ಬೆಂಗಳೂರು: ಐಎಂಎ ಸಂಸ್ಥೆಯ ಬಹುಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಶಿವಾಜಿನಗರ ಶಾಸಕ ರೋಷನ್ ಬೇಗ್ ಎಸ್ಐಟಿ ಮುಂದೆ ಹಾಜರಾಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಐಎಂಎ ವಂಚನೆ ಪ್ರಕರಣ: ಎಸ್ಐಟಿ ವಿಚಾರಣೆಗೆ ಬೇಗ್ ಹಾಜರಿ ಸಾಧ್ಯತೆ - undefined
ಐಎಂಎ ಸಂಸ್ಥೆಯ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಶಿವಾಜಿನಗರ ಶಾಸಕ ರೋಷನ್ ಬೇಗ್ ಎಸ್ಐಟಿ ಮುಂದೆ ಹಾಜರಾಗುವ ಸಾಧ್ಯತೆ ಇದ್ದು, ವಿಚಾರಣೆಗೆ ಹಾಜರಾದ್ರೆ ಡಿಸಿಪಿ ಗಿರೀಶ್ ವಿಚಾರಣೆ ನಡೆಸಲಿದ್ದಾರೆ.
![ಐಎಂಎ ವಂಚನೆ ಪ್ರಕರಣ: ಎಸ್ಐಟಿ ವಿಚಾರಣೆಗೆ ಬೇಗ್ ಹಾಜರಿ ಸಾಧ್ಯತೆ](https://etvbharatimages.akamaized.net/etvbharat/prod-images/768-512-3840668-thumbnail-3x2-lek.jpg)
ರೋಷನ್ ಬೇಗ್
ಐಎಂಎ ವಂಚನೆ ಪ್ರಕರಣದ ಆರೋಪಿ ಮನ್ಸೂರ್ ಖಾನ್, ಯೂಟ್ಯೂಬ್ನಲ್ಲಿ ಅಪ್ಲೋಡ್ ಮಾಡಿದ್ದ ವಿಡಿಯೋದಲ್ಲಿ ರೋಷನ್ ಬೇಗ್ ಹೆಸರನ್ನ ಉಲ್ಲೇಖಿಸಿದ್ದ. ಹೀಗಾಗಿ ಎಸ್ಐಟಿ ಸಿಒಡಿ ಕಚೇರಿಗೆ ವಿಚಾರಣೆಗೆ ಬರುವಂತೆ ಸೂಚನೆ ನೀಡಿದ್ರು.
ಕಳೆದ ವಿಚಾರಣೆ ವೇಳೆ ಎಸ್ಐಟಿ ಮುಂದೆ ಹಾಜರಾಗಲು ಹಜ್ ಯಾತ್ರೆ ಹಾಗೂ ಕೆಲ ವೈಯಕ್ತಿಕ ಕೆಲಸಗಳು ಇರುವ ಕಾರಣ ವಿಚಾರಣೆಗೆ ಹಾಜರಾಗಲು ಆಗುವುದಿಲ್ಲ, ಹೀಗಾಗಿ 15 ದಿನಗಳ ಕಾಲಾವಾಕಾಶ ನೀಡಬೇಕೆಂದು ಕೇಳಿಕೊಂಡಿದ್ರು. ಆದರೆ ಎಸ್ಐಟಿ ಅಧಿಕಾರಿಗಳು ಕಾಲಾವಕಾಶ ನೀಡದೇ, ಇಂದು ಹಾಜರಾಗಲು ಸೂಚನೆ ನೀಡಿದ್ದಾರೆ. ಇಂದು ವಿಚಾರಣೆಗೆ ಹಾಜರಾದ್ರೆ ಡಿಸಿಪಿ ಗಿರೀಶ್ ವಿಚಾರಣೆ ನಡೆಸಲಿದ್ದಾರೆ.