ಬೆಂಗಳೂರು: ಚುನಾವಣೆಯಲ್ಲಿ ಸ್ಪರ್ಧಿಸುವಾಗ ಅಭ್ಯರ್ಥಿ ಅಫಿಡವಿಟ್ ನೀಡಿ ಶಿಕ್ಷಣ,ಸಾಲ, ಚರಸ್ತಿ ಸ್ಥಿರಾಸ್ತಿ ಬಗ್ಗೆ ತಿಳಿಸಬೇಕು. ಆದರೆ ಪ್ರಜ್ವಲ್ ರೇವಣ್ಣ ಇವೆಲ್ಲವನ್ನು ಬದಿಗೊತ್ತಿ ವಂಚಿಸಿದ್ದಾರೆ ಎಂದು ಮಾಜಿ ಸಚಿವ ಎ.ಮಂಜು ಆರೋಪಿಸಿದ್ದಾರೆ.
ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಚುನಾವಣೆಗೆ ಸ್ಪರ್ಧಿಸುವಾಗ ಅಫಿಡವಿಟ್ ನೀಡಿ ಶಿಕ್ಷಣ, ಸಾಲ, ಚರಸ್ತಿ ಸ್ಥಿರಾಸ್ತಿ ಬಗ್ಗೆ ತಿಳಿಸುವುದು ಧರ್ಮ. ಆದರೆ ಪ್ರಜ್ವಲ್ ರೇವಣ್ಣ ಇವೆಲ್ಲವನ್ನು ಬದಿಗೊತ್ತಿದ್ದಾರೆ. ಚುನಾವಣೆಗೆ ಸ್ಪರ್ಧಿಸಿದರೆ 5 ವರ್ಷ ರಿಟರ್ನ್ಸ್ ತೋರಿಸಬೇಕು. ಆದರೆ ಕೇವಲ ಒಂದು ವರ್ಷ ಅದಾಯ ತೆರಿಗೆ ತೋರಿಸಿದ್ದಾರೆ. ಉಳಿದೆಲ್ಲವೂ ನಾಟ್ ಫೈಲ್ ಎಂದು ತೋರಿಸಿದ್ದಾರೆ. ಕರ್ನಾಟಕ ಬ್ಯಾಂಕ್ ನಲ್ಲಿ ಅವರ ಬ್ಯಾಂಕ್ ಬ್ಯಾಲೆನ್ಸ್ 5,78,238 ಎಂದು ತೋರಿಸಿದ್ದಾರೆ. ಆದರೆ ನಮ್ಮ ಪ್ರಕಾರ 43,31,286 ರೂ.ಅಕೌಂಟ್ ನಲ್ಲಿದೆ ಎಂದು ಪ್ರಜ್ವಲ್ ರೇವಣ್ಣ ವಿರುದ್ಧ ಎ.ಮಂಜು ಆರೋಪ ಮಾಡಿದರು.
ಎರಡು ಕಂಪನಿಯ ಪಾಲುದಾರ ಪ್ರಜ್ವಲ್:
ಎಲ್ ಎಲ್ ಹಾಗೂ ಡ್ರೋಣ್ ಎಂಬ ಕಂಪನಿಗಳಲ್ಲಿ ಪ್ರಜ್ವಲ್ ಪಾಲುದಾರರಾಗಿದ್ದಾರೆ. ಶೇ 25/26 ರಷ್ಟು ಕಂಪನಿಯಲ್ಲಿ ಪಾಲಿದೆ. ಇದೆಲ್ಲವನ್ನೂ ಅಫಿಡವಿಟ್ ನಲ್ಲಿ ತಿಳಿಸಿಲ್ಲ. ಹೊಳೆನರಸೀಪುರದಲ್ಲಿ ತಂದೆ ರೇವಣ್ಣ ಪುತ್ರರಾದ ಸೂರಜ್ ಹಾಗೂ ಪ್ರಜ್ವಲ್ ಗೆ ಗಿಫ್ಟ್ ಕೊಟ್ಟಿದ್ದಾರೆ. ಆ ಗಿಫ್ಟ್ ನಿವೇಶನ ಅಂತ ಅಫಿಡವಿಟ್ ನಲ್ಲಿ ತೋರಿಸಿದ್ದಾರೆ. ಆದರೆ ವಾಸ್ತವವಾಗಿ ಅದು ಕನ್ವೆನ್ಶನ್ ಹಾಲ್. ಚೆನ್ನಾಂಬಿಕಾ ಕನ್ವೆಂಶನ್ ಹಾಲ್ ಅಂತ ಹೈವೈನಲ್ಲಿಯೇ ಇದೆ. ಸುಮಾರು ಐದಾರು ಕೋಟಿಯ ಬೆಲೆಬಾಳುವ ಕನ್ವೆನ್ಶನ್ ಹಾಲ್ ಇದು. ಕೋರ್ಟ್ ಕೂಡ ಡೆಮಾಲಿಶನ್ ಗೆ ಆದೇಶಿಸಿತ್ತು. ಆದರೆ ಅಧಿಕಾರ ದುರುಪಯೋಗ ಮಾಡಿ ಇಲ್ಲಿಯವರೆಗೆ ಉಳಿಸಿಕೊಂಡಿದ್ದಾರೆ ಎಂದು ದೂರಿದರು.
ಪ್ರಜ್ವಲ್ ರೇವಣ್ಣ ಅವರ ಅಕ್ರಮಗಳ ಕುರಿತು ಈಗಾಗಲೇ ಐಟಿ,ಇಡಿಗೆ ದೂರು ಸಲ್ಲಿಸಿದ್ದೇನೆ ಭೂಮಿ ಖರೀದಿಯಲ್ಲಿ ಸುಳ್ಳು ದಾಖಲೆ:
ನೆಲಮಂಗಲದ ಬಳಿ 12 ಎಕರೆ ಭೂಮಿ ಖರೀದಿಸಿದ್ದಾರೆ. ಬಾವಿಕೆರೆ ಎಂಬಲ್ಲಿ 12 ಎಕರೆ ಖರೀದಿಸಿದ್ದಾರೆ. ಆದರೆ ಮಾರುಕಟ್ಟೆ ಬೆಲೆಯನ್ನ ನಮೂದಿಸಿಲ್ಲ. ಅಲ್ಲಿಎಕರೆಗೆ ಎರಡೂವರೆ ಕೋಟಿ ಬೆಲೆಯಿದೆ. ಆದರೆ ಕೇವಲ 56 ಲಕ್ಷ ಮಾತ್ರ ತೋರಿಸಿದ್ದಾರೆ. ಬೇನಾಮಿ ಹೆಸರಿನಲ್ಲಿ 45 ಎಕರೆಗೆ ಬೇಲಿ ಹಾಕಿದ್ದಾರೆ. ಸರ್ಕಾರಿ ಖರಾಬು ಭೂಮಿಯನ್ನೂ ರಿಜಿಸ್ಟರ್ ಮಾಡಿಸಿಕೊಂಡಿದ್ದಾರೆ. ದಾಖಲೆ ಪ್ರಕಾರ ಪ್ರಜ್ವಲ್ ಖರೀದಿಸಿದ ಭೂಮಿ ಸರ್ವೆ ನಂಬರ್ ಸರ್ಕಾರಿ ಭೂಮಿ ಅಂತ ಈಗಲೂ ಇದೆ. ಆದರೆ ಇವರು ಖರೀದಿ ಮಾಡಿದ್ದೇವೆ ಅಂತ ತೋರಿಸಿದ್ದಾರೆ ದಾಖಲೆಗಳನ್ನು ಮಾತ್ರ ಮುಚ್ಚಿಡುತ್ತಿದ್ದಾರೆ. ಈ ಅಕ್ರಮಗಳ ಬಗ್ಗೆ ನಾಳೆ ಹೈಕೋರ್ಟ್ ಗೆ ಪ್ರಕರಣ ಸಲ್ಲಿಸುತ್ತೇನೆ. ಐಟಿ,ಇಡಿಗೂ ಅಕ್ರಮದ ಬಗ್ಗೆ ದೂರು ಸಲ್ಲಿಸಿದ್ದೇವೆ.ಅವರು ಶೀಘ್ರವಾಗಿ ಇದರ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.