ಕರ್ನಾಟಕ

karnataka

ETV Bharat / state

ನಾವಂದುಕೊಂಡಂತೆ ಕೆಲಸ ಆಗದಿರುವುದಕ್ಕೆ ಅಸಮಾಧಾನ ಇದೆ, ಆದ್ರೆ ಪಕ್ಷ ಬಿಡಲ್ಲ: ಎಂಟಿಬಿ - government

ನಾವಂದು ಕೊಂಡಂತೆ ಕೆಲಸ ಸರ್ಕಾರದಿಂದ ಆಗುತ್ತಿಲ್ಲ. ಅಸಮಾಧಾನವನ್ನು ನಮ್ಮ ನಾಯಕರಲ್ಲಿ ಹೇಳಿದ್ದೇವೆ. ಅದನ್ನು ಸರಿಪಡಿಸುವ ಭರವಸೆ ನೀಡಿದ್ದಾರೆ ಎಂದು ಎಂಟಿಬಿ ನಾಗರಾಜ್ ಹೇಳಿದ್ದಾರೆ.

ಎಂಟಿಬಿ

By

Published : Jul 8, 2019, 5:24 PM IST

ಬೆಂಗಳೂರು:ಸರ್ಕಾರದಲ್ಲಿ ನಾವಂದುಕೊಂಡಂತೆ ಕೆಲಸ ಆಗುತ್ತಿಲ್ಲ ಎಂಬ ಅಸಮಾಧಾನ ಇರುವುದು ನಿಜ ಎಂದು ಸಚಿವ ಎಂಟಿಬಿ ನಾಗರಾಜ್ ಹೇಳಿದ್ದಾರೆ.

ಎಂಟಿಬಿ ನಾಗರಾಜ್​ ಪ್ರತಿಕ್ರಿಯೆ
ಡಿಸಿಎಂ ಡಾ. ಜಿ.ಪರಮೇಶ್ವರ್ ಅವರ ಸದಾಶಿವನಗರದ ನಿವಾಸದ ಬಳಿ ಮಾತನಾಡಿದ ಅವರು, ಇರುವ ಅಸಮಾಧಾನವನ್ನು ನಮ್ಮ ನಾಯಕರಲ್ಲಿ ಹೇಳಿದ್ದೇವೆ. ಅದನ್ನೆಲ್ಲ ಸರಿಮಾಡಿಕೊಂಡು ಹೋಗೋಣ ಎಂದು ಹೇಳಿದ್ದಾರೆ. ನನಗೆ ಖಾಸಗಿ ಕೆಲಸವಿದ್ದು, ಹೋಗಬೇಕಾದರೆ ಮುಂಬೈಗೆ ಹೋಗುತ್ತೇನೆ. ಅತೃಪ್ತಿ ಅಥವಾ ಬಿಜೆಪಿ ಆಹ್ವಾನದ ಮೇರೆಗೆ ಹೋಗುವುದಿಲ್ಲ. ಈಗ ಹೋಗಿರುವವರ ಜೊತೆ ನಾನು ಸೇರಲ್ಲ. ನಾನು ಬೆಂಗಳೂರಿನಲ್ಲಿಯೇ ಇರುತ್ತೇನೆ. ಯಾವುದೇ ಕಾರಣಕ್ಕೂ ಮುಂಬೈಗೆ ಹೋಗಲ್ಲ. ಹೋಗುವುದಾದರೆ ಮಾಧ್ಯಮದವರಿಗೆ ತಿಳಿಸಿಯೇ ತೆರಳುತ್ತೇನೆ. ನನಗೆ ಬಿಜೆಪಿಗೆ ಹೋಗುವ ಮನಸ್ಸಿಲ್ಲ ಎಂದರು.
ರಾಜೀನಾಮೆ ನೀಡಿದ್ದೇನೆ:ರಾಜೀನಾಮೆ ಕೊಟ್ಟ ನಂತರ ಸಚಿವ ಸ್ಥಾನವನ್ನು ಮತ್ತೊಮ್ಮೆ ಕೇಳುವುದು ಬಿಡುವುದು ನಮ್ಮ ಹಕ್ಕು. ಕೊಡುವುದು ಪಕ್ಷಕ್ಕೆ ಹಾಗೂ ಹೈಕಮಾಂಡ್​ಗೆ ಬಿಟ್ಟ ವಿಚಾರ. ಆಪರೇಷನ್ ಮಾಡಲು ಬಿಜೆಪಿಯವರು ರೆಡಿ ಇದ್ದಾರೆ. ಆದರೆ ಎಂಟಿಬಿ ನಾಗರಾಜ್ ಪೇಷೆಂಟ್​​ ಅಲ್ಲ. ನಾನು ಹೆಲ್ದೀ ಮ್ಯಾನ್. ನಾನು ಬಿಜೆಪಿಗೆ ಹೋಗುವುದಿಲ್ಲ ಅನ್ನೋದು ಗ್ಯಾರಂಟಿ. ಕಾಂಗ್ರೆಸ್​ನಿಂದ ಬಿಜೆಪಿಗೆ ಬರುವವರಿಗೆ ರಿಲೀಸ್ ಪ್ಯಾಕೇಜ್ ಇದೆ ಎಂದು ಹೇಳಲಾಗುತ್ತಿದ್ದು, ಆ ವಿಚಾರದಲ್ಲಿ ನನ್ನ ಹೆಸರನ್ನು ಬಳಸಿಕೊಳ್ಳಲಾಗುತ್ತಿದೆ. ಆದರೆ ನಾನು ಅದರಲ್ಲಿ ಇಲ್ಲ ಎಂದರು.

ABOUT THE AUTHOR

...view details