ಕರ್ನಾಟಕ

karnataka

ETV Bharat / state

ಮೈತ್ರಿಗೆ ಒಪ್ಪಿಗೆ ಇಲ್ಲದೋರು ಈಗಲೇ ಪಕ್ಷ ಬಿಟ್ಟು ಹೋಗಲಿ: ಸಿದ್ದರಾಮಯ್ಯ - GTD

ಜೆಡಿಎಸ್ ಮುಖಂಡರಾದ ಹಾಗೂ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ 23 ಸಾವಿರ ಮತ ಪಡೆದಿದ್ದ ಹರೀಶ್ ಗೌಡ ಇಂದು ಕಾಂಗ್ರೆಸ್ ಸೇರ್ಪಡೆಯಾದರು.

ಜೆಡಿಎಸ್ ಮುಖಂಡ

By

Published : Apr 6, 2019, 5:02 PM IST

ಬೆಂಗಳೂರು:ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಸಮ್ಮುಖದಲ್ಲಿ ಮೈಸೂರಿನ ಚಾಮರಾಜ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿದ್ದ ಹರೀಶ್ ಗೌಡ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾದರು.

ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಕಾಂಗ್ರೆಸ್ ಪಕ್ಷದ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಮೈಸೂರು ನಗರ ಕಾಂಗ್ರೆಸ್ ಅಧ್ಯಕ್ಷ ಮೂರ್ತಿ, ಮೈಸೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿಜಯಕುಮಾರ್ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು. ದಿನೇಶ್‍ ಗುಂಡೂರಾವ್‍ ಅವರು ಪಕ್ಷದ ಶಾಲು ಹೊದೆಸಿ, ಬಾವುಟ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು.

ಜೆಡಿಎಸ್ ಮುಖಂಡರಾದ ಹಾಗೂ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ 23 ಸಾವಿರ ಮತ ಪಡೆದಿದ್ದ ಹರೀಶ್ ಗೌಡ ಇಂದು ಕಾಂಗ್ರೆಸ್ ಸೇರ್ಪಡೆಯಾದರು. ಹರೀಶ್ ಗೌಡ ಜೊತೆ ಅವರ ಕೆಲ ಬೆಂಬಲಿಗರೂ ಕಾಂಗ್ರೆಸ್ ಸೇರ್ಪಡೆಯಾದರು.

ಸಮಾರಂಭದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಮಾಜಿ ಸಿಎಂ ಸಿದ್ದರಾಮಯ್ಯ, ಮೈಸೂರು ಲೋಕಸಭಾ ಚುನಾವಣೆ ನಮ್ಮ ಪ್ರತಿಷ್ಠೆಯ ಚುನಾವಣೆ. ಜಿಲ್ಲೆಯಲ್ಲಿ ಸಣ್ಣ ಪುಟ್ಟ ಸಮಸ್ಯೆ ಇರೋದು ಸತ್ಯ. ಜಂಟಿಯಾಗಿ ನಾವು ಪ್ರಚಾರ ಮಾಡುತ್ತೇವೆ. ಕೆಳಹಂತದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯ ಇದೆ. ನಿನ್ನೆ ಸಚಿವ ಜಿ.ಟಿ.ದೇವೇಗೌಡ ಸಭೆಯಲ್ಲಿ ಯಾರೋ ಇಬ್ಬರು ಕಾಂಗ್ರೆಸ್​ಗೆ ಮತ ಹಾಕಲ್ಲ ಅಂದ್ರು. ಇದೇ ದೊಡ್ಡ ಸುದ್ದಿಯಾಗಿದೆ ಅಷ್ಟೇ. ಯಾರೋ ಒಬ್ಬರು- ಇಬ್ಬರು ಹೇಳಿದ ಅಭಿಪ್ರಾಯ ಮುಖ್ಯವಲ್ಲ. ಪಕ್ಷದ ವಿರುದ್ಧ ಕೆಲಸ ಮಾಡೋರಿಗೆ ಪಕ್ಷ ಬಿಟ್ಟು ಹೋಗಿ ಅನ್ನುತ್ತೇವೆ. ಶೇ. 99ರಷ್ಟು ನಾವು ಒಂದಾಗಿ ಕೆಲಸ ಮಾಡುತ್ತೇವೆ. ಮೈಸೂರು ಜಿಲ್ಲೆಯಲ್ಲಿ 40 ವರ್ಷದಿಂದ ಕೆಲಸ ಮಾಡಿಕೊಂಡು ಬಂದಿದ್ದೇನೆ. ಈಗಷ್ಟೇ ಜಿ.ಟಿ.ದೇವೇಗೌಡ ಜೊತೆ ದೂರವಾಣಿಯಲ್ಲಿ ಮಾತಾಡಿದೆ. ನಿನ್ನೆ ಸಭೆಯಲ್ಲಿ ನಡೆದ ಸಮಸ್ಯೆ ಬಗೆಹರಿಸಿದ್ದೇನೆ ಎಂದ್ರು. ಜಿ.ಟಿ.ದೇವೇಗೌಡರಿಗೂ ನನಗೂ ಸಾಕಷ್ಟು ವ್ಯತ್ಯಾಸ ಇತ್ತು. ಈಗ ನಾವು ಮಾತಾಡುತ್ತಿಲ್ಲವೇ? ಮೈತ್ರಿಯನ್ನ ವಿರೋಧ ಮಾಡುವವರು ಯಾರು ಪಕ್ಷದಲ್ಲಿ ಇರಬಾರದು. ದೇಶದ ಹಿತದೃಷ್ಟಿಯಿಂದ ಮೈತ್ರಿಯನ್ನ ಎಲ್ಲರೂ ಒಪ್ಪಿಕೊಳ್ಳಬೇಕು. ಮೈತ್ರಿಗೆ ಒಪ್ಪಿಗೆ ಇಲ್ಲದಿದ್ರೆ ಈಗಲೇ ಪಕ್ಷ ಬಿಟ್ಟು ಹೋಗಲಿ. ನಮ್ಮಲ್ಲಿ ಎಷ್ಟೇ ಭಿನ್ನಾಭಿಪ್ರಾಯ ಇದ್ದರೂ ನಾವೇ ಎಲ್ಲರೂ ಒಪ್ಪಿಕೊಂಡಿದ್ದೇವೆ. ಈ ಬಾರಿ ಮೈತ್ರಿ ಅಭ್ಯರ್ಥಿಯನ್ನ ಗೆಲ್ಲಿಸಿ, ಬಿಜೆಪಿ ಅಭ್ಯರ್ಥಿಯನ್ನ ಸೋಲಿಸುತ್ತೇವೆ ಎಂದರು.

ಕಾಂಗ್ರೆಸ್‍ ಸೇರ್ಪಡೆಯಾದ ಜೆಡಿಎಸ್ ಮಾಜಿ ನಾಯಕ ಹರೀಶ್‍ ಗೌಡ

ಸುಮಲತಾ ಕುರಿತು ಪ್ರಸ್ತಾಪ
ಸುಮಲತಾ ಅಂಬರೀಶ್ ಕಾಂಗ್ರೆಸ್, ಬಿಜೆಪಿ ಬೆಂಬಲಿತ ಅಭ್ಯರ್ಥಿ ಎಂಬ ಸಿಎಂ ಹೇಳಿಕೆ ವಿಚಾರ ಪ್ರಸ್ತಾಪಿಸಿ, ಕುಮಾರಸ್ವಾಮಿಯವರು ಏನ್ ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ. ಸುಮಲತಾ ಅಂಬರೀಶ್ ಪ್ರಚಾರಕ್ಕೆ ಹೋದ ಸಂದರ್ಭದಲ್ಲಿ ಯಾರೋ ಇಬ್ಬರು, ಮೂವರು ಕಾಂಗ್ರೆಸ್ ಕಾರ್ಯಕರ್ತರು ಹೋಗಿದ್ದಾರೆ. ಕಾಂಗ್ರೆಸ್ ಬಾವುಟ ಹಿಡಿದುಕೊಂಡಿದ್ದಾರೆ. ಎಲ್ಲ ಕಾಂಗ್ರೆಸ್ ಕಾರ್ಯಕರ್ತರು ಮೈತ್ರಿ ಅಭ್ಯರ್ಥಿ ಪರ ಕೆಲಸ ಮಾಡಬೇಕು. ಯಾರಿಗೆ ಇಷ್ಟ ಇಲ್ವೋ ಅವರು ಪಕ್ಷ ಬಿಟ್ಟು ಹೋಗಲಿ ಎಂದು ಮಂಡ್ಯ ರೆಬಲ್ ನಾಯಕರಿಗೆ ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.

