ಬೆಂಗಳೂರು: ಐಎಂಎ ಕಂಪನಿಯ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಇಡಿ (ಜಾರಿ ನಿರ್ದೇಶನಾಲಯ), ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದು, ನಾಪತ್ತೆಯಾಗಿರುವ ಮಾಲೀಕ ಮೊಹಮದ್ ಮನ್ಸೂರ್ ಖಾನ್ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಈಗಾಗಲೇ ಪೊಲೀಸರಿಗೆ ಆತ ದುಬೈನಲ್ಲಿ ತನ್ನ ಇಬ್ಬರು ಪತ್ನಿಯರ ಜೊತೆ ಇರುವ ಮಾಹಿತಿ ಸಿಕ್ಕಿದೆ. ಆತನನ್ನ ಭಾರತಕ್ಕೆ ತರಬೇಕಾದರೆ ಕೆಲವೊಂದು ನಿಯಮಗಳನ್ನ ಅನುಸರಿಸಬೇಕಾಗುತ್ತೆ. ಹೀಗಾಗಿ ನಗರ ಪೊಲೀಸರು ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಲು ಸಿದ್ಧತೆ ಮಾಡಿದ್ದು, ಇದಕ್ಕೆ ನಿನ್ನೆ ಕೋರ್ಟ್‌ನಿಂದ ಅನುಮತಿ ಪಡೆದಿದ್ದಾರೆ.
ಐಎಂಎ ವಂಚನೆ ಪ್ರಕರಣ: ತನಿಖೆ ಆರಂಭಿಸಿದ ಇಡಿ, ಮನ್ಸೂರ್ ಪತ್ತೆಗೆ ರೆಡ್ ಕಾರ್ನರ್ ನೋಟಿಸ್ - undefined
ಐಎಂಎ ಕಂಪನಿಯ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ನಾಪತ್ತೆಯಾಗಿರುವ ಮಾಲೀಕ ಮೊಹಮದ್ ಮನ್ಸೂರ್ ಖಾನ್ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದು, ನಗರ ಪೊಲೀಸರು ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಲು ಕೋರ್ಟ್‌ನಿಂದ ಅನುಮತಿ ಪಡೆದಿದ್ದಾರೆ.
ಐಎಂಎ ವಂಚನೆ ಪ್ರಕರಣ
ಹಾಗೆಯೇ ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಈಗಾಗಲೇ ಪ್ರಕರಣದ ಮಾಹಿತಿಯನ್ನ ಸರ್ಕಾರ ರಚನೆ ಮಾಡಿರುವ ಎಸ್ಐಟಿ ಪೊಲೀಸರಿಗೆ ನೀಡಿದ್ದಾರೆ. ಇನ್ನು ನಗರ ಪೊಲೀಸರು ಇಂಟರ್ ಪೋಲ್ ಅಧಿಕಾರಿಗಳ ಜೊತೆ ಸಂಪರ್ಕ ಹೊಂದಿದ್ದು, ಅವರ ಮುಖಾಂತರ ರೆಡ್ ಕಾರ್ನರ್ ನೋಟೀಸ್ ಜಾರಿ ಮಾಡಲಿದ್ದಾರೆ.