೆ ಸುಭದ್ರವಾಗಿಡುತ್ತೇನೆ ಎಂದು ಹೇಳಿದ ನೀವು ಹೆಚ್ಚು ಸಾಲ ತೆಗದುಕೊಳ್ಳಲು ಏಕೆ ಹೋದ್ರಿ? ಇದನ್ನೆಲ್ಲ ದೇಶದ ಜನರು, ಮತದಾರರು ಕೇಳ್ತಾರಲ್ವಾ? ಅದಕ್ಕೆ ಉತ್ತರ ಕೊಟ್ಟು ಹೋಗಿ ಎಂದು ನರೇಂದ್ರ ಮೋದಿಗೆ ಸವಾಲ್ ಹಾಕಿದರು.

ಲೈಟ್​ಗೆ ರಾಹುಲ್ ಗಾಂಧಿ ಹೆದರುತ್ತಾರೆ, ಇನ್ನು ದೇಶವನ್ನು ಯಾವ ರೀತಿ ಕಾಯುತ್ತಾರೆ ಎಂದು ಸ್ಮೃತಿ ಇರಾನಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಪರಮೇಶ್ವರ್, ಲೈಟ್​ಗೆ ಹೆದರುವ ಗಂಡಸು ಅಲ್ವೇ ಅಲ್ಲ ರಾಹುಲ್ ಗಾಂಧಿ. ಇಲ್ಲದೆ ಇದ್ರೆ ನರೇಂದ್ರ ಮೋದಿ ವಿರುದ್ಧ ತೊಡೆ ತಟ್ತಾ ಇದ್ರಾ..? ಇಡೀ ದೇಶದಲ್ಲಿ ಧೈರ್ಯವಾಗಿ ನರೇಂದ್ರ ಮೋದಿ ಅವರ ಭ್ರಷ್ಟಾಚಾರವನ್ನು ಬೀದಿಗೆ ಎಳೆಯುತ್ತಿರುವುದು ರಾಹುಲ್ ಗಾಂಧಿ ಎಂದರು.

For All Latest Updates

TAGGED:

ABOUT THE AUTHOR

...view details