ಹಳೇ ಮೈಸೂರು ಭಾಗದಲ್ಲಿ ಮೈತ್ರಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂಬ ಚೆಲುವರಾಯಸ್ವಾಮಿ ಹೇಳಿಕೆ ವಿಚಾರ ಮಾತನಾಡಿ, ಚೆಲುವರಾಯಸ್ವಾಮಿ ಏನ್ ಹೇಳಿಕೆ ಕೊಟ್ಟಿದ್ದಾರೆ ಗೊತ್ತಿಲ್ಲ. ಅವರನ್ನು ಕರೆಸಿ ಈಗ ಮಾತನಾಡುತ್ತೇನೆ. ಮಂಡ್ಯ ಜಿಲ್ಲಾ ಕಾಂಗ್ರೆಸ್‌ ನಾಯಕರ ಸಭೆಯನ್ನ ನಾಳೆ ಕರೆದಿದ್ದೇನೆ. ಮಂಡ್ಯ ಜಿಲ್ಲೆಯ ಪರಾಜಿತ ಅಭ್ಯರ್ಥಿಗಳ ಜೊತೆ ಸಭೆ ಮಾಡುತ್ತೇನೆ. ಸಣ್ಣಪುಟ್ಟ ವ್ಯತ್ಯಾಸ ಬಗೆಹರಿಸುತ್ತೇವೆ ಎಂದರು.

ಜಂಟಿ ಪ್ರಚಾರ
ನಾನು, ದೇವೇಗೌಡ್ರು ಜಂಟಿಯಾಗಿ ಪ್ರಚಾರ ಮಾಡುತ್ತೇವೆ. 10ರಂದು ಮೈಸೂರು, 11 ರಂದು ತುಮಕೂರು, 12ರಂದು ಮಂಡ್ಯದಲ್ಲಿ ಜಂಟಿ ಪ್ರಚಾರ ಮಾಡುತ್ತೇವೆ. ಬಳಿಕ ಬೇರೆ ಕ್ಷೇತ್ರಗಳಲ್ಲಿ ಪ್ರಚಾರ ಮಾಡುತ್ತೇವೆ. ಸಾಕಷ್ಟು ವರ್ಷಗಳಿಂದ ಮೈಸೂರಲ್ಲಿ ಜೆಡಿಎಸ್, ಕಾಂಗ್ರೆಸ್ ನಡುವೆಯೇ ಫೈಟ್ ಇರೋದು. ಹಾಗಾಗಿ ಮೈತ್ರಿ ಸಮಯದಲ್ಲೂ ಕೆಳ ಹಂತದಲ್ಲಿ ಕೆಲ‌ ಸಮಸ್ಯೆಗಳಿವೆ. ಹೀಗಾಗಿ ಕೆಲವರು ಕಾಂಗ್ರೆಸ್ ಜೊತೆಗಿನ ಮೈತ್ರಿ ವಿರೋಧ ಮಾಡುತ್ತಿದ್ದಾರೆ. ಹಾಗೆಯೇ ಕೆಲ ಕಾಂಗ್ರೆಸ್ಸಿನವರು ವಿರೋಧ ವ್ಯಕ್ತಡಿಸಿರ್ತಾರೆ. ಯಾರೋ ಕೆಲವರು ಹೀಗೆ ವಿರೋಧ ಮಾಡಿರ್ತಾರೆ. ಆದ್ರೆ ಬಹುತೇಕ ಉಭಯ ಪಕ್ಷಗಳ ನಾಯಕರು‌ ಹೊಂದಾಣಿಕೆಯಿಂದ ಹೋಗಲು ತೀರ್ಮಾನ ಮಾಡಿದ್ದಾರೆ ಎಂದರು.

20 ಸ್ಥಾನ ಪಕ್ಕಾ
ನಾವು ಜೆಡಿಎಸ್ ಜೊತೆಗಿನ ಮೈತ್ರಿಯೊಂದಿಗೆ ಬಿಜೆಪಿ ಅಭ್ಯರ್ಥಿಯನ್ನು ಈ ಬಾರಿ ಮೈಸೂರಲ್ಲಿ ಸೋಲಿಸ್ತೀವಿ. ಮೈಸೂರಲ್ಲಿ ಗೆಲ್ತೀವಿ. ರಾಜ್ಯದಲ್ಲಿ 20ಕ್ಕೂ ಹೆಚ್ಚು ಸ್ಥಾನ ಗೆಲ್ತೀವಿ ಎಂದರು.

ABOUT THE AUTHOR

...view